ಆನ್‌ಲೈನ್ ತರಗತಿಗಳು
| ನೇರ ತರಗತಿಗಳು | ಟೆಸ್ಟ್ ಸರಣಿ | ಅಂಚೆ ಪ್ಯಾಕೇಜ್ | 📞 9141066148
ಕರ್ನಾಟಕ ರಾಜ್ಯ ಪ್ರಶಸ್ತಿಗಳು ಮತ್ತು ಪುರಸ್ಕೃತರು

ಕರ್ನಾಟಕ ರಾಜ್ಯ ಪ್ರಶಸ್ತಿಗಳು ಮತ್ತು ಪುರಸ್ಕೃತರು

ಕರ್ನಾಟಕ ರತ್ನ ಪ್ರಶಸ್ತಿ

ವರ್ಷಪುರಸ್ಕೃತರು
1992ಡಾ. ರಾಜ್ ಕುಮಾರ್
1993ಸೊನಲ್ ಮಂಸಿಂಗ್
1994ಕುವೆಂಪು
2000ಡಾ. ವಿ. ಎಸ್. ನರಸಿಂಹಾಚಾರ್ಯ
2009ಡಾ. ಎಸ್. ಎನ್. ನಾರಾಯಣ
2019ಡಾ. ಎಸ್. ಎಲ್. ಭೈರಪ್ಪ
2022ಪುನೀತ್ ರಾಜ್ ಕುಮಾರ್

ರಾಜ್ಯೋತ್ಸವ ಪ್ರಶಸ್ತಿಗಳು (Rajyotsava Awards)

ಪುರಸ್ಕೃತರ ಹೆಸರು (ಕ್ಷೇತ್ರ)ವರ್ಷ
ಆರ್. ನಾಗೇಂದ್ರರಾವ್ (ನಾಟಕ / ಚಲನಚಿತ್ರ)1969
ಬಿ. ಆರ್. ಪಂತುಲು (ನಾಟಕ / ಚಲನಚಿತ್ರ)1970
ಗಿರೀಶ್ ಕಾರ್ನಾಡ್ (ನಾಟಕ / ಚಲನಚಿತ್ರ)1971
ಏಣಗಿ ಬಾಳಪ್ಪ (ನಾಟಕ)1973
ಡಾ. ಎಚ್. ಕೆ. ರಂಗನಾಥ (ನಾಟಕ)1981
ಪರ್ವತವಾಣಿ (ನಾಟಕ)1983
ಮಾಸ್ಟರ್ ಹಿರಣ್ಣಯ್ಯ (ನಾಟಕ)1984
ಚಿಂದೋಡಿ ಲೀಲಾ (ರಂಗಭೂಮಿ)1985
ಜಿ. ಬಿ. ಜೋಷಿ (ನಾಟಕ)1986
ಬಿ. ಜಯಮ್ಮ (ನಾಟಕ)1986
ಆರ್. ನಾಗರತ್ನಮ್ಮ (ನಾಟಕ)1986
ಡಾ. ಚಂದ್ರಶೇಖರ ಕಂಬಾರ (ನಾಟಕ)1988
ಕೆ. ವಿ. ಸುಬ್ಬಣ್ಣ (ನಾಟಕ)1989
ಚಿಂದೋಡಿ ಕರಿಬಸವರಾಜ್ (ರಂಗಭೂಮಿ)1990
ಬಳ್ಳಾರಿ ಲಲಿತಮ್ಮ (ರಂಗಭೂಮಿ)1991
ಎಚ್. ದ್ಯಾವಪ್ಪ ಮಾಸ್ತರ (ರಂಗಭೂಮಿ)1991
ರಹಿಮಾನವ್ವ ಕಲ್ಮನಿ (ರಂಗಭೂಮಿ)1991
ಪ್ರೊ. ಬಿ. ಚಂದ್ರಶೇಖರ್ (ರಂಗಭೂಮಿ)1991
ಕುಗ್ಗೆ ಹುಚ್ಚಪ್ಪ ಮಾಸ್ತರ (ರಂಗಭೂಮಿ)1991
ಅನಂತರಾವ್ ಜೋಷಿ (ರಂಗಭೂಮಿ)1991
ದತ್ತೋಬರಾವ್ ಒಡೆಯರ್ (ರಂಗಭೂಮಿ)1991
ರಾಮರಾವ್ ಒಡೆಯರ್ (ರಂಗಭೂಮಿ)1991
ರಾಜಾನಂದ (ರಂಗಭೂಮಿ)1991
ಶಂಕರಪ್ಪ ಬಸಪ್ಪ ಮನಹಳ್ಳಿ (ರಂಗಭೂಮಿ)1992
ಬಿ. ಬೋರೇಗೌಡ (ನಾಟಕ)1992
ಎಚ್. ಟಿ. ಅರಸ್ (ನಾಟಕ)1992
ಚಿಂದೋಡಿ ಶಾಂತರಾಜ್ (ನಾಟಕ)1992
ಎಂ. ಕೆ. ಬಸವಣ್ಣೆಪ್ಪ (ನಾಟಕ)1992
ಎಚ್. ಎನ್. ಹೂಗಾರ್ (ರಂಗಭೂಮಿ)1992
ಎಂ. ಎ. ರಾಮಚಂದ್ರಪ್ಪ (ನಾಟಕ)1992
ಜುಬೇದಾಬಾಯಿ (ರಂಗಭೂಮಿ)1992
ಬಿ. ರಾಜಣ್ಣ ಬಿನ್ ಬಾಳೇಗೌಡ (ರಂಗಭೂಮಿ)1992
ಎ. ಎನ್. ಶೇಷಾಚಾರ್ (ನಾಟಕ)1992
ಚನ್ನಬಸವಯ್ಯ ನೂರುಂದಯ್ಯ ಹಿರೇಮಠ (ನಾಟಕ)1992
ವೀರಭದ್ರಪ್ಪ (ರಂಗಭೂಮಿ)1992
ಸುಬ್ಬಾ ದೆಶಭಂಡಾರಿ (ರಂಗಭೂಮಿ)1992
ಭರಮಪ್ಪ ನಿಂಗಪ್ಪ ಬಾಳೂರ (ನಾಟಕ)1992
ಡಾ. ಸಿಂಧುವಳ್ಳಿ ಅನಂತಮೂರ್ತಿ (ನಾಟಕ)1993
ಬಿ. ಎನ್. ಚಿನ್ನಪ್ಪ (ನಾಟಕ)1994
ಕೆ. ಎನ್. ಟೇಲರ್ (ರಂಗಭೂಮಿ)1994
ಸಿ. ಜಿ. ಕೃಷ್ಣಸ್ವಾಮಿ (ನಾಟಕ)1995
ಪಿ. ಬಿ. ಧುತ್ತರಗಿ (ರಂಗಭೂಮಿ)1996
ಸುಭದ್ರಮ್ಮ ಮನ್ಸೂರ್ (ರಂಗಭೂಮಿ)1996
ಬಿ. ಆರ್. ಅರಿಷಣಗೋಡಿ (ರಂಗಭೂಮಿ)1997
ಎಚ್. ಕೆ. ಯೋಗಾನರಸಿಂಹ (ರಂಗಭೂಮಿ)1997
ಗುಡಿಗೇರಿ ಬಸವರಾಜು (ರಂಗಭೂಮಿ)1998
ಆರ್. ನಾಗೇಶ್ (ರಂಗಭೂಮಿ)1998
ಎಸ್. ವಿ. ಪಾಟೀಲ್ (ನಾಟಕ)1998
ಮುನಿಸ್ವಾಮಪ್ಪ (ನಾಟಕ)1998
ಶ್ರೀನಿವಾಸ ತಾವರಗೇರಿ (ನಾಟಕ)1998
ಬಿ. ಎನ್. ನಾಣಿ (ರಂಗಭೂಮಿ)1999
ಬಿ. ವಿ. ಮಾಲತಮ್ಮ (ರಂಗಭೂಮಿ)1999
ಎ. ಎಸ್. ಮೂರ್ತಿ (ರಂಗಭೂಮಿ)1999
ಬಿ. ಎಂ. ಸೀತಾರಾಮರಾಜು (ರಂಗಭೂಮಿ)1999
ಶ್ರೀನಿವಾಸ ಜಿ. ಕಪ್ಪಣ್ಣ (ರಂಗಭೂಮಿ)1999
ಬಿ. ಕುಮಾರಸ್ವಾಮಿ (ನಾಟಕ)2000
ಎನ್. ಎಂ. ಖೇಡಗಿ (ನಾಟಕ)2000
ಸಿ. ಆರ್. ಸಿಂಹ (ನಾಟಕ)2000
ಚನ್ನಬಸಪ್ಪ ಜಿ.ವಿ. (ರಂಗಭೂಮಿ)2001
ಕೆ. ನಾಗರತ್ನ (ರಂಗಭೂಮಿ)2001
ಬಷೀರ್ (ರಂಗಭೂಮಿ)2001
ಬಸವಲಿಂಗಯ್ಯ (ರಂಗಭೂಮಿ)2001
ಲಲಿತಾ ರಾಚಪ್ಪ ಪಾತ್ರೋಟ (ರಂಗಭೂಮಿ)2001
ಬಿ. ಜಯಶ್ರೀ (ರಂಗಭೂಮಿ)2002
ಜಿ. ಮುನಿರೆಡ್ಡಿ (ರಂಗಭೂಮಿ)2002
ಪಿ. ವಜ್ರಪ್ಪ (ರಂಗಭೂಮಿ)2002
ಶಾಂತಮ್ಮ ಪತ್ತಾರ (ರಂಗಭೂಮಿ)2002
ಟಿ. ಎಸ್. ನಾಗಾಭರಣ (ರಂಗಭೂಮಿ)2003
ಪ್ರೇಮಾಕಾರಂತ (ರಂಗಭೂಮಿ)2003
ಎಲ್. ಕೃಷ್ಣಪ್ಪ (ರಂಗಭೂಮಿ)2003
ಪಿ. ಪದ್ಮ (ರಂಗಭೂಮಿ)2003
ದೇವಪುತ್ರ (ರಂಗಭೂಮಿ)2003
ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ (ನಾಟಕ)2004
ರಾಜಶೇಖರ ಕದಂಬ (ನಾಟಕ)2004
ಪ್ರಸನ್ನ (ನಾಟಕ)2004
ಪ್ರಭಾಕರ ಸಾತಕೇಡ (ನಾಟಕ)2004
ಪ್ರತಿಭಾ ನಾರಾಯಣ (ನಾಟಕ)2004
ಹರಿಜನ ಪದ್ಮಮ್ಮ (ನಾಟಕ)2004
ಪರಮಶಿವನ್ ಆರ್. (ರಂಗಭೂಮಿ)2005
ರಂಗನಾಯಕಮ್ಮ (ರಂಗಭೂಮಿ)2005
ಪ್ರೇಮಾ ಬಾದಾಮಿ (ರಂಗಭೂಮಿ)2005
ಆನಂದ ಗಾಣಿಗ (ರಂಗಭೂಮಿ)2005
ಜಿ. ಎನ್. ದೇಶಪಾಂಡೆ (ರಂಗಭೂಮಿ)2005
ಸಂಪಂಗಿ ಎಂ. (ರಂಗಭೂಮಿ)2005
ಎಸ್. ಶಾಮೂರ್ತಿ (ರಂಗಭೂಮಿ)2005
ಲಿಂಗದೇವರು ಹಳೇಮನೆ (ರಂಗಭೂಮಿ)2005
ಟಿ. ಆರ್. ರಾಜಗೋಪಾಲ್ (ರಂಗಭೂಮಿ)2005
ಚಂದ್ರಕಾಂತ ಖಂಡೋಜಿ (ನಾಟಕ)2005
ಸುಮತಿ ನವಲೆ ಹಿರೇಮಠ (ನಾಟಕ)2005
ಪ್ರೇಮಾ ಗುಳೇದಗುಡ್ಡ (ನಾಟಕ)2005
ಅನ್ನಪೂರ್ಣ ಸಾಗರ (ನಾಟಕ)2005
ಸುಮಿತ್ರಮ್ಮ (ರಂಗಭೂಮಿ)2006
ಟಿ. ಎಸ್. ಲೋಹಿತಾಶ್ವ (ರಂಗಭೂಮಿ)2006
ಆರುಂಧತಿ ನಾಗ್ (ರಂಗಭೂಮಿ)2006
ಶ್ರೀಪತಿ ಮಂಜನಬೈಲು (ರಂಗಭೂಮಿ)2006
ಲಾಡ್ ಸಾಹೇಬ ಅಮೀನ ಗಢ (ರಂಗಭೂಮಿ)2007
ಸರೋಜಮ್ಮ ಪಿ. ಧುತ್ತರಗಿ (ರಂಗಭೂಮಿ)2007
ವಿ. ರಾಮಮೂರ್ತಿ (ರಂಗಭೂಮಿ)2008
ವಾಣಿ ಸರಸ್ವತಿ ನಾಯ್ಡು (ರಂಗಭೂಮಿ)2008
ಬಿ. ಎಂ. ಕೃಷ್ಣಗೌಡ (ರಂಗಭೂಮಿ)2008
ಮಾಲತಿ ಸುಧೀರ್ (ರಂಗಭೂಮಿ)2008
ಬೈರೇಗೌಡ ಮರಿಸಿದ್ದಯ್ಯ (ರಂಗಭೂಮಿ)2008
ಅಶೋಕ ಬಾದರದಿನ್ನಿ (ನಾಟಕ)2008
ಎಂ.ಎಸ್. ಉಮೇಶ್ (ರಂಗಭೂಮಿ)2010
ಯಶವಂತ ಸರದೇಶಪಾಂಡೆ (ರಂಗಭೂಮಿ)2010
ಕಮಲವ್ವ ರಾಮಪ್ಪ ಜಾನಪ್ಪಗೋಳ್ (ರಂಗಭೂಮಿ)2010
ಶಿವನಗೌಡ ಕೋಟಿ (ರಂಗಭೂಮಿ)2010
ಪ್ರೊ. ಎಸ್. ಪಂಚಾಕ್ಷರಿ (ರಂಗಭೂಮಿ)2010
ಗೀತಾರಾಣಿ (ರಂಗಭೂಮಿ)2010
ರಂಗಯ್ಯ (ರಂಗಭೂಮಿ)2010
ಅಶೋಕ ಬಸ್ತಿ (ರಂಗಭೂಮಿ)2010
ಮೈಲಾರಪ್ಪ ಬಿನ್ ಮಲ್ಲಯ್ಯ (ರಂಗಭೂಮಿ)2010
ದೇವದಾಸ ಕಾಪಿಕಾಡ್ (ರಂಗಭೂಮಿ)2010
ಮಲ್ಲಿಕಸಾಬ ದಬಲಾಸಾಬ್ ಹನಗಂಡಿ (ರಂಗಭೂಮಿ)2010
ಕೆ. ನಾಗರಾಜ್ (ರಂಗಭೂಮಿ)2011
ರೇಣುಕಾ ದುರ್ಗಪ್ಪ ಹರಿಜನ ಮಾಲಾಪೂರ (ರಂಗಭೂಮಿ)2011
ಚಿಂದೋಡಿ ಬಂಗಾರೇಶ್ (ರಂಗಭೂಮಿ)2012
ಎನ್.ಎಸ್. ಮೂರ್ತಿ (ರಂಗಭೂಮಿ)2012
ಆಲ್ತಾಫ (ರಂಗಭೂಮಿ)2012
ಡಾ. ಎಂ.ಕೆ. ಸುಂದರರಾಜ್ (ರಂಗಭೂಮಿ)2012
ಗಜಾನನ ಹರಿಮಹಾಲೆ (ರಂಗಭೂಮಿ)2013
ಹೆಚ್.ವಿ. ವೆಂಕಟಸುಬ್ಬಯ್ಯ (ರಂಗಭೂಮಿ)2013
ನ. ರತ್ನ (ರಂಗಭೂಮಿ)2013
ಫ್ಲೋರಿನಾ ಬಾಯಿ (ರಂಗಭೂಮಿ)2013
ಶಶಿಧರ ಅಡಪ (ರಂಗಭೂಮಿ)2013
ಕಂಠಿ ಹನುಮಂತರಾಯ (ರಂಗಭೂಮಿ)2014
ಅಬ್ದುಲ್ ಸಾಬ್ ಅಣ್ಣಿಗೇರಿ (ರಂಗಭೂಮಿ)2014
ತೊಟ್ಟವಾಡಿ ನಂಜುಂಡಸ್ವಾಮಿ (ರಂಗಭೂಮಿ)2014
ಜೆ. ಲೋಕೇಶ್ (ರಂಗಭೂಮಿ)2014
ಶಿವಕುಮಾರಿ ಬಿ (ರಂಗಭೂಮಿ)2014
ಹೆಚ್.ಜಿ. ಸೋಮಶೇಖರ ರಾವ್ (ರಂಗಭೂಮಿ)2015
ಕೆ. ಕರಿಯಪ್ಪ ಮಾಸ್ತರ್ (ರಂಗಭೂಮಿ)2015
ಮುಮ್ತಾಜ್ ಬೇಗಂ (ರಂಗಭೂಮಿ)2015
ಸಂಜೀವಪ್ಪ ಗಬ್ಬೂರು (ರಂಗಭೂಮಿ)2015
ವೀಣಾ ಆದವಾನಿ (ರಂಗಭೂಮಿ)2015
ಮೌಲಾಸಾಬ್ ಇಮಾಂಸಾಬ್ ನದಾಫ್ (ರಂಗಭೂಮಿ)2016
ಟಿ.ಹೆಚ್. ಹೇಮಲತಾ (ರಂಗಭೂಮಿ)2016
ರಾಮೇಶ್ವರಿ ವರ್ಮಾ (ರಂಗಭೂಮಿ)2016
ಉಮಾರಾಣಿ ಬಾರೀಗಿಡದ (ರಂಗಭೂಮಿ)2016
ಚಂದ್ರಕುಮಾರ್ ಸಿಂಗ್ (ರಂಗಭೂಮಿ)2016
ಬೇಲೂರು ಕೃಷ್ಣಮೂರ್ತಿ (ರಂಗಭೂಮಿ)2017
ಗುಡೂರು ಮಮತ (ರಂಗಭೂಮಿ)2017
ಸಿ.ಕೆ. ಗುಂಡಣ್ಣ (ರಂಗಭೂಮಿ)2017
ಶಿವಪ್ಪ ಭರಮಪ್ಪ (ರಂಗಭೂಮಿ)2017
ವರಲಕ್ಷ್ಮೀ (ರಂಗಭೂಮಿ)2017
ಎನ್.ವೈ. ಪುಟ್ಟಣ್ಣಯ್ಯ (ರಂಗಭೂಮಿ)2017
ಎಸ್.ಎನ್. ರಂಗಸ್ವಾಮಿ (ರಂಗಭೂಮಿ)2018
ಪುಟ್ಟಸ್ವಾಮಿ (ರಂಗಭೂಮಿ)2018
ಪಂಪಣ್ಣ ಕೋಗಳಿ (ರಂಗಭೂಮಿ)2018
ಪರಶುರಾಮ ಸಿದ್ಧಿ (ರಂಗಭೂಮಿ)2019
ಪಾಲ್ ಸುದರ್ಶನ್ (ರಂಗಭೂಮಿ)2019
ಭಾರ್ಗವಿ ನಾರಾಯಣ (ರಂಗಭೂಮಿ)2019
ಹೂಲಿ ಶೇಖರ್ (ರಂಗಭೂಮಿ)2019
ಎಲ್. ಶಿವಲಿಂಗಯ್ಯ (ರಂಗಭೂಮಿ)2019
ಡಾ. ಹೆಚ್.ಕೆ. ರಾಮನಾಥ (ರಂಗಭೂಮಿ)2019
ಅನುಸೂಯಮ್ಮ (ರಂಗಭೂಮಿ)2020
ಹೆಚ್. ಷಡಾಕ್ಷರಪ್ಪ ಹೊಸಮನಿ (ರಂಗಭೂಮಿ)2020
ತಿಪ್ಪೇಸ್ವಾಮಿ ಆರ್ (ರಂಗಭೂಮಿ)2020
ಫಕೀರಪ್ಪ ರಾಮಪ್ಪ ಕೊಂಡಾಯಿ (ರಂಗಭೂಮಿ)2021
ಪ್ರಕಾಶ್ ಬೆಳವಾಡಿ (ರಂಗಭೂಮಿ)2021
ರಮೇಶ್ ಗೌಡ ಪಾಟೀಲ್ (ರಂಗಭೂಮಿ)2021
ಎನ್. ಮಲ್ಲೇಶಯ್ಯ (ರಂಗಭೂಮಿ)2021
ಸಾವಿತ್ರಿ ಗೌಡರ್ (ರಂಗಭೂಮಿ)2021
ತಿಪ್ಪಣ್ಣ ಹೆಳವರ್ (ರಂಗಭೂಮಿ)2022
ಲಲಿತಾಬಾಯಿ ಚನ್ನದಾಸರ್ (ರಂಗಭೂಮಿ)2022
ಗುರುನಾಥ್ ಹೂಗಾರ್ (ರಂಗಭೂಮಿ)2022
ಪ್ರಭಾಕರ ಜೋಶಿ (ರಂಗಭೂಮಿ)2022
ಶ್ರೀಶೈಲ ಹುದ್ದಾರ್ (ರಂಗಭೂಮಿ)2022
ಎ.ಜಿ. ಚಿದಂಬರ್ ರಾವ್ ಜಂಬೆ (ರಂಗಭೂಮಿ)2023
ಪಿ. ಗಂಗಾಧರ ಸ್ವಾಮಿ (ರಂಗಭೂಮಿ)2023
ಹೆಚ್.ಬಿ. ಸರೋಜಮ್ಮ (ರಂಗಭೂಮಿ)2023
ತಯ್ಯಬಖಾನ್ ಎಂ. ಇನಾಮದಾರ (ರಂಗಭೂಮಿ)2023
ಡಾ. ವಿಶ್ವನಾಥ್ ವಂಶಾಕೃತ ಮಠ (ರಂಗಭೂಮಿ)2023
ಪಿ. ತಿಪ್ಪೇಸ್ವಾಮಿ (ರಂಗಭೂಮಿ)2023
ಸರಸ್ವತಿ ಜುಲೈಕ ಬೇಗಂ, ಯಾದಗಿರಿ (ರಂಗಭೂಮಿ)2024
ಓಬಳೇಶ್ ಹೆಚ್.ಬಿ., ಚಿತ್ರದುರ್ಗ (ರಂಗಭೂಮಿ)2024
ಭಾಗ್ಯಶ್ರೀ ರವಿ, ಕೋಲಾರ (ರಂಗಭೂಮಿ)2024
ಡಿ. ರಾಮು, ಮೈಸೂರು (ರಂಗಭೂಮಿ)2024
ಜನಾರ್ಧನ್ ಹೆಚ್ (ಜನ್ನಿ), ಮೈಸೂರು (ರಂಗಭೂಮಿ)2024
ಹನುಮಾನದಾಸ ವಿ. ಪವಾರ (ಢಗಳ ಚಂದ), ಬಾಗಲಕೋಟೆ (ರಂಗಭೂಮಿ)2024

ಬಸವ ಪ್ರಶಸ್ತಿ

ಸಮಾಜ ಸೇವೆಯಲ್ಲಿ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡವರಿಗೆ ಮಹಾನ್ ಮಾನವತಾವಾದಿ ಬಸವಣ್ಣನವರ ಹೆಸರಿನಲ್ಲಿ `ಬಸವ ಪುರಸ್ಕಾರ' ಎಂಬ ರಾಷ್ಟ್ರೀಯ ಪುರಸ್ಕಾರ ನೀಡಿ ಗೌರವಿಸಲಾಗುವುದು. ಪ್ರಶಸ್ತಿಯು ಫಲಕ, ಶಾಲು, ಹಾರ ಹಾಗೂ ಹತ್ತು ಲಕ್ಷಗಳ ನಗದನ್ನು ಒಳಗೊಂಡಿರುತ್ತದೆ. ಇದುವರೆವಿಗೆ ಈ ಪ್ರಶಸ್ತಿಯನ್ನು ಕೆಳಕಂಡ ಮಹನೀಯರು ಪಡೆದಿರುತ್ತಾರೆ.

ಹೆಸರು ವರ್ಷ
ಶ್ರೀಮತಿ ಸರಸ್ವತಿ ಗೋರಾ2000
ಡಾ. ಎಚ್. ನರಸಿಂಹಯ್ಯ2001
ಡಾ. ಪುಟ್ಟರಾಜ ಗವಾಯಿ 2002
ಶ್ರೀಮತಿ ಸುಶೀಲಮ್ಮ ಎಸ್. ಜಿ2004
ಪ್ರೊ. ಎಲ್. ಬಸವರಾಜು2005
ಡಾ. ಎ.ಪಿ.ಜೆ. ಅಬ್ದುಲ್ ಕಲಾಂ 2006
ಶ್ರೀ ಶ್ರೀ ಶ್ರೀ ಶಿವಕುಮಾರ್ ಸ್ವಾಮಿಗಳು 2007
ಶ್ರೀ ಮ.ನಿ.ಪ್ರ. ಡಾ. ಮಹಾಂತಪ್ಪಗಳು, ಚಿತ್ತರಗಿ2008
ತೋಂಟದ ಡಾ. ಸಿದ್ದಲಿಂಗ ಮಹಾಸ್ವಾಮಿಗಳು, ಗದಗ2009
ನಾಡೋಜ ದೇ. ಜವರೇಗೌಡ, ಮೈಸೂರು2010
ಶ್ರೀ ರಮ್ಜಾನ್ ದರ್ಗಾ, ಬಿಜಾಪುರ2011
ಡಾ. ಯು.ಆರ್. ಅನಂತಮೂರ್ತಿ, ಬೆಂಗಳೂರು 2012
ಡಾ: ಎಂ.ಎಂ. ಕಲಬುರ್ಗಿ, ಧಾರವಾಡ 2013
ಶ್ರೀ ವೀರಭದ್ರಪ್ಪ ಚನ್ನಮಲ್ಲ ಸ್ವಾಮೀಜಿ, ಬೆಂಗಳೂರು2014
ಡಾ. ಗೊ.ರು. ಚನ್ನಬಸಪ್ಪ, ಬೆಂಗಳೂರು2015
ಶ್ರೀಮತಿ ಸಿಂಧೂತಾಯಿ ಸಪ್ಕಾಳ್, ಪುಣೆ2016
ಡಾ. ಪಾಟೀಲ ಪುಟ್ಟಪ್ಪ, ಧಾರವಾಡ 2017
ಶ್ರೀ ಹೆಚ್ ಎಸ್ ದೊರೆಸ್ವಾಮಿ, ಬೆಂಗಳೂರು2018
ಶ್ರೀ ಬಸವ ಲಿಂಗಪಟ್ಟದೇವರು, ಭಾಲ್ಕಿ2019
ಭಿಕು ರಾಮ್‌‌ಜಿ ಇದಾತೆ ರತ್ನಗಿರಿ, ಮಹಾರಾಷ್ಟ್ರ2020
ಡಾ. ವೀರಣ್ಣ ರಾಜೂರು, ಧಾರವಾಡ2021
ಶ್ರೀ ಆನಂದ್‌ ತೆಲ್ತುಂಬಡೆ, ಮಹಾರಾಷ್ಟ್ರ2022
ಡಾ. ಎನ್‌. ಜಿ. ಮಹದೇವಪ್ಪ, ಧಾರವಾಡ2023

ಟಿ. ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿ

ಪಿಟೀಲು ನುಡಿಸುವುದರಲ್ಲಿ ಅಪೂರ್ವ ಸಾಧನೆಗೈದು ಪಿಟೀಲು ಚೌಡಯ್ಯ ಎಂದೇ ಖ್ಯಾತಿಗಳಿಸಿದ್ದ ಕರ್ನಾಟಕದ ಹೆಮ್ಮೆಯ ಶ್ರೇಷ್ಠ ಪಿಟೀಲು ವಾದಕರಾದ ಚೌಡಯ್ಯನವರ ಹೆಸರಿನಲ್ಲಿ ಸ್ಥಾಪಿಸಲಾಗಿರುವ ರಾಷ್ಟ್ರಮಟ್ಟದ ಪ್ರಶಸ್ತಿ ಇದಾಗಿದೆ. ವಾದ್ಯ ಸಂಗೀತದಲ್ಲಿ (ಕರ್ನಾಟಕ ಮತ್ತು ಹಿಂದೂಸ್ಥಾನಿ) ಅನುಪಮ ಸೇವೆ ಸಲ್ಲಿಸಿರುವ ರಾಷ್ಟ್ರಮಟ್ಟದ ಹಿರಿಯ ಕಲಾವಿದರಿಗೆ ನೀಡಲಾಗುವ ಈ ಪ್ರಶಸ್ತಿಯು ಪ್ರಶಸ್ತಿ ಪುತ್ಥಳಿ, ಫಲಕ, ಶಾಲು, ಹಾರ ಹಾಗೂ 10 ಲಕ್ಷ ರೂಪಾಯಿ)ಗಳ ನಗದನ್ನು ಒಳಗೊಂಡಿರುತ್ತದೆ. ಇದುವರೆವಿಗೆ ಈ ಪ್ರಶಸ್ತಿಯನ್ನು ಕೆಳಕಂಡ ಮಹನೀಯರು ಪಡೆದಿರುತ್ತಾರೆ.

ಪುರಸ್ಕೃತರ ಹೆಸರು ವರ್ಷ
ಉಸ್ತಾದ್ ಬಿಸ್ಮಿಲ್ಲಾಖಾನ್ 1995
ಡಾ. ವೀಣಾ ದೊರೆಸ್ವಾಮಿ ಅಯ್ಯಂಗಾರ್1996
ಡಾ. ರಾಜೀವ್ ತಾರಾನಾಥ್1997
ವಿದ್ವಾನ್ ಕುನ್ನಕ್ಕುಡಿ ಆರ್. ವೈದ್ಯನಾಥನ್ 1998
ಪಂಡಿತ್ ಉಸ್ತಾದ್ ಅಲ್ಲಾರಖ1999
ಟಿ. ಕೆ. ಮೂರ್ತಿ2000
ಆರ್. ಕೆ. ಬಿಜಾಪುರೆ2001
ಲಾಲ್ಗುಡಿ ಬಿ. ಜಯರಾಮನ್2002
ಪಂಡಿತ್ ಜಿ. ಆರ್. ನಿಂಬರಗಿ2003
ಡಾ. ಎನ್. ರಮಣಿ2004
ದತ್ತಾತ್ರೇಯ ಸದಾಶಿವ ಗರುಡ2005
ವೆಲ್ಲೂರು ಜಿ. ರಾಮಭದ್ರನ್ (ಚೆನ್ನೈ)2006
ಡಾ. ಪುಟ್ಟರಾಜ ಗವಾಯಿ (ಗದಗ) 2007
ಎ. ಕೆ. ಸಿ. ನಟರಾಜನ್ (ತಿರುಚನಾಪಳ್ಳಿ)2008
ಶ್ರೀಮತಿ ಎನ್. ರಾಜಮ್ (ಮುಂಬೈ)2009
ಎಸ್. ಮಹದೇವಪ್ಪ (ಮೈಸೂರು)2010
ಪಂ. ಶೇಷಗಿರಿ ಹಾನಗಲ್2011
ಪ್ರೊ. ಆರ್. ವಿಶ್ವೇಶ್ವರನ್ (ಮೈಸೂರು)2012
ಪಂಡಿತ್ ರಾಮನಾರಾಯಣ (ಮುಂಬೈ)2013
ಎಲ್. ಭೀಮಾಚಾರ್ (ಬೆಂಗಳೂರು)2014
ಸುರೇಶ್ ತಲ್ವಾಲ್ಕರ್ (ಮುಂಬೈ)2015
ವಿದ್ವಾನ್ ಟಿ. ಹೆಚ್. ವಿನಾಯಕ ರಾಮ್ (ಚೆನ್ನೈ)2016
ಪಂ. ರಘುನಾಥ ನಾಕೋಡ್ (ಧಾರವಾಡ)2017
ಟಿ. ಎನ್. ಕೃಷ್ಣನ್ (ಚೆನ್ನೈ)2018
ಡಾ. ಪಂ ನರಸಿಂಹಲು ವಡವಾಟಿ2019
ಶ್ರೀ ಎಂ. ವಾಸುದೇವ ಮೋಹಿತ, ಮೃದಂಗ2020
ಶ್ರೀ ಹರಿಪ್ರಸಾದ್‌ ಚೌರಾಸಿಯಾ, ದೆಹಲಿ2021
ಶ್ರೀ ನಿತ್ಯಾನಂದ ಹಳದಿಪುರ, ಮುಂಬೈ2022
ಶ್ರೀ ಶ್ರೀರಾಮುಲು, ಕೋಲಾರ2023

ಕನಕ ಶ್ರೀ ಪ್ರಶಸ್ತಿ

ಕರ್ನಾಟಕ ಸರ್ಕಾರವು ಕನಕದಾಸರ ಜೀವನ, ಸಾಹಿತ್ಯ ಸಂದೇಶ ಮತ್ತು ಸಮಾಜಕ್ಕೆ ಅವರು ನೀಡಿದ ದಾರ್ಶನಿಕ ಕೊಡುಗೆ ಕುರಿತಂತೆ ಹಾಗೂ ದಾಸ ಸಾಹಿತ್ಯದಲ್ಲಿ ಅನನ್ಯ ಸೇವೆ ಸಲ್ಲಿಸಿರುವ ವಿದ್ವಾಂಸರಿಗೆ/ಸಂಶೋಧಕರಿಗೆ/ಲೇಖಕರಿಗೆ `ಕನಕ ಶ್ರೀ' ಎಂಬ ಪ್ರಶಸ್ತಿಯನ್ನು ಕೊಟ್ಟು ಗೌರವಿಸಲಾಗುತ್ತಿದೆ. ಪ್ರಶಸ್ತಿಯು ರೂ.5.೦೦ಲಕ್ಷಗಳ ನಗದು, ಶ್ರೀ ಕನಕದಾಸರ ಕಂಚಿನ ಪುತ್ಥಳಿ, ಪ್ರಶಸ್ತಿ ಫಲಕ, ಹಾರ, ಶಾಲು ಹಾಗೂ ಫಲ ತಾಂಬೂಲಗಳನ್ನು ಒಳಗೊಂಡಿರುತ್ತದೆ. ಈವರೆವಿಗೆ `ಕನಕ ಶ್ರೀ' ಪ್ರಶಸ್ತಿ ಪಡೆದ ಗಣ್ಯರು ಈ ಕೆಳಕಂಡಂತಿದ್ದಾರೆ.

ಪುರಸ್ಕೃತರ ಹೆಸರು ವರ್ಷ
ಪ್ರೊ. ಸುಧಾಕರ್ (ಮೈಸೂರು)2008
ಡಾ. ಟಿ. ಎನ್. ನಾಗರತ್ನ (ಮೈಸೂರು)2009
ಡಾ. ಎಚ್. ಜೆ. ಲಕ್ಕಪ್ಪಗೌಡ (ಹಂಪಾಪುರ, ಹಾಸನ)2010
ಪ್ರೊ. ಜ್ಯೋತಿ ಹೊಸೂರು (ಬೆಳಗಾವಿ)2011
ಶ್ರೀ ಕೆ. ಚಿಕ್ಕಣ್ಣ (ಬೆಂಗಳೂರು)2012
ಡಾ. ಕೃಷ್ಣ ಕೋಳಾರ ಕುಲಕರ್ಣಿ (ಬೀಜಾಪುರ)2013
ಪ್ರೊ. ಎ. ವಿ. ನವಡ (ಮಂಗಳೂರು)2014
ಡಾ. ಸ್ವಾಮಿರಾವ್ ಕುಲಕರ್ಣಿ (ಕಲಬುರಗಿ)2015
ಡಾ. ಸಿದ್ದಣ್ಣ ಫಕೀರಪ್ಪ ಜಕಬಾಳ (ಗದಗ)2016
ಡಾ. ಕೆ. ಗೋಕುಲನಾಥ (ಬೆಂಗಳೂರು)2017
ಶ್ರೀ ನಟರಾಜ ಬುದಲ (ತುಮಕೂರು)2018
ಶ್ರೀ ಬಿ.ಎ. ಮೂರ್ತಿ, ಬೆಂಗಳೂರು2019
ಶ್ರೀ ಯುಗಧರ್ಮ ರಾಮಣ್ಣ, ದಾವಣಗೆರೆ2020
ಡಾ. ಲಿಂಗದಹಳ್ಳಿ ಹಾಲಪ್ಪ, ಹಾವೇರಿ2021
ಡಾ. ಬಿ. ಶಿವರಾಮ ಶೆಟ್ಟಿ, ಮಂಗಳೂರು2022
ದಿವಂಗತ ಲಿಂಗಪ್ಪ2023

ನಿಜಗುಣ ಪುರಂದರ ಪ್ರಶಸ್ತಿ

ಕನ್ನಡ ನಾಡಿನ ದಾಸ ಶ್ರೇಷ್ಟರೂ, ಕೀರ್ತನೆ, ಉಗಾಭೋಗಾದಿಗಳ ರಚನಕಾರರೂ, ಕರ್ನಾಟಕ ಸಂಗೀತದ ದಿಗ್ಗಜರೂ ಆದ ಶ್ರೀ ಪುರಂದರ ದಾಸ ಹಾಗೂ ಶ್ರೀ ಕನಕದಾಸರ ಹೆಸರಿನಲ್ಲಿ ಸಂಗೀತದ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದ ಸಂಗೀತಗಾರರಿಗೆ ನೀಡಲಾಗುವ ಪ್ರಶಸ್ತಿ ಶ್ರೀ ಕನಕ-ಪುರಂದರ ಪ್ರಶಸ್ತಿ. ದಿನಾಂಕ:04-01-2010ರ ಸರ್ಕಾರದ ಆದೇಶದ ಮೇರೆಗೆ ಈ ಪ್ರಶಸ್ತಿಯನ್ನು ನಿಜಗುಣ-ಪುರಂದರ ಪ್ರಶಸ್ತಿಯೆಂದು ಮರು ನಾಮಕರಣ ಮಾಡಲಾಗಿದೆ . ಈ ಪ್ರಶಸ್ತಿಯನ್ನು ಕರ್ನಾಟಕ ಸಂಗೀತ ಹಾಗೂ ಹಿಂದೂಸ್ಥಾನಿ ಸಂಗೀತ ಗಾಯನ ಮತ್ತು ವಾದ್ಯ ಪರಿಕರಗಳಲ್ಲಿ ಅಮೂಲ್ಯ ಸೇವೆ ಸಲ್ಲಿಸಿದವರುಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ಪ್ರಶಸ್ತಿಯು ಪ್ರಶಸ್ತಿ ಪುತ್ಥಳಿ, ಫಲಕ, ಶಾಲು, ಹಾರ ಹಾಗೂ ೫.೦೦ ಲಕ್ಷ(ಐದು ಲಕ್ಷ ರೂಪಾಯಿ)ಗಳ ನಗದನ್ನು ಒಳಗೊಂಡಿರುತ್ತದೆ. ಇದುವರೆವಿಗೆ ಈ ಪ್ರಶಸ್ತಿಯನ್ನು ಕೆಳಕಂಡ ಮಹನೀಯರು ಪಡೆದಿರುತ್ತಾರೆ.

ಪುರಸ್ಕೃತರ ಹೆಸರು ವರ್ಷ
ವಿದ್ವಾನ್ ಟಿಟ್ಟೆ ಕೃಷ್ಣ ಅಯ್ಯಂಗಾರ್1991
ಡಾ. ಗಂಗುಬಾಯಿ ಹಾನಗಲ್ 1992
ಶ್ರೀ ಆರ್.ಆರ್. ಕೇಶವಮೂರ್ತಿ1993
ಡಾ. ಬಿಂದು ಮಾಧವ ಪಾಠಕ್1994
ಶ್ರೀ ಗಮಕೀ ರಾಘವೇಂದ್ರ1995
ವಿದ್ವಾನ್ ಆರ್.ಕೆ. ಶ್ರೀಕಂಠನ್1996
ಡಾ. ಪುಟ್ಟರಾಜ ಗವಾಯಿಗಳು 1997
ಶ್ರೀ ಎಂ.ಎಸ್. ರಾಮಯ್ಯ1998
ಶ್ರೀ ಶೇಷಗಿರಿ ಹಾನಗಲ್1999
ಶ್ರೀ ಭದ್ರಗಿರಿ ಅಚ್ಯುತದಾಸ್2000
ಶ್ರೀ ಸುಬ್ಬರಾವ್2001
ಪಂಡಿತ ಪಂಚಕ್ಷರಿಶ್ವಾಮಿ ಮಟಿಗಟ್ಟಿ2002
ಶ್ರೀ ಎಂ.ಜೆ. ಶ್ರೀನಿವಾಸ ಅಯ್ಯಂಗಾರ್2003
ಪಂಡಿತೆ ವಸಂತ ಕನಕಪುರ2004
ಶ್ರೀ ಬಿ.ಎಸ್.ಎಸ್. ಕೌಶಿಕ್2005
ಪ್ರೊ. ವಿ. ರಾಮರತ್ನಂ2006
ಶ್ರೀ ಚಂದ್ರಶೇಖರ ಪುರಾಣಿಕವತ್ತಮಠ2007
ಶ್ರೀಮತಿ ಎನ್. ಚೊಕ್ಕಮ್ಮ2008
ಶ್ರೀ ವೆಂಕಟೇಶ ಗೋಡ್ಕಿಂಡಿ (ಬೆಂಗಳೂರು)2009
ಶ್ರೀ ಲಕ್ಷ್ಮಣದಾಸ್ (ತುಮಕೂರು)2010
ಶ್ರೀ ಕುರುಡಿ ವೆಂಕಣ್ಣಾಚಾರ್2011
ಪಿ. ಸಂಗಮೇಶ್ವರ ಗುರುವಾ (ಧಾರವಾಡ)2012
ಶ್ರೀಮತಿ ರಾಜಲಕ್ಷ್ಮಿ ತಿರುಣಾರಾಯಣನ್ (ಬೆಂಗಳೂರು)2013
ಪಿ. ರಘುನಾಥ ನಾಕೋಡ್ (ಧಾರವಾಡ)2014
ಶ್ರೀ ವೆಳಿಯವಾಡಿ ರಂಗಸ್ವಾಮಿ ಅಯ್ಯಂಗಾರ್ (ಬೆಂಗಳೂರು)2015
ಶ್ರೀ ಗಣಪತಿ ಭಟ್ ಹಸನಗಿ (ಉತ್ತರ ಕನ್ನಡ)2016
ಶ್ರೀ ರಾಮದಾಸಪ್ಪ ಬಿ. (ಬೆಂಗಳೂರು)2017
ಶ್ರೀ ಬಿ.ಎಸ್. ಮಠ (ಧಾರವಾಡ)2018
ಶ್ರೀಮತಿ ಗೌರಿ ಕುಪ್ಪಸ್ವಾಮಿ (ಮೈಸೂರು)2019

ಡಾ. ಗುಬ್ಬಿ ವೀರಣ್ಣ ಪ್ರಶಸ್ತಿ

ಕರ್ನಾಟಕದ ನಾಟಕ ಕ್ಷೇತ್ರದಲ್ಲಿ ಬಹು ದೊಡ್ಡ ಹೆಸರು ಡಾ: ಗುಬ್ಬಿ ವೀರಣ್ಣನವರದು. ರಂಗಭೂಮಿಯ ಮನೆ ಮಾತಾಗಿದ್ದ ಮಹನೀಯರ ಸ್ಮರಣಾರ್ಥ ರಂಗಭೂಮಿಗೆ ಶ್ರಮಿಸಿದ ಶ್ರೇಷ್ಠ ನಾಟಕಕಾರರನ್ನು ಗುರುತಿಸಿ ಆ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿ ನೀಡಬೇಕೆಂದು ಶ್ರೀಯುತರ ಹೆಸರಿನಲ್ಲಿ 1993ರಲ್ಲಿ ಡಾ: ಗುಬ್ಬಿ ವೀರಣ್ಣ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು. ಪ್ರಶಸ್ತಿಯು ಪ್ರಶಸ್ತಿ ಪುತ್ಥಳಿ, ಫಲಕ, ಶಾಲು, ಹಾರ ಹಾಗೂ 5.00 ಲಕ್ಷ ರೂಪಾಯಿಗಳ ನಗದನ್ನು ಒಳಗೊಂಡಿರುತ್ತದೆ. ಇದುವರೆವಿಗೆ ಈ ಪ್ರಶಸ್ತಿಯನ್ನು ಕೆಳಕಂಡ ಮಹನೀಯರು ಪಡೆದಿರುತ್ತಾರೆ.

ಪುರಸ್ಕೃತರ ಹೆಸರು ವರ್ಷ
ಶ್ರೀ ಏಣಗಿ ಬಾಳಪ್ಪ1994
ಡಾ. ಬಿ. ವಿ. ಕಾರಂತ1995
ಡಾ. ಗಿರೀಶ್ ಕಾರ್ನಾಡ್ 1996
ಮಾಸ್ಟರ್ ಹಿರಣ್ಣಯ್ಯ1997
ಶ್ರೀ ಹೆಚ್. ಕೆ. ಯೋಗಾನರಸಿಂಹ1998
ಶ್ರೀ ಪಿ. ಬಿ. ಧುತ್ತರಗಿ1999
ಶ್ರೀ ಎಚ್. ಎನ್. ಹೂಗಾರ2000
ಶ್ರೀಮತಿ ಆರ್. ನಾಗರತ್ನಮ್ಮ2001
ಪದ್ಮಶ್ರೀ ಚಿಂದೋಡಿ ಲೀಲಾ2002
ಶ್ರೀ ಬಿ. ಆರ್. ಅರಿಶಿಣಗೋಡಿ2003
ಶ್ರೀ ಬಸವರಾಜ ಗುಡಿಗೇರಿ2004
ಶ್ರೀಮತಿ ರೇಣುಕಮ್ಮ ಮುರಗೋಡು2005
ಶ್ರೀಮತಿ ಜಿ.ವಿ. ಮಾಲತಮ್ಮ2006
ಶ್ರೀಮತಿ ಸುಭದ್ರಮ್ಮ ಮನ್ಸೂರು2007
ಶ್ರೀ ಎಚ್. ಟಿ. ಅರಸು2008
ಶ್ರೀ ಪಿ. ವಜ್ರಪ್ಪ (ಬೆಂಗಳೂರು)2009
ಶ್ರೀಮತಿ ಪ್ರಮೀಳಮ್ಮ ಗುಡೂರು (ಬಾಗಲಕೋಟೆ)2010
ಶ್ರೀ ಎಲ್. ಬಿ. ಕೆ. ಅಲ್ದಾಳ್ (ಗುಲ್ಬರ್ಗಾ)2011
ಶ್ರೀಮತಿ ಲಕ್ಷ್ಮೀಬಾಯಿ ಏಣಗಿ (ಧಾರವಾಡ)2012
ಶ್ರೀ ಫಕೀರಪ್ಪ ವರವಿ (ಗದಗ)2013
ಶ್ರೀಮತಿ ರಂಗನಾಯಕಮ್ಮ2014
ಶ್ರೀ ಆರ್. ಪರಮಶಿವನ್ (ಬೆಂಗಳೂರು)2015
ಶ್ರೀ ಚಿಂದೋಡಿ ಶ್ರೀಕಂಠೇಶ್ (ದಾವಣಗೆರೆ)2016
ಶ್ರೀಮತಿ ಥೆರೆಸಮ್ಮ ಡಿಸೋಜಾ (ಹುಬ್ಬಳ್ಳಿ)2017
ಶ್ರೀ ಪ್ರಕಾಶ ಕಡಪಟ್ಟಿ2018
ಶ್ರೀ ಮದಿರೆ ಮರಿಸ್ವಾಮಿ2019
ಶ್ರೀ ಕುಮಾರಸ್ವಾಮಿ (ಚಿತ್ರದುರ್ಗ)2020
ಶ್ರೀ ಬಾಬಣ್ಣ ಕಲ್ಮನಿ2021
ಶ್ರೀ ಚನ್ನಬಸಯ್ಯ ಗುಬ್ಬಿ2022
ಶ್ರೀ ಎಲ್. ಬಿ. ಶೇಖ ಮಾಸ್ತರ (ವಿಜಯಪುರ)2023
ಶ್ರೀಮತಿ ಕೆ. ನಾಗರತ್ನಮ್ಮ (ಮರಿಯಮ್ಮನಹಳ್ಲಿ)2024

ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ

ನಾಡಿನ ಚಿತ್ರಕಲೆಯನ್ನು ವಿಖ್ಯಾತಗೊಳಿಸಿದ ಶ್ರೇಷ್ಠ ಹಿರಿಯ ಕಲಾವಿದರಿಗೆ ಪುರಸ್ಕರಿಸುವ ಉದ್ದೇಶದಿಂದ ಕನ್ನಡ ನಾಡಿನ ಹೆಮ್ಮೆಯ ಕಲಾವಿದ ದಿ. ವರ್ಣಶಿಲ್ಪಿ ವೆಂಕಟಪ್ಪನವರ ಹೆಸರಿನಲ್ಲಿ 1993ರಿಂದ ಸ್ಥಾಪಿತವಾಗಿರುವ ಪ್ರಶಸ್ತಿ ಇದು. ಪ್ರಶಸ್ತಿಯು ಪ್ರಶಸ್ತಿ ಪುತ್ಥಳಿ, ಫಲಕ, ಶಾಲು, ಹಾರ ಹಾಗೂ ರೂ.5.೦೦ ಲಕ್ಷ ರೂಪಾಯಿಗಳ ನಗದನ್ನು ಒಳಗೊಂಡಿರುತ್ತದೆ. ಇದುವರೆವಿಗೆ ಈ ಪ್ರಶಸ್ತಿಯನ್ನು ಕೆಳಕಂಡ ಮಹನೀಯರು ಪಡೆದಿರುತ್ತಾರೆ.

ಪುರಸ್ಕೃತರ ಹೆಸರುವರ್ಷ
ಡಾ. ಕೆ.ಕೆ. ಹೆಬ್ಬಾರ್ 1994
ಶ್ರೀ ಡಿ.ವಿ. ಹಾಲಭಾವಿ1995
ಶ್ರೀ ಎಂ.ಎ. ಚೆಟ್ಟಿ1996
ಶ್ರೀ ಕೆ.ಆರ್. ತಿಪ್ಪೇಸ್ವಾಮಿ1997
ಶ್ರೀ ಆರ್.ಎಂ. ಹಡಪದ್1998
ಶ್ರೀ ಎಂ.ಜೆ. ಶುದ್ಧೋದನ1999
ಶ್ರೀ ಎಂ.ಎಸ್. ಚಂದ್ರಶೇಖರ್2000
ಶ್ರೀ ಎಸ್.ಎಸ್. ಮನೋಳಿ2001
ಶ್ರೀ ಜೆ.ಎಸ್. ಖಂಡೇರಾವ್2002
ಶ್ರೀ ಎಸ್.ಜಿ. ವಾಸುದೇವ್2003
ಶ್ರೀ ಯೂಸುಫ್ ಅರಕ್ಕಲ್2004
ಶ್ರೀ ವಿಜಯ ಸಿಂಧೂರ್2005
ಶ್ರೀ ಬಿ.ಕೆ. ಹುಬ್ಳಿ2006
ಶ್ರೀ ಶಂಕರಗೌಡ ಬೆಟ್ಟದೂರು2007
ಶ್ರೀ ಎಂ.ಬಿ. ಪಾಟೀಲ2008
ಶ್ರೀ ವಿ.ಜಿ. ಅಂದಾನಿ2009
ಶ್ರೀ ಕೆ. ಚಂದ್ರನಾಥ ಆಚಾರ್ಯ2010
ಶ್ರೀ ವಿ.ಬಿ. ಹಿರೇಗೌಡರ್, ದಾವಣಗೆರೆ2011
ಶ್ರೀ ಯು. ಭಾಸ್ಕರ್ ರಾವ್, ಬೆಂಗಳೂರು2012
ಶ್ರೀ ಕೆ.ಟಿ. ಶಿವಪ್ರಸಾದ್, ಹಾಸನ2013
ಶ್ರೀ ವಿ.ಟಿ. ಕಾಳೆ, ಬಳ್ಳಾರಿ2014
ಶ್ರೀ ಪೀಟರ್ ಲೂಯಿಸ್, ಉಡುಪಿ2015
ಶ್ರೀ ಮಹಾವೀರ ರಾಯಪ್ಪ ಬಾಳಿಕಾಯಿ, ಧಾರವಾಡ2016
ಡಾ. ಎಂ. ಎಸ್‌. ಮೂರ್ತಿ, ಬೆಂಗಳೂರು2017
ಡಾ. ಸಿ. ಚಂದ್ರಶೇಖರ್2018
ಶ್ರೀ ಚಿ. ಸು. ಕೃಷ್ಣಶೆಟ್ಟಿ2019
ಶ್ರೀಮತಿ ಗಾಯತ್ರಿ ದೇಸಾಯಿ, ಧಾರವಾಡ2020
ಶ್ರೀ ವಿಜಯ್‌ ಹಾಗರ ಗುಂಡಿಗಿ, ಕಲಬುರಗಿ2021
ಶ್ರೀ ಜಿ. ಎಲ್‌. ಎನ್‌. ಸಿಂಹ, ಮೈಸೂರು2022
ಶ್ರೀ ಬಸವರಾಜ್‌. ಎಲ್‌. ಜಾನೆ, ಕಲಬುರಗಿ2023

ಜನಪದ ಶ್ರೀ ಪ್ರಶಸ್ತಿ

ಕರ್ನಾಟಕವು ಜಾನಪದ ಕಲೆಗಳ ತವರೂರು. ಎಲ್ಲಾ ಶಾಸ್ತ್ರೀಯ ಕಲೆಗಳ ಮೂಲ ಜಾನಪದದಲ್ಲಿದೆ ಎಂಬುದು ವಿದ್ವಾಂಸರ ಅಭಿಪ್ರಾಯ. ಇಂಥ ಜನಪದ ಕಲೆಗಳಿಗೆ ಮಾಧ್ಯಮವಾಗುತ್ತಾ ಪೋಷಿಸಿಕೊಂಡು ಬಂದ ಹಿರಿಯ ಕಲಾವಿದರಿಗೆ ಪ್ರತಿ ವರ್ಷ ನೀಡಲಾಗುವ ಜನಪದ ಶ್ರೀ ಪ್ರಶಸ್ತಿಯು 1994ರಲ್ಲಿ ಸ್ಥಾಪನೆಗೊಂಡಿತು. ಪ್ರಶಸ್ತಿಯು ಪ್ರಶಸ್ತಿ ಪುತ್ಥಳಿ, ಫಲಕ, ಶಾಲು, ಹಾರ ಹಾಗೂ ರೂ.5.೦೦ ಲಕ್ಷ ರೂಪಾಯಿಗಳ ನಗದನ್ನು ಒಳಗೊಂಡಿರುತ್ತದೆ. ಇದುವರೆವಿಗೆ ಈ ಪ್ರಶಸ್ತಿಯನ್ನು ಕೆಳಕಂಡ ಮಹನೀಯರು ಪಡೆದಿರುತ್ತಾರೆ.

ಪುರಸ್ಕೃತರ ಹೆಸರುವರ್ಷ
ಡಾ. ಎಸ್.ಕೆ. ಕರೀಂಖಾನ್1994
ದಿ: ಕಂಸಾಳೆ ಮಹದೇವಯ್ಯ1995
ಶ್ರೀ ಯಡ್ರಾಮನಹಳ್ಳಿ ದೊಡ್ಡಭರಮಪ್ಪ1996
ಶ್ರೀ ಯಡ್ರಾಮನಹಳ್ಳಿ ದೊಡ್ಡಭರಮಪ್ಪ1997
ಶ್ರೀ ಹಿರಿಯಡ್ಕ ಗೋಪಾಲರಾವ್1998
ಶ್ರೀಮತಿ ಸುಕ್ರಿ ಬೊಮ್ಮಗೌಡ1999
ಶ್ರೀ ಟಕ್ಕಳಿಕೆ ವಿಠ್ಠಲರಾವ್2000
ಶ್ರೀ ಹಮ್ಗಿ ಮುದಿಮಲ್ಲಪ್ಪ2001
ಶ್ರೀ ಎಂ.ಆರ್. ಬಸಪ್ಪ2002
ಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ2003
ಶ್ರೀ ಚನ್ನಪ್ಪ ವೀರಭದ್ರಪ್ಪ ಕರಡಿ2004
ಶ್ರೀಮತಿ ಸಿರಿಯಜ್ಜಿ2005
ಶ್ರೀ ಈಶ್ವರಪ್ಪ ಗುರಪ್ಪ ಅಂಗಡಿ2006
ಶ್ರೀ ಬೆಳಗಲ್ಲು ವೀರಣ್ಣ2007
ಶ್ರೀ ಸಿದ್ದಪ್ಪ ಮೇಟಿ2008
ಶ್ರೀ ಪುಟ್ಟಮಲ್ಲೇಗೌಡ2009
ಶ್ರೀಮತಿ ದರೋಜಿ ಈರಮ್ಮ2010
ಶ್ರೀ ಕಾಶಿಬಾಯಿ ದಾದನಟ್ಟಿ, ವಿಜಾಪುರ2011
ಶ್ರೀ ಸೋಮಲಿಂಗಪ್ಪ ಫಕೀರಪ್ಪ ದೊಡವಾಡ, ಬೈಲಹೊಂಗಲ2012
ಶ್ರೀ ಮುಖವೀಣೆ ಆಂಜನಪ್ಪ, ಚಿಕ್ಕಬಳ್ಳಾಪುರ2013
ಶ್ರೀ ಕಲ್ಮನೆ ಎಸ್. ನಂಜಪ್ಪ, ತುಮಕೂರು2014
ಶ್ರೀ ಸತ್ತೂರ ಇಮಾಂಸಾಬ್, ಬಳ್ಳಾರಿ2015
ಶ್ರೀಮತಿ ಲಲಿತಾ ರಾಚಪ್ಪ ಪಾತ್ರೋಟ, ಬೆಳಗಾವಿ2016
ಶ್ರೀ ವೆಂಕಪ್ಪ ಪುಲಿ ಧಾರವಾಡ ಮತ್ತು ಶ್ರೀ ವೆಂಕಪ್ಪ ಅಂಬಾಜಿ ಸುಗತೇಕರ, ಬಾಗಲಕೋಟೆ2017
ಶ್ರೀ ಚಂದ್ರಶಾ ತಮ್ಮಣ್ಣ ಮಾಳಗೆ, ಬೀದರ್ ಮತ್ತು ಶ್ರೀ ಹಿನಕಲ್ ಮಹಾದೇವಯ್ಯ, ಮೈಸೂರು2018
ಶ್ರೀ ಬಿ. ಟಾಕಪ್ಪ ಕಣ್ಣೂರು – ವಾದನ ಮತ್ತು ಶ್ರೀಮತಿ ಬೀಮವ್ವ ದೊಡ್ಡಬಾಳವ್ವ ಶಿಳ್ಳೆಕ್ಯಾತರ - ಗಾಯನ2019
ಶ್ರೀಮತಿ ಹುಸೇನಾ ಬಿ ಬುಡೇನ್‌, ಉತ್ತರ ಕನ್ನಡ - ಗಾಯನ ಮತ್ತು ಶ್ರೀ ಮಾರೆಪ್ಪ ಮಾರೆಪ್ಪ ದಾಸರ, ರಾಯಚೂರು - ವಾದನ2020
ಡಾ. ಅಪ್ಪಗೆರೆ ತಿಮ್ಮರಾಜು, ರಾಮನಗರ - ಗಾಯನ ಮತ್ತು ಶ್ರೀ ಕುಮಾರಸ್ವಾಮಿ (ಕಂಸಾಳೆ), ಮೈಸೂರು - ವಾದನ2021
ಶ್ರೀ ಅರುವ ಕೊರಗಪ್ಪ ಶೆಟ್ಟಿ, ದಕ್ಷಿಣ ಕನ್ನಡ ಮತ್ತು ಶ್ರೀ ಕಲ್ಲಪ್ಪ ಮಿರ್ಜಾಪುರ, ಬೀದರ2022
ಶ್ರೀ ಜಿ. ಪಿ. ಜಗದೀಶ್‌, ಚಿಕ್ಕಮಗಳೂರು ಮತ್ತು ಶ್ರೀಮತಿ ಹಲಗೆ ದುರ್ಗಮ್ಮ, ಚಿತ್ರದುರ್ಗ2023

ಶಾಂತಳ ನೃತ್ಯ ಪ್ರಶಸ್ತಿ

ಹೊಯ್ಸಳ ದೊರೆ ವಿಷ್ಣುವರ್ಧನನ ಪತ್ನಿ ಶಾಂತಲಾ ದೇವಿ ಸ್ವತಃ ಅಪೂರ್ವ ನೃತ್ಯ ಕಲಾವಿದೆ. ನಾಟ್ಯ ಹಾಗೂ ವಾಸ್ತುಶಿಲ್ಪ ಕ್ಷೇತ್ರಕ್ಕೆ ಅವಳ ಕಾಣಿಕೆ ಅಪೂರ್ವವಾದುದು. ನೃತ್ಯ ಕ್ಷೇತ್ರಕ್ಕೆ ಅವಳ ಕಾಣಿಕೆ ಅದ್ವಿತೀಯ. ಇವರ ಹೆಸರಿನಲ್ಲಿ ನೃತ್ಯ ಕ್ಷೇತ್ರಕ್ಕೆ ಪ್ರಶಸ್ತಿ ನೀಡಲು ಸರ್ಕಾರವು 1995ರಲ್ಲಿ ನಿರ್ಧರಿಸಿತು. ಈ ಶಾಂತಳ ನೃತ್ಯ ಪ್ರಶಸ್ತಿಯು ಪ್ರಶಸ್ತಿ ಪುತ್ಥಳಿ, ಫಲಕ, ಶಾಲು, ಹಾರ ಹಾಗೂ ರೂ.5.00 ಲಕ್ಷ ರೂಪಾಯಿಗಳ ನಗದನ್ನು ಒಳಗೊಂಡಿರುತ್ತದೆ. ಇದುವರೆವಿಗೆ ಈ ಪ್ರಶಸ್ತಿಯನ್ನು ಕೆಳಕಂಡ ಮಹನೀಯರು ಪಡೆದಿರುತ್ತಾರೆ.

ಪುರಸ್ಕೃತರ ಹೆಸರುವರ್ಷ
ಡಾ. ಕೆ. ವೆಂಕಟಲಕ್ಷ್ಮಮ್ಮ1995
ಡಾ. ಯು.ಎಸ್. ಕೃಷ್ಣರಾವ್, ಬೆಂಗಳೂರು1996
ಶ್ರೀ ಯು.ಎಸ್. ಕೃಷ್ಣರಾವ್, ಮಂಗಳೂರು1997
ಶ್ರೀ ಹೆಚ್.ಆರ್. ಕೇಶವಮೂರ್ತಿ1998
ಶ್ರೀಮತಿ ಮಾಯಾರಾವ್1999
ಶ್ರೀ ಕೆ. ಮುರಳೀಧರ ರಾವ್2000
ಶ್ರೀಮತಿ ನರ್ಮದಾ2001
ಶ್ರೀಮತಿ ಶಾಚಿತಾರಾವ್2002
ಶ್ರೀ ಸಿ. ರಾಧಾಕೃಷ್ಣ2003
ಶ್ರೀಮತಿ ಜಯಲಕ್ಷ್ಮಿ ಆಳ್ವ2004
ಶ್ರೀಮತಿ ಲೀಲಾ ರಾಮನಾಥನ್2005
ಶ್ರೀ ಕೆ.ಬಿ. ಮಾಧವರಾವ್2006
ಶ್ರೀ ಟಿ.ಎಸ್. ಭಟ್2007
ಶ್ರೀ ಕೆ.ಎಂ. ರಾಮನ್2008
ಶ್ರೀ ಉಳ್ಳಾಲ ಮೋಹನ್ ಕುಮಾರ್2009
ಶ್ರೀಮತಿ ರಾಧಾ ಶ್ರೀಧರ್2010
ಶ್ರೀಮತಿ ಲಲಿತ ಶ್ರೀನಿವಾಸನ್, ಬೆಂಗಳೂರು2011
ಡಾ. ವಸುಂಧರಾ ದೊರೆಸ್ವಾಮಿ, ಮೈಸೂರು2012
ಶ್ರೀಮತಿ ಪದ್ಮಿನಿ ರಾಮಚಂದ್ರನ್, ಬೆಂಗಳೂರು2013
ಮಾಸ್ಟರ್ ವಿಠ್ಠಲಶೆಟ್ಟಿ, ಮಂಗಳೂರು2014
ಶ್ರೀಮತಿ ಎಂ. ಶಕುಂತಲಾ, ಬೆಂಗಳೂರು2015
ಶ್ರೀಮತಿ ಉಷಾದಾತಾರ್, ಬೆಂಗಳೂರು2016
ಶ್ರೀಮತಿ ನಂದಿನಿ ಈಶ್ವರ್, ಮೈಸೂರು2017
ಶ್ರೀಮತಿ ಬಿ.ಭಾನುಮತಿ2018
ಶ್ರೀಮತಿ ಬಿ.ಕೆ. ವಸಂತಲಕ್ಷ್ಮೀ2019
ಶ್ರೀ ಎಂ.ಆರ್‌. ಕೃಷ್ಣಮೂರ್ತಿ, ಕಲಾಕ್ಷಿತಿ, ಬೆಂಗಳೂರು2020
ಶ್ರೀಮತಿ ಬಿ.ಎಸ್‌. ಸುನಂದಾದೇವಿ ಕೂಚುಪುಡಿ, ಬೆಂಗಳೂರು2021
ಶ್ರೀಮತಿ ಚಿತ್ರ ವೇಣುಗೋಪಾಲ್‌, ಬೆಂಗಳೂರು2022
ಶ್ರೀಮತಿ ರೇವತಿ ನರಸಿಂಹನ್‌, ಬೆಂಗಳೂರು2023

ಜಕನಾಚಾರಿ ಪ್ರಶಸ್ತಿ

ಕರ್ನಾಟಕ ಶಿಲ್ಪಗಳ ತವರೂರು. ನಾಡಿನಾದ್ಯಂತ ಸುಂದರ ಶಿಲ್ಪಗಳನ್ನು ಮಂದಿರಗಳಲ್ಲಿ ಕಾಣಬಹುದು. ಇಂತಹ ಪರಂಪರೆಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಕನ್ನಡ ನಾಡಿನ ಅಮರ ಶಿಲ್ಪಿ ಎಂದೇ ಖ್ಯಾತಿ ಪಡೆದ ಜಕಣಾಚಾರಿಯ ಹೆಸರಿನಲ್ಲಿ ಶಿಲ್ಪಿಗಳಿಗೆ ಪ್ರಶಸ್ತಿ ನೀಡಲು ಸರ್ಕಾರವು 1995ರಲ್ಲಿ ನಿರ್ಧರಿಸಿತು. ಪ್ರಶಸ್ತಿಯು ಪ್ರಶಸ್ತಿ ಪುತ್ಥಳಿ, ಫಲಕ, ಶಾಲು, ಹಾರ ಹಾಗೂ ರೂ.5.೦೦ ಲಕ್ಷ ರೂಪಾಯಿಗಳ ನಗದನ್ನು ಒಳಗೊಂಡಿರುತ್ತದೆ. ಇದುವರೆವಿಗೆ ಈ ಪ್ರಶಸ್ತಿಯನ್ನು ಕೆಳಕಂಡ ಮಹನೀಯರು ಪಡೆದಿರುತ್ತಾರೆ.

ಪುರಸ್ಕೃತರ ಹೆಸರುವರ್ಷ
ಶ್ರೀ ಸಿ. ಪರಮೇಶ್ವರಾಚಾರ್ಯ, ಬೆಂಗಳೂರು1995
ಶ್ರೀ ಎಸ್.ಜಿ. ನೀಲಕಂಠಾಚಾರ್, ಬೆಂಗಳೂರು1996
ಶ್ರೀ ಜಿ.ಡಿ. ಮಾಯಾಚಾರ್ಯ, ಬಾಗಲಕೋಟೆ1997
ಶ್ರೀ ವಿ. ರಾಮಚಂದ್ರಶೆಟ್ಟಿ ಗುಡಿಗಾರ್, ಕುಮಟಾ, ಉ.ಕ1998
ಶ್ರೀ ಕೆ. ಶಾಮರಾಯ ಆಚಾರ್ಯ, ಕಾರ್ಕಳ, ದ.ಕ1999
ಶ್ರೀ ಎಂ. ಪರಮೇಶ್ವರಾಚಾರ್ಯ, ಬೆಂಗಳೂರು2000
ಶ್ರೀ ಧನಂಜಯ ಶಿಲ್ಪಿ, ಕಲಬುರಗಿ2001
ಶ್ರೀ ಎನ್.ಕೆ. ಮೃತ್ಯುಂಜಯಾಚಾರ್ಯ2002
ಶ್ರೀ ರು. ಕಾಳಾಚಾರ್, ಚಿತ್ರದುರ್ಗ2003
ಶ್ರೀ ಕೆ. ಕಾಶೀನಾಥ್, ಶಿವಮೊಗ್ಗ2004
ಶ್ರೀ ಸಿ. ಸಿದ್ದಲಿಂಗಯ್ಯ, ಮೈಸೂರು2005
ಶ್ರೀ ಬಿ.ಎನ್. ಚನ್ನಪ್ಪಾಚಾರ್ಯ, ಮೈಸೂರು2006
ಶ್ರೀ ಎಂ.ಬಿ. ಮಾಯಾಚಾರ್ಯ, ಬೆಂಗಳೂರು2007
ಶ್ರೀ ಆರ್. ವೀರಭದ್ರಾಚಾರ್, ಬೆಂಗಳೂರು2008
ಶ್ರೀ ಕೆ.ಸಿ. ಪುಟ್ಟಣ್ಣಾಚಾರ್, ಬೆಂಗಳೂರು2009
ಶ್ರೀ ವೆಂಕಟಾಚಲಪತಿ, ಬೆಂಗಳೂರು2010
ಶ್ರೀಮತಿ ಕನಕಮೂರ್ತಿ, ಬೆಂಗಳೂರು2011
ಶಿಲ್ಪಿ ಶ್ರೀ ಜಿ.ಬಿ. ಹಂಸಾನಂದಚಾರ್ಯ, ಬಳ್ಳಾರಿ2012
ಶ್ರೀ ಬಸಣ್ಣ ಮೋನಪ್ಪ ಬಡಿಗೇರ, (ಕಾಷ್ಠ ಶಿಲ್ಪಿ) ಯಾದಗಿರಿ2013
ಶ್ರೀ ಷಣ್ಮುಖಪ್ಪ ಕಾಶಪ್ಪ ಯರಕದ, ಬಾಗಲಕೋಟೆ2014
ಶ್ರೀಮತಿ ಎನ್. ಪುಷ್ಪಮಾಲಾ, ಬೆಂಗಳೂರು2015
ಶ್ರೀ ವೈ. ಯಂಕಪ್ಪ, ದಾವಣಗೆರೆ2016
ಶ್ರೀ ಎಚ್.ಎನ್. ಕೃಷ್ಣಮೂರ್ತಿ, ಶಿವಮೊಗ್ಗ2017
ಶ್ರೀ ಲಕ್ಷ್ಮೀನಾರಾಯಣ ಆಚಾರ್ಯ2018
ಶ್ರೀ ಬಿ.ಎಸ್‌. ಯೋಗಿರಾಜ2019
ಶ್ರೀ ಹುಸೇನಿ, ಹಂಪಿ ವಿ.ವಿ, ವಿಜಯನಗರ2020
ಶ್ರೀ ಶ್ಯಾಮಸುಂದರ ಭಟ್‌, ಮೈಸೂರು2021
ಶ್ರೀ ಮಹಾದೇವಪ್ಪಾ ಎಸ್‌. ಶಿಲ್ಪಿ, ಕಲಬುರಗಿ2022
ಶ್ರೀ ಎಸ್‌. ಪಿ. ಜಯಣ್ಣಾಚಾರ್‌, ಚಿಕ್ಕಮಗಳೂರು2023

ಸಂತ ಶಿಶುನಾಳ ಶರೀಫ ಪ್ರಶಸ್ತಿ

ನಾಡಿನ ಹೆಮ್ಮೆಯ ಸಂತ ಕವಿ ಶಿಶುನಾಳ ಶರೀಫರ ಹೆಸರಿನಲ್ಲಿ ಸ್ಥಾಪಿಸಲಾದ ಈ ಪ್ರಶಸ್ತಿಯನ್ನು ಸುಗಮ ಸಂಗೀತ ಕ್ಷೇತ್ರದಲ್ಲಿ ಹೆಸರಾಗಿರುವ ಕಲಾವಿದರಿಗೆ ನೀಡಲಾಗುತ್ತದೆ. ಸಂತ ಶಿಶುನಾಳ ಶರೀಫ ಪ್ರಶಸ್ತಿಯನ್ನು ನೀಡಲು ಸರ್ಕಾರವು 1995 ರಲ್ಲಿ ನಿರ್ಧರಿಸಿತು. ಪ್ರಶಸ್ತಿಯು ಪ್ರಶಸ್ತಿ ಪುತ್ಥಳಿ, ಫಲಕ, ಶಾಲು, ಹಾರ ಹಾಗೂ ರೂ. 5.00 ಲಕ್ಷ ಗಳ ನಗದನ್ನು ಒಳಗೊಂಡಿರುತ್ತದೆ. ಇದುವರೆಗೆ ಈ ಪ್ರಶಸ್ತಿಯನ್ನು ಕೆಳಕಂಡ ಮಹನೀಯರು ಪಡೆದಿರುತ್ತಾರೆ.

ಹೆಸರುವರ್ಷ
ಶ್ರೀಮತಿ ಜಯಂತಿದೇವಿ ಹಿರೇಬೆಟ್1995
ಶ್ರೀ ಸಿ. ಅಶ್ವಥ್1996
ಶ್ರೀಮತಿ ಹೆಚ್.ಆರ್. ಲೀಲಾವತಿ1997
ಶ್ರೀಮತಿ ಅನುರಾಧಾ ಧಾರೇಶ್ವರ1998
ಶ್ರೀ ಶಿವಮೊಗ್ಗ ಸುಬ್ಬಣ್ಣ1999
ಶ್ರೀ ಎಚ್.ಕೆ. ನಾರಾಯಣ2000
ಶ್ರೀ ಎಂ. ಪ್ರಭಾಕರ್2001
ಶ್ರೀ ಗರ್ತಿಕೆರೆ ರಾಘಣ್ಣ2002
ಶ್ರೀಮತಿ ಶ್ಯಾಮಲಾ ಜಾಗೀರ್‌ದಾರ್2003
ಶ್ರೀ ಮುರುಗೋಡು ಕೃಷ್ಣದಾಸರು2004
ಶ್ರೀ ಈಶ್ವರಪ್ಪ ಮಿಣಜಿ2005
ಶ್ರೀಮತಿ ಸಿ.ಕೆ. ತಾರಾ2006
ಶ್ರೀ ಕೇಶವ ಗುರಂ2007
ಶ್ರೀ ಗುಡಿಬಂಡೆ ರಾಮಾಚಾರ್2008
ಶ್ರೀ ಟಿ.ವಿ. ರಾಜು, ತುಮಕೂರು2009
ಶ್ರೀಮತಿ ಬಿ.ಕೆ. ಸುಮಿತ್ರ, ಬೆಂಗಳೂರು2010
ಶ್ರೀ ನಾರಾಯಣ್‌ರಾವ್ ಮಾನೆ, ಬೆಂಗಳೂರು2011
ಶ್ರೀ ಎಸ್.ಸೋಮಸುಂದರಂ, ಬೆಂಗಳೂರು2012
ಶ್ರೀಮತಿ ಎಸ್.ಕೆ. ವಸುಮತಿ, ಮೈಸೂರು2013
ಶ್ರೀ ರಾಜಗುರು ಗುರುಸ್ವಾಮಿ ಕಲಿಕೇರಿ, ಗದಗ2014
ಶ್ರೀಮತಿ ರತ್ನಮಾಲ ಪ್ರಕಾಶ್, ಬೆಂಗಳೂರು2015
ಶ್ರೀ ವೈ.ಕೆ. ಮುದ್ದುಕೃಷ್ಣ, ಬೆಂಗಳೂರು2016
ಶ್ರೀ ಅಮೀನ್ ಸಾ ಶರೀಫ್ ವಠಾರ, ವಿಜಯಪುರ2017
ಶ್ರೀ ಹುಸೇನ್ ಸಾಬ್, ಕನಕಗಿರಿ2018
ಶ್ರೀ ಪಂಡಿತ ವಾದಿರಾಜ ನಿಂಬರಗಿ, ಧಾರವಾಡ2019
ಶ್ರೀ ಪುತ್ತೂರು ನರಸಿಂಹ ನಾಯಕ್‌, ದಕ್ಷಿಣ ಕನ್ನಡ2020
ಶ್ರೀ ಚಂದ್ರಶೇಖರ‍ ಜೋಯಿಷಾ (ವಯೋಲಿನ್‌)2021
ಶ್ರೀಮತಿ ಕಸ್ತೂರಿ ಶಂಕರ್‌, ಬೆಂಗಳೂರು2022
ಶ್ರೀ ಎನ್‌. ಬಿ. ಶಿವಲಿಂಗಪ್ಪ, ಶಿವಮೊಗ್ಗ2023

ಕುಮಾರವ್ಯಾಸ ಪ್ರಶಸ್ತಿ

ಪ್ರತಿ ವರ್ಷವೂ ಕರ್ನಾಟಕ ಸರ್ಕಾರವು ಗಮಕ ವಾಚನ, ವ್ಯಾಖ್ಯಾನ ಹಾಗೂ ಕಥಾ ಕೀರ್ತನ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸಿರುವ ಅರ್ಹರಿಗೆ ‘ಕುಮಾರವ್ಯಾಸ ಪ್ರಶಸ್ತಿ’ ನೀಡುತ್ತದೆ. ಈ ಪ್ರಶಸ್ತಿಯು ರೂ. 5.00 ಲಕ್ಷ ರೂಪಾಯಿಗಳ ನಗದು, ಕುಮಾರವ್ಯಾಸರ ಕಂಚಿನ ಪುತ್ಥಳಿ, ಪ್ರಶಸ್ತಿ ಫಲಕ, ಹಾರ, ಶಾಲು ಹಾಗೂ ಫಲ ತಾಂಬೂಲಗಳನ್ನು ಒಳಗೊಂಡಿರುತ್ತದೆ. ಈವರೆಗೆ ‘ಕುಮಾರವ್ಯಾಸ ಪ್ರಶಸ್ತಿ’ ಪಡೆದ ಗಣ್ಯರು ಕೆಳಕಂಡಂತಿದ್ದಾರೆ.

ಹೆಸರುವರ್ಷ
ಶ್ರೀ ಹೆಚ್.ಆರ್. ಕೇಶವಮೂರ್ತಿ, ಶಿವಮೊಗ್ಗ 2009
ಶ್ರೀ ರಘುಪತಿ ಶಾಸ್ತ್ರಿ, ಬೆಂಗಳೂರು2010
ಶ್ರೀ ಹೆಚ್.ಕೆ. ರಾಮಸ್ವಾಮಿ2011
ಶ್ರೀ ಮಾರ್ಕಂಡೇಯ ಅವಧಾನಿಗಳು, ಶಿವಮೊಗ್ಗ2012
ಶ್ರೀ ಬಾಲಚಂದ್ರಶಾಸ್ತ್ರಿ ಹಿರೇವ್ಮಠ, ಗದಗ2013
ಶ್ರೀಮತಿ ಕಮಲಾ ರಾಮಕೃಷ್ಣ, ಬೆಂಗಳೂರು2014
ಶ್ರೀಮತಿ ಕಮಲಮ್ಮ ವಿಠ್ಠಲರಾವ್, ಬೆಂಗಳೂರು2015
ಶ್ರೀ ಎನ್.ಆರ್. ಜ್ಞಾನಮೂರ್ತಿ, ಕೋಲಾರ2016
ಶ್ರೀಮತಿ ಶಾಂತಾ ಕೌತಾಳ, ವಿಜಯಪುರ2017
ಶ್ರೀ ರೇವಣ ಸಿದ್ದಯ್ಯ ಶಾಸ್ತ್ರಿ, ಸಿರಿಗೆರೆ2018
ಶ್ರೀಮತಿ ಗಂಗಮ್ಮ ಕೇಶವಮೂರ್ತಿ, ಬೆಂಗಳೂರು2019
ಶ್ರೀ ರಾಜಾರಾಂ ಮೂರ್ತಿ, ಶಿವಮೊಗ್ಗ2020
ಡಾ. ಎಂ.ಕೆ. ರಾಮಶೇಷನ್‌, ಮೈಸೂರು2021
ಶ್ರೀ ಸಿದ್ದೇಶ್ವರ ಶಾಸ್ತ್ರೀ, ಗದಗ2022
ಶ್ರೀ ಕೃಷ್ಣಗಿರಿ ರಾಮಚಂದ್ರ, ಮೈಸೂರು2023

ಪಂಪ ಪ್ರಶಸ್ತಿ

ಪ್ರತಿ ವರ್ಷವೂ ಕರ್ನಾಟಕ ಸರ್ಕಾರವು ಸಾಹಿತ್ಯ ಕ್ಷೇತ್ರದಲ್ಲಿ ಸುಧೀರ್ಘ ಸೇವೆ ಸಲ್ಲಿಸಿದ ಹಾಗೂ ಅನನ್ಯ ಕೊಡುಗೆಯನ್ನು ನೀಡುತ್ತಾ ಬಂದಿರುವ ಶ್ರೇಷ್ಠರನ್ನು ಆಯ್ಕೆ ಮಾಡಿ ಅವರಿಗೆ ಅತ್ಯುನ್ನತ ಸಾಹಿತ್ಯ ಪ್ರಶಸ್ತಿಯಾದ ‘ಪಂಪ ಪ್ರಶಸ್ತಿ’ ನೀಡುತ್ತದೆ. ಪ್ರಶಸ್ತಿಯು ಫಲಕ, ಶಾಲು, ಹಾರ ಹಾಗೂ ರೂ.5.00 ಲಕ್ಷ ರೂಪಾಯಿಗಳ ನಗದನ್ನು ಒಳಗೊಂಡಿರುತ್ತದೆ. ಇದುವರೆಗೆ ಪ್ರಶಸ್ತಿ ಪಡೆದ ಗಣ್ಯರು ಕೆಳಕಂಡಂತಿದ್ದಾರೆ.

ಹೆಸರುವರ್ಷ
ಡಾ: ಕುವೆಂಪು1987
ಪ್ರೊ: ತೀ.ನಂ. ಶ್ರೀಕಂಠಯ್ಯ1988
ಡಾ: ಶಿವರಾಮಕಾರಂತ1989
ಪ್ರೊ: ಸಂ.ಶಿ. ಭೂಸನೂರಮಠ1990
ಶ್ರೀ ಪು.ತಿ. ನರಸಿಂಹಾಚಾರ್1991
ಪ್ರೊ: ಎ.ಎನ್. ಮೂರ್ತಿರಾವ್1992
ಪ್ರೊ: ಎಂ. ಗೋಪಾಲಕೃಷ್ಣ ಅಡಿಗ1993
ವಿದ್ವಾನ್ ಸೇಡಿಯಾಪು ಕೃಷ್ಣಭಟ್ಟ1994
ಡಾ: ಕೆ.ಎಸ್. ನರಸಿಂಹಸ್ವಾಮಿ1995
ಡಾ: ಎಂ.ಎಂ. ಕಲಬುರ್ಗಿ1996
ಡಾ: ಜಿ.ಎಸ್. ಶಿವರುದ್ರಪ್ಪ1997
ಪ್ರೊ: ದೇ. ಜವರೇಗೌಡ1998
ಡಾ: ಚನ್ನವೀರಕಣವಿ1999
ಪ್ರೊ: ಎಲ್. ಬಸವರಾಜು2000
ಶ್ರೀ ಕೆ.ಪಿ. ಪೂರ್ಣಚಂದ್ರ ತೇಜಸ್ವಿ2001
ಡಾ: ಎಂ. ಚಿದಾನಂದಮೂರ್ತಿ2002
ಡಾ: ಚಂದ್ರಶೇಖರ ಕಂಬಾರ2003
ಶ್ರೀ ಎಚ್.ಎಲ್. ನಾಗೇಗೌಡ2004
ಡಾ: ಎಸ್.ಎಲ್. ಭೈರಪ್ಪ2005
ಡಾ: ಜಿ.ಎಸ್. ಅಮೂರ2006
ಶ್ರೀ ಯಶವಂತ ಚಿತ್ತಾಲ2007
ಡಾ: ಟಿ.ವಿ. ವೆಂಕಟಾಚಲಶಾಸ್ತ್ರಿ2008
ಪ್ರೊ: ಚಂದ್ರಶೇಖರ ಪಾಟೀಲ2009
ಶ್ರೀ ಜಿ.ಎಚ್. ನಾಯಕ್, ಮೈಸೂರು2010
ಡಾ. ಬರಗೂರು ರಾಮಚಂದ್ರಪ್ಪ, ಬೆಂಗಳೂರು2011
ಡಾ. ಡಿ.ಎನ್. ಶಂಕರಭಟ್, ಶಿವಮೊಗ್ಗ2012
ಶ್ರೀ ಕಯ್ಯಾರ ಕಿಞ್ಞಣ್ಣರೈ, ಕಾಸರಗೋಡು2013
ನಾಡೋಜ ಪ್ರೊ. ಜಿ.ವೆಂಕಟಸುಬ್ಬಯ್ಯ, ಬೆಂಗಳೂರು2014
ಡಾ. ಬಿ.ಎ. ಸನದಿ, ಉತ್ತರ ಕನ್ನಡ ಜಿಲ್ಲೆ2015
ಡಾ. ಹಂ.ಪ. ನಾಗರಾಜಯ್ಯ (ಹಂಪನಾ), ಬೆಂಗಳೂರು2016
ನಾಡೋಜ ಡಾ|| ಕೆ.ಎಸ್. ನಿಸಾರ್ ಅಹಮದ್, ಬೆಂಗಳೂರು2017
ಪ್ರೊ. ಷ. ಶೆಟ್ಟರ್, ಬೆಂಗಳೂರು2018
ಡಾ. ಸಿದ್ದಲಿಂಗಯ್ಯ, ಬೆಂಗಳೂರು2019
ಪ್ರೊ. ಸಿ. ಪಿ. ಕೃಷ್ಣಕುಮಾರ್‌, ಮೈಸೂರು2020
ಡಾ. ಬಾಬು ಕೃಷ್ಣಮೂರ್ತಿ, ಬೆಂಗಳೂರು2021
ಡಾ. ಎಸ್‌. ಆರ್‌. ರಾಮಸ್ವಾಮಿ, ಬೆಂಗಳೂರು2022
ಶ್ರೀ ನಾ. ಡಿಸೋಜ, ಶಿವಮೊಗ್ಗ2023
ಡಾ. ಬಿ.ಎ. ವಿವೇಕ ರೈ, ದಕ್ಷಿಣ ಕನ್ನಡ ಜಿಲ್ಲೆ2024

ಪ್ರೊ. ಕೆ.ಜಿ. ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ

ಪ್ರತಿ ವರ್ಷವೂ ಕರ್ನಾಟಕ ಸರ್ಕಾರವು ಕರ್ನಾಟಕದ ಗಡಿಭಾಗದಲ್ಲಿ ಸಾಹಿತ್ಯ ಮತ್ತು ಸಂಶೋಧನೆ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ ಹೆಸರಾಂತ ಸಾಹಿತಿಗಳು ಹಾಗೂ ಸಂಶೋಧಕರಿಗೆ ‘ಪ್ರೊ. ಕೆ.ಜಿ. ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ’ಯನ್ನು ನೀಡುತ್ತದೆ. ಈ ಪ್ರಶಸ್ತಿಯು ರೂ.5 ಲಕ್ಷ ನಗದು, ಪುತ್ಥಳಿ, ಪ್ರಶಸ್ತಿ ಫಲಕ, ಹಾರ, ಶಾಲು ಹಾಗೂ ಫಲತಾಂಬೂಲಗಳನ್ನು ಒಳಗೊಂಡಿರುತ್ತದೆ. ಪ್ರಶಸ್ತಿ ಆಯ್ಕೆ ಪ್ರಕ್ರಿಯೆ 2010–11ರಲ್ಲಿ ಪ್ರಾರಂಭಿಸಲಾಯಿತು.

ಹೆಸರುವರ್ಷ
ಡಾ. ಸರಜೂ ಕಾಟ್ಕರ್‌, ಧಾರವಾಡ2011
ಕುಂ. ವೀರಭದ್ರಪ್ಪ, ಬಳ್ಳಾರಿ2012
ಡಾ. ಎಂ. ಜಿ. ಬಿರಾದಾರ, ಗುಲ್ಬರ್ಗಾ2013
ಶ್ರೀ ಶಾಂತಪ್ಪ ಶರಣಪ್ಪ ದೇವರಾಯ, ಬೀದರ್ (ದೇಶಾಂಶ ಹುಡಗಿ)2014
ಶ್ರೀ ಎಂ. ಎಸ್. ಸಿಂಧೂರ, ಬಾಗಲಕೋಟೆ2015
ಶ್ರೀ ಹಸನ್ ನಯೀಂ ಸುರಕೋಡ2016
ಶ್ರೀ ಬಿ. ಎ. ಜಮಾದಾರ್, ವಿಜಯಪುರ2017
ಶ್ರೀ ಬಿ. ಗಂಗಾಧರ ಮೂರ್ತಿ2018
ಪ್ರೊ. ಸಿದ್ದಣ್ಣ ಉತ್ನಾಳ್‌, ಬೆಳಗಾವಿ2019
ಡಾ. ರಮಾನಂದ ಬನಾರಿ, ಕಾಸರಗೋಡು2020
ಶ್ರೀ ಎಂ. ಎನ್‌. ವೆಂಕಟೇಶ, ಕುಪ್ಪಂ2021
ಡಾ. ಕೆ. ವಿಶ್ವನಾಥ ಕಾರ್ನಾಡ್‌, ದಕ್ಷಿಣ ಕನ್ನಡ (ಮುಂಬೈ)2022
ಶ್ರೀ ಚಂದ್ರಕಾಂತ ಪೋಕಳೆ, ಬೆಳಗಾವಿ2023

ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ

ಕರ್ನಾಟಕದ ಸಾಹಿತ್ಯ ಮತ್ತು ಸಂಸ್ಕೃತಿ ಇತಿಹಾಸದಲ್ಲಿ ದಾನ ಚಿಂತಾಮಣಿ ಅತ್ತಿಮಬ್ಬೆಯ ಕೊಡುಗೆ ಅಮೂಲ್ಯವಾಗಿದೆ. ಅವರು ಸಾವಿರಕ್ಕೂ ಹೆಚ್ಚು ಜೈನ ಗ್ರಂಥಗಳನ್ನು ಬರೆಯುವ ಮೂಲಕ ಧರ್ಮ ಹಾಗೂ ಸಾಹಿತ್ಯದ ಪ್ರಸಾರ ಮಾಡಿದವರು. ಮಹಿಳೆಯರ ಸಾಹಿತ್ಯ ಸೃಜನಶೀಲತೆಯನ್ನು ಗೌರವಿಸುವ ಉದ್ದೇಶದಿಂದ 1995ರಲ್ಲಿ ಈ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು. ಪ್ರಶಸ್ತಿಯು ರೂ.5 ಲಕ್ಷ ನಗದು, ಪುತ್ಥಳಿ, ಪ್ರಶಸ್ತಿ ಫಲಕ, ಹಾರ ಹಾಗೂ ಶಾಲುಗಳನ್ನು ಒಳಗೊಂಡಿರುತ್ತದೆ.

ಹೆಸರುವರ್ಷ
ಶ್ರೀಮತಿ ಟಿ. ಸುನಂದಮ್ಮ1995
ಶ್ರೀಮತಿ ಶಾಂತಾದೇವಿ ಮಾಳವಾಡ1996
ಶ್ರೀಮತಿ ವೈದೇಹಿ (ಜಾನಕಿ ಶ್ರೀನಿವಾಸಮೂರ್ತಿ)1997
ಡಾ. ಕಮಲಾ ಹಂಪನಾ1998
ಶ್ರೀಮತಿ ಮಲ್ಲಿಕಾ ಕಡಿದಾಳ್1999
ಶ್ರೀಮತಿ ಜಯಲಕ್ಷ್ಮಿ ಶ್ರೀನಿವಾಸನ್2000
ಶ್ರೀಮತಿ ಸಾರಾ ಅಬೂಬಕರ್2001
ಡಾ. ಗೀತಾ ನಾಗಭೂಷಣ2002
ಡಾ. ಶೈಲಜಾ ಉಡಚಣ2003
ಡಾ. ಎಂ. ಸುನೀತಾ ಶೆಟ್ಟಿ2004
ಡಾ. ವೀಣಾ ಶಾಂತೇಶ್ವರ2005
ಶ್ರೀಮತಿ ಬಿ.ಟಿ. ಲಲಿತಾ ನಾಯಕ್2006
ಶ್ರೀಮತಿ ಶಶಿಕಲಾ ವೀರಯ್ಯಸ್ವಾಮಿ2007
ಡಾ. ವಿಜಯಾ ದಬ್ಬೆ2008
ಶ್ರೀಮತಿ ಶಾಂತಾದೇವಿ ಕಣವಿ, ಧಾರವಾಡ2009
ಶ್ರೀಮತಿ ಸುಧಾ ಮೂರ್ತಿ, ಬೆಂಗಳೂರು2010
ಡಾ. ಸರಸ್ವತಿ ಚಿಮ್ಮಲಗಿ, ವಿಜಯಪುರ2011
ಡಾ. ಬಿ.ಎನ್. ಸುಮಿತ್ರಾಬಾಯಿ, ಬೆಂಗಳೂರು2012
ಶ್ರೀಮತಿ ಎಂ. ಸರಸ್ವತಿಗೌಡ, ಮಂಡ್ಯ2013
ಡಾ. ಎಚ್.ಎಸ್. ಶ್ರೀಮತಿ, ಬೆಂಗಳೂರು2014
ಡಾ. ನೇಮಿಚಂದ್ರ, ಬೆಂಗಳೂರು2015
ಶ್ರೀಮತಿ ಶಾಂತಿ ನಾಯಕ, ಉತ್ತರ ಕನ್ನಡ2016
ಶ್ರೀಮತಿ ಸ. ಉಷಾ, ಶಿವಮೊಗ್ಗ2017
ಶ್ರೀಮತಿ ಹೆಚ್. ಎಂ. ಬೀಳಗಿ2018
ಡಾ. ಚೂಡಾಮಣಿ ನಂದಗೋಪಾಲ್‌, ಬೆಂಗಳೂರು2019
ಶ್ರೀಮತಿ ಕೌಸಲ್ಯಾ ಧರಣೀಂದ್ರ, ಮೈಸೂರು2020
ಶ್ರೀಮತಿ ಮಾಲತಿ ಪಟ್ಟಣಶೆಟ್ಟಿ, ಧಾರವಾಡ2021
ಶ್ರೀಮತಿ ಬಾನು ಮುಷ್ತಾಕ್‌, ಹಾಸನ2022
ಶ್ರೀಮತಿ ಎಚ್.ಎಸ್. ಮುಕ್ತಾಯಕ್ಕ, ರಾಯಚೂರು2023

ಸಂಗೊಳ್ಳಿ ರಾಯಣ್ಣ ಪ್ರಶಸ್ತಿ

ಕನ್ನಡ ನಾಡಿನ ನೆಲದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಹುತಾತ್ಮನಾದ ಕೆಚ್ಚೆದೆಯ ಗಂಡುಗಲಿ ಸಂಗೊಳ್ಳಿ ರಾಯಣ್ಣ ಅವರ ಸ್ಮರಣಾರ್ಥ, ಕನ್ನಡ ನಾಡು, ನದಿ, ಭಾಷೆ ಮತ್ತು ಸಂಸ್ಕೃತಿಗಾಗಿ ನಿಸ್ವಾರ್ಥ ಸೇವೆ ಹಾಗೂ ಹೋರಾಟ ನಡೆಸಿದವರನ್ನು ಗೌರವಿಸಲು ಕರ್ನಾಟಕ ಸರ್ಕಾರವು 2013ನೇ ಸಾಲಿನಿಂದ ‘ಸಂಗೊಳ್ಳಿ ರಾಯಣ್ಣ ಪ್ರಶಸ್ತಿ’ಯನ್ನು ನೀಡುತ್ತಿದೆ. ಪ್ರಶಸ್ತಿಯು ರೂ.5.00 ಲಕ್ಷ ನಗದು, ಸಂಗೊಳ್ಳಿ ರಾಯಣ್ಣನ ಕಂಚಿನ ಪ್ರತಿಮೆ, ಪ್ರಶಸ್ತಿ ಫಲಕ, ಶಾಲು, ಹಾರ ಮತ್ತು ಫಲತಾಂಬೂಲಗಳನ್ನು ಒಳಗೊಂಡಿರುತ್ತದೆ.

ಪುರಸ್ಕೃತರ ಹೆಸರುವರ್ಷ
ಶ್ರೀ ವಾಟಾಳ್ ನಾಗರಾಜ್‌, ಬೆಂಗಳೂರು2013
ಶ್ರೀಮತಿ ಬಿ.ಟಿ. ಲಲಿತಾ ನಾಯಕ್‌, ಬೆಂಗಳೂರು2014
ಶ್ರೀ ಜಂಬಣ್ಣ ಅಮರಚಿಂತ, ರಾಯಚೂರು2015
ಡಾ. ಚೆನ್ನಣ್ಣ ವಾಲೀಕಾರ, ಕಲಬುರ್ಗಿ2016
ಶ್ರೀ ಜಿ. ಮಾದೇಗೌಡ, ಮಂಡ್ಯ2017
ಶ್ರೀ ಎಸ್‌.ಆರ್‌. ಹಿರೇಮಠ2018
ಶ್ರೀ ರಾ.ನಂ. ಚಂದ್ರಶೇಖರ್‌, ಬೆಂಗಳೂರು2019
ಶ್ರೀ ಕೆ. ಮರುಳಸಿದ್ದಪ್ಪ, ಬೆಂಗಳೂರು2020
ಶ್ರೀ ಹಸನ್ ನಯೀಂ ಸುರಕೋಡ, ಬೆಳಗಾವಿ2021
ಶ್ರೀ ಕೆ. ರಾಮಯ್ಯ, ಕೋಲಾರ2022
ಶ್ರೀ ವೀರಸಂಗಯ್ಯ, ಬಳ್ಳಾರಿ2023

ಬಿ.ವಿ. ಕಾರಂತ ಪ್ರಶಸ್ತಿ

ಭಾರತೀಯ ರಂಗಭೂಮಿ ಹರಿಕಾರರಲ್ಲಿ ಒಬ್ಬರಾದ, ದೇಶ ಕಂಡ ಅಪರೂಪದ ರಂಗಕರ್ಮಿ, ಆಧುನಿಕ ರಂಗಭೂಮಿ ತನ್ನದೇ ಆದ ನೆಲೆ ಕಂಡುಕೊಳ್ಳಲು ತಮ್ಮ ಅಸಾಮಾನ್ಯ ಸಂಗೀತ ಪ್ರತಿಭೆಯಿಂದ ರಂಗ ಸಂಗೀತ ಎಂಬ ಹೊಸ ಪ್ರಕಾರಕ್ಕೆ ನಾಂದಿ ಹಾಡಿದ, ಮೈಸೂರಿನಲ್ಲಿ ರಂಗಾಯಣ ನಿರ್ಮಾಣದ ರೂವಾರಿಯೆನಿಸಿದ ಶ್ರೀ ಬಿ.ವಿ.ಕಾರಂತ (ಬಾಬು ಕೋಡಿ ವೆಂಕಟರಮಣ ಕಾರಂತ) ಇವರ ಹೆಸರಿನಲ್ಲಿ ಕನ್ನಡದ ಹವ್ಯಾಸಿ ರಂಗಕರ್ಮಿಗಳನ್ನು (ಹವ್ಯಾಸಿ ರಂಗಭೂಮಿಯ ನಟ-ನಟಿ, ನಿರ್ದೇಶಕ, ತಂತ್ರಜ್ಞರು, ರಂಗ ಸಂಗೀತ ತಜ್ಞರು ಮತ್ತು ನಾಟಕಕಾರರು) ಗುರ್ತಿಸಿ, ಪ್ರತಿ ವರ್ಷವೂ ಒಬ್ಬರಿಗೆ ರಾಜ್ಯ ಮಟ್ಟದಲ್ಲಿ ‘ಬಿ.ವಿ.ಕಾರಂತ ಪ್ರಶಸ್ತಿ’ಯನ್ನು ನೀಡಲು ಸರ್ಕಾರ ಆದೇಶಿಸಿದೆ. ಈ ಪ್ರಶಸ್ತಿಯು ರೂ.5.00 ಲಕ್ಷ ರೂಪಾಯಿಗಳ ನಗದು, ಪುತ್ಥಳಿ, ಪ್ರಶಸ್ತಿ ಫಲಕ, ಹಾರ, ಶಾಲು ಹಾಗೂ ಫಲ ತಾಂಬೂಲಗಳನ್ನು ಒಳಗೊಂಡಿರುತ್ತದೆ.

ಪುರಸ್ಕೃತರ ಹೆಸರು ವರ್ಷ
ಶ್ರೀ ವಿ. ರಾಮಮೂರ್ತಿ (ಬೆಂಗಳೂರು)2014
ಡಾ. ನ. ರತ್ನ (ಮೈಸೂರು)2015
ಶ್ರೀ ಶ್ರೀನಿವಾಸ ಜಿ. ಕಪ್ಪಣ್ಣ (ಬೆಂಗಳೂರು)2016
ಶ್ರೀ ಎಂ. ಎಸ್. ಸತ್ಯು (ಬೆಂಗಳೂರು)2017
ಶ್ರೀಮತಿ ಎಸ್. ಮಾಲತಿ2018
ಶ್ರೀ ಹೆಚ್.ವಿ. ವೆಂಕಟಸುಬ್ಬಯ್ಯ2019
ಡಾ. ಬಿ.ವಿ. ರಾಜಾರಾಂ2020
ಶ್ರೀ ಅಬ್ದುಲ್ಲಾ ಪಿಂಜಾರ2021
ಶ್ರೀ ಬಸವಲಿಂಗಯ್ಯ (ಬೆಂಗಳೂರು)2022
ಶ್ರೀ ಸದಾನಂದ ಸುವರ್ಣ (ದಕ್ಷಿಣ ಕನ್ನಡ)2023
ಶ್ರೀ ಜೆ. ಲೋಕೇಶ್ (ಬೆಂಗಳೂರು)2024

ಸಂಗೀತ ವಿದ್ಯಾವಂತ ಪ್ರಶಸ್ತಿ

ಪ್ರತಿ ವರ್ಷವೂ ಕರ್ನಾಟಕ ಸರ್ಕಾರವು ಸಂಗೀತ ಕ್ಷೇತ್ರದ ಅಗ್ರಗಣ್ಯ ವಿದ್ವಾಂಸರೊಬ್ಬರನ್ನು ಆಯ್ಕೆ ಮಾಡಿ ಅವರಿಗೆ ‘ರಾಜ್ಯ ಸಂಗೀತ ವಿದ್ವಾನ್’ ಪ್ರಶಸ್ತಿಯನ್ನು ಕೊಟ್ಟು ಗೌರವಿಸುತ್ತಿದೆ. ಪ್ರಶಸ್ತಿಯು ರೂ. 5.00 ಲಕ್ಷಗಳ ನಗದು, ಸರಸ್ವತಿ ಪುತ್ಥಳಿ, ಪ್ರಶಸ್ತಿ ಪ್ರಮಾಣ ಪತ್ರ, ಹಾರ, ಶಾಲು ಹಾಗೂ ಫಲ ತಾಂಬೂಲಗಳನ್ನು ಒಳಗೊಂಡಿರುತ್ತದೆ. ಈವರೆವಿಗೆ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪಡೆದ ಗಣ್ಯರು ಈ ಕೆಳಕಂಡಂತಿದ್ದಾರೆ.

ಪುರಸ್ಕೃತರುವರ್ಷ
ಡಾ. ಪುಟ್ಟರಾಜ ಗವಾಯಿ 1993
ವಿದ್ವಾನ್ ಆರ್.ಕೆ. ಶ್ರೀಕಂಠನ್1994
ಪಂಡಿತ್ ರಾಮರಾವ್ ವಿ. ನಾಯಕ್1995
ಶ್ರೀ ಎ. ಸುಬ್ಬರಾವ್1996
ಶ್ರೀ ಸಂಗಮೇಶ್ವರ ಗುರುವ1997
ಶ್ರೀಮತಿ ಎನ್. ಚೊಕ್ಕಮ್ಮ1998
ಶ್ರೀ ಎಂ.ಎ. ನರಸಿಂಹಾಚಾರ್1999
ಶ್ರೀ ಟಿ.ಎಸ್. ತಾತಾಚಾರ್2000
ಶ್ರೀ ಆರ್.ಕೆ. ಬಿಜಾಪುರೆ2001
ಶ್ರೀ ಆರ್. ವಿಶ್ವೇಶ್ವರನ್2002
ಶ್ರೀ ಆರ್. ವಿಶ್ವೇಶ್ವರನ್2003
ಪಂಡಿತ್ ಚಂದ್ರಶೇಖರ ಪುರಾಣಿಕ್ ಮಠ2004
ವಿದ್ವಾನ್ ಎಸ್. ಮಹದೇವಪ್ಪ2005
ಪಂಡಿತ್ ಮಾಣಿಕರಾವ್ ರಾಯಚೂರ್‌ಕರ್2006
ಪಂಡಿತ್ ಸಿದ್ಧರಾಮಸ್ವಾಮಿ ಕೋರವಾರ್2007
ಡಾ. ಎಂ.ಆರ್. ಗೌತಮ್, ಸಿಕಂದರಾಬಾದ್2008
ಶ್ರೀ ಬೆಳಕವಾಡಿ ರಂಗಸ್ವಾಮಿ ಅಯ್ಯಂಗಾರ್, ಬೆಂಗಳೂರು2009
ಪಂಡಿತ್ ಶೇಷಗಿರಿ ಹಾನಗಲ್, ಧಾರವಾಡ2010
ರಾ. ಸತ್ಯನಾರಾಯಣ, ಮೈಸೂರು2011
ಪಂಡಿತ್ ಪಂಚಾಕ್ಷರಿ ಸ್ವಾಮಿ ಮತ್ತಿಗಟ್ಟಿ, ಧಾರವಾಡ2012
ಡಾ. ವಿ.ಎಸ್. ಸಂಪತ್ಕುಮಾರಾಚಾರ್ಯ2013
ಪಂ. ಇಂದೂಧರ ನಿರೋಡಿ, ಮೈಸೂರು2014
ಶ್ರೀ ವಿ.ಎಸ್. ರಾಜಗೋಪಾಲ್, ಬೆಂಗಳೂರು2015
ಶ್ರೀ ಸೋಮನಾಥ ಮರಡೂರ, ಧಾರವಾಡ2016
ಶ್ರೀಮತಿ ಎ. ರಾಜಮ್ಮ ಕೇಶವಮೂರ್ತಿ, ಬೆಂಗಳೂರು2017
ಪಂಡಿತ್ ರಾಜೀವ್ ತಾರಾನಾಥ್, ಬೆಂಗಳೂರು2018
ಪ್ರೊ. ಬಿ.ಎಸ್. ವಿಜಯರಾಘವನ್, ಮೈಸೂರು2019
ಪಂಡಿತ್ ವಿನಾಯಕ ತೊರವಿ, ಧಾರವಾಡ2020
ಶ್ರೀ ಎ.ವಿ. ಆನಂದ್, ಬೆಂಗಳೂರು2021
ಶ್ರೀಮತಿ ಲಲಿತ್ ಜೆ. ರಾವ್, ಬೆಂಗಳೂರು2022
ಡಾ. ಪದ್ಮಾ ಮೂರ್ತಿ2023

ಅಕ್ಕ ಮಹಾದೇವಿ ಪ್ರಶಸ್ತಿ

ಕರ್ನಾಟಕ ಸರ್ಕಾರವು ಶಿವಶರಣೆಯರ ಆಶಯಗಳಿಗೆ ಅನುಗುಣವಾಗಿ ಸೇವೆ ಸಲ್ಲಿಸುತ್ತಿರುವ ಯಾವುದೇ ಕ್ಷೇತ್ರದ ಮಹಿಳಾ ಸಾಧಕರನ್ನು ಮತ್ತು ಮಹಿಳಾ ಸಂಘ ಸಂಸ್ಥೆಗಳನ್ನು ಗೌರವಿಸುವ ಸಲುವಾಗಿ 2016ನೇ ಸಾಲಿನಲ್ಲಿ ‘ಶ್ರೇಷ್ಠ ವಚನಕಾರ್ತಿ ಶಿವಶರಣೆ ಅಕ್ಕಮಹಾದೇವಿ ಪ್ರಶಸ್ತಿ’ಯನ್ನು ಸ್ಥಾಪಿಸಿದೆ. ಇದು ರಾಜ್ಯಮಟ್ಟದ ಪ್ರತಿಷ್ಠಿತ ಪ್ರಶಸ್ತಿಯಾಗಿದ್ದು, ಪ್ರಶಸ್ತಿ ಮೊತ್ತ ರೂ.5.00ಲಕ್ಷಗಳ ನಗದು, ಪ್ರಶಸ್ತಿ ಪುತ್ಥಳಿ, ಪ್ರಶಸ್ತಿ ಫಲಕಗಳನ್ನು ಒಳಗೊಂಡಿರುತ್ತದೆ.

ಪುರಸ್ಕೃತರ ಹೆಸರುವರ್ಷ
ಡಾ. ಮಲ್ಲಿಕಾಘಂಟಿ2016
ಅಧ್ಯಕ್ಷರು, ಅಕ್ಕಮಹಾದೇವಿ ಸಮಿತಿ (ರಿ), ಉಡುತಡಿ, ಶಿವಮೊಗ್ಗ ಜಿಲ್ಲೆ2017
ಶ್ರೀಮತಿ ದು. ಸರಸ್ವತಿ, ಬೆಂಗಳೂರು2018
ಡಾ. ಜಯಶ್ರೀ ದಂಡೆ, ಕಲಬುರಗಿ2019
ಜಗನ್ಮಾತ ಅಕ್ಕಮಹಾದೇವಿ ಆಶ್ರಮ ಟ್ರಸ್ಟ್, ಧಾರವಾಡ2020
ಡಾ. ಆರ್. ಸುನಂದಮ್ಮ, ಮಂಡ್ಯ2021
ಶ್ರೀಮತಿ ಮೀನಾಕ್ಷಿ ಬಾಳಿ, ಕಲಬುರಗಿ2022
ಡಾ. ವಸುಂಧರಾ ಭೂಪತಿ, ಬೆಂಗಳೂರು2023

ಭಗವಾನ್ ಮಹಾವೀರ ಶಾಂತಿ ಪ್ರಶಸ್ತಿ

ಕರ್ನಾಟಕ ಸರ್ಕಾರವು ಜೈನ ತತ್ವಗಳಲ್ಲಿ ಪ್ರಮುಖವಾದ ಅಹಿಂಸಾ, ಸಹಿಷ್ಣುತೆ ಮತ್ತು ಮಾನವ ಸೇವೆಯ ಮೌಲ್ಯಗಳನ್ನು ಉತ್ತೇಜಿಸುವ ಉದ್ದೇಶದಿಂದ ‘ಭಗವಾನ್ ಮಹಾವೀರ ಶಾಂತಿ ಪ್ರಶಸ್ತಿ’ಯನ್ನು ಸ್ಥಾಪಿಸಿದೆ. ಈ ಪ್ರಶಸ್ತಿಯನ್ನು ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಮಾನವೀಯತೆಯ ವಿಸ್ತರಣೆಗೆ ಸೇವೆ ಸಲ್ಲಿಸಿದ ಗಣ್ಯ ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ನೀಡಲಾಗುತ್ತದೆ. ಪ್ರಶಸ್ತಿಯು ರೂ.5.00 ಲಕ್ಷ ನಗದು, ಫಲಕ ಹಾಗೂ ಗೌರವ ಪತ್ರಗಳನ್ನು ಒಳಗೊಂಡಿರುತ್ತದೆ.

ಪುರಸ್ಕೃತರ ಹೆಸರುವರ್ಷ
ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ, ತುಮಕೂರು 2016
ಶ್ರೀ ಚಾರುಕೀರ್ತಿ ಭಟ್ಟಾರಕ್ಕ ಪಟ್ಟಾಚಾರ್ಯರು, ಶ್ರವಣಬೆಳಗೊಳ2017
ಶ್ರೀಮತಿ ಚನ್ನಮ್ಮ ಹಳ್ಳಿಕೇರಿ2018
ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗಡೆ, ದಕ್ಷಿಣ ಕನ್ನಡ 2019
ಶ್ರೀ ಜಪಾನಂದ ಸ್ವಾಮೀಜಿ, ಪಾವಗಡ2020
ಶ್ರೀ ಸದಾನಂದ ಮಾಸ್ಟರ್‌, ಸಾಮಾಜಿಕ ಹೋರಾಟಗಾರರು, ಕೇರಳ2021
ಶ್ರೀ ಜಿನದತ್ತ ದೇಸಾಯಿ, ಧಾರವಾಡ2022
ಗಾಂಧಿ ಸೇವಾಶ್ರಮ, ಗುಜರಾತ 2023
KPSC Footer