ಆನ್‌ಲೈನ್ ತರಗತಿಗಳು
| ನೇರ ತರಗತಿಗಳು | ಟೆಸ್ಟ್ ಸರಣಿ | ಅಂಚೆ ಪ್ಯಾಕೇಜ್ | 📞 9141066148
ಭಾರತದ ಭೂಗೋಳ - ಸಂಪೂರ್ಣ ಮಾಹಿತಿ | KPSC Mitra GK

ಭಾರತದ ಭೂಗೋಳ: ಸಮಗ್ರ ಮಾಹಿತಿ

1. ಭಾರತದ ಭೌಗೋಳಿಕತೆ

ಭಾರತವು ಏಷ್ಯಾ ಖಂಡದ ದಕ್ಷಿಣ ಭಾಗದಲ್ಲಿರುವ ಒಂದು ವಿಶಾಲವಾದ ಪರ್ಯಾಯ ದ್ವೀಪವಾಗಿದೆ. ಇದನ್ನು 'ಇಂಡಿಯಾ' ಅಥವಾ 'ಹಿಂದೂಸ್ತಾನ' ಎಂದೂ ಕರೆಯುತ್ತಾರೆ.

ಅಕ್ಷಾಂಶ: 8°.4' ಉ. ರಿಂದ 37°.6' ಉ. ವರೆಗೆ
ರೇಖಾಂಶ: 68°.7' ಪೂ. ರಿಂದ 97°.25' ಪೂ. ವರೆಗೆ
ಉತ್ತರ-ದಕ್ಷಿಣ ಉದ್ದ: 3214 ಕಿ.ಮೀ.
ಪೂರ್ವ-ಪಶ್ಚಿಮ ಅಗಲ: 2933 ಕಿ.ಮೀ.
ಪ್ರಮುಖಾಂಶಗಳು:
ಅತ್ಯಂತ ದಕ್ಷಿಣ ತುದಿ: ಇಂದಿರಾ ಪಾಯಿಂಟ್ (6°.45' ಉ. ಅಕ್ಷಾಂಶ - ಗ್ರೇಟ್ ನಿಕೋಬಾರ್).
ಮಧ್ಯರೇಖೆ: 23½° ಕರ್ಕಾಟಕ ಸಂಕ್ರಾಂತಿ ವೃತ್ತವು ಭಾರತದ ಮಧ್ಯಭಾಗದಲ್ಲಿ ಹಾದುಹೋಗುತ್ತದೆ.
ಭಾರತದ ಪ್ರಮಾಣಿತ ಸಮಯ (IST): 82½° ಪೂರ್ವ ರೇಖಾಂಶ (ಅಲಹಾಬಾದ್ ಮೇಲೆ ಹಾದುಹೋಗುತ್ತದೆ). ಇದು ಗ್ರೀನ್‌ವಿಚ್ ಸಮಯಕ್ಕಿಂತ 5 ಗಂ. 30 ನಿಮಿಷ ಮುಂದಿದೆ.
ಗಡಿ ರೇಖೆಗಳು:
ಭೂಗಡಿ: 15,200 ಕಿ.ಮೀ. (7 ರಾಷ್ಟ್ರಗಳು: ಪಾಕಿಸ್ತಾನ, ಅಫ್ಘಾನಿಸ್ತಾನ, ಚೀನಾ, ನೇಪಾಳ, ಭೂತಾನ್, ಬಾಂಗ್ಲಾದೇಶ, ಮಯನ್ಮಾರ್).
ಜಲಗಡಿ: 6,100 ಕಿ.ಮೀ. (ದ್ವೀಪಗಳೂ ಸೇರಿದಂತೆ 7,516.5 ಕಿ.ಮೀ. - ಶ್ರೀಲಂಕಾ ಮತ್ತು ಮಾಲ್ಡೀವ್ಸ್ ಪ್ರಮುಖ ಜಲಗಡಿ ರಾಷ್ಟ್ರಗಳು).

ಭಾರತದ ನೆರೆಯ ರಾಷ್ಟ್ರಗಳು

ಭಾರತವು ಒಟ್ಟು 9 ನೆರೆಯ ರಾಷ್ಟ್ರಗಳನ್ನು ಹೊಂದಿದೆ. ಅವುಗಳಲ್ಲಿ 7 ದೇಶಗಳೊಂದಿಗೆ ಭೂಗಡಿಯನ್ನು ಮತ್ತು 2 ದೇಶಗಳೊಂದಿಗೆ ಜಲಗಡಿಯನ್ನು ಹಂಚಿಕೊಂಡಿದೆ.

ಕ್ರ.ಸಂ. ರಾಷ್ಟ್ರಗಳು ಗಡಿರೇಖೆ ಉದ್ದ
1.ಬಾಂಗ್ಲಾದೇಶ4096 ಕಿ.ಮೀ.
2.ಚೀನಾ3917 ಕಿ.ಮೀ.
3.ಪಾಕಿಸ್ತಾನ3310 ಕಿ.ಮೀ.
4.ನೇಪಾಳ1752 ಕಿ.ಮೀ.
5.ಮಯನ್ಮಾರ್1458 ಕಿ.ಮೀ.
6.ಭೂತಾನ್587 ಕಿ.ಮೀ.
7.ಅಫ್ಘಾನಿಸ್ತಾನ80 ಕಿ.ಮೀ.
8.ಶ್ರೀಲಂಕಾಜಲಗಡಿ
9.ಮಾಲ್ಡೀವ್ಸ್ಜಲಗಡಿ
ಪರೀಕ್ಷಾ ದೃಷ್ಟಿಕೋನ (Exam Points):
ಅತಿ ಉದ್ದವಾದ ಭೂಗಡಿ: ಬಾಂಗ್ಲಾದೇಶ ಜೊತೆಗೆ (4096 ಕಿ.ಮೀ. - ಸುಮಾರು 26.96%).
ಅತಿ ಕಡಿಮೆ ಭೂಗಡಿ: ಅಫ್ಘಾನಿಸ್ತಾನ ಜೊತೆಗೆ (80 ಕಿ.ಮೀ. - ಸುಮಾರು 0.52%).
ಜಲಗಡಿ ರಾಷ್ಟ್ರಗಳು: ಭಾರತದ ದಕ್ಷಿಣಕ್ಕಿರುವ ಶ್ರೀಲಂಕಾ ಮತ್ತು ಮಾಲ್ಡೀವ್ಸ್ ಪ್ರಮುಖ ಜಲಗಡಿ ದೇಶಗಳು.

2. ಭಾರತದ ಪ್ರಾಕೃತಿಕ ಲಕ್ಷಣಗಳು

ಭೂ ಸ್ವರೂಪದ ಆಧಾರದ ಮೇಲೆ ಭಾರತವನ್ನು ನಾಲ್ಕು ಪ್ರಧಾನ ವಿಭಾಗಗಳಾಗಿ ವಿಂಗಡಿಸಲಾಗಿದೆ:

1. ಉತ್ತರದ ಪರ್ವತಗಳು (The Northern Mountains)

ಇದು ಪಶ್ಚಿಮದ ಪಾಮಿರ್ ಗ್ರಂಥಿಯಿಂದ ಅರುಣಾಚಲ ಪ್ರದೇಶದವರೆಗೆ 2500 ಕಿ.ಮೀ ವಿಸ್ತರಿಸಿದೆ. ಇವು ಮೂರು ಶ್ರೇಣಿಗಳನ್ನು ಹೊಂದಿವೆ:

2. ಉತ್ತರ ಮಹಾಮೈದಾನ (The Great Northern Plains)

ಸಿಂಧೂ, ಗಂಗಾ ಮತ್ತು ಬ್ರಹ್ಮಪುತ್ರ ನದಿಗಳು ಹೊತ್ತು ತಂದ ಮೆಕ್ಕಲು ಮಣ್ಣಿನಿಂದ ಈ ಮೈದಾನ ನಿರ್ಮಿತವಾಗಿದೆ.

ಬಬರ್: ತಪ್ಪಲಿನಲ್ಲಿರುವ ದಪ್ಪ ಶಿಲಾ ಚೂರುಗಳ ಸಂಚಯನ.
ಭಂಗರ್: ಪುರಾತನ ಮೆಕ್ಕಲು ಮಣ್ಣಿನ ವಲಯ.
ಖಾದರ್: ಇತ್ತೀಚಿನ ಹೊಸ ಮೆಕ್ಕಲು ಮಣ್ಣಿನ ವಲಯ.

3. ಪರ್ಯಾಯ ಪ್ರಸ್ಥಭೂಮಿ (The Peninsular Plateau)

ಇದು ಭಾರತದ ಅತಿ ದೊಡ್ಡ ಮತ್ತು ಪ್ರಾಚೀನ ಭೂಭಾಗವಾಗಿದೆ (16 ಲಕ್ಷ ಚ.ಕಿ.ಮೀ).

4. ಕರಾವಳಿ ಮೈದಾನಗಳು ಮತ್ತು ದ್ವೀಪಗಳು

A) ಪಶ್ಚಿಮ ಕರಾವಳಿ:

ಕಚ್‌ನಿಂದ ಕನ್ಯಾಕುಮಾರಿವರೆಗೆ ಹಬ್ಬಿದೆ. ವಿಭಾಗಗಳು: ಕೊಂಕಣ (ಗೋವಾ/ಮಹಾ), ಕೆನರಾ (ಕರ್ನಾಟಕ), ಮಲಬಾರ್ (ಕೇರಳ).

B) ಪೂರ್ವ ಕರಾವಳಿ:

ಅತಿ ಅಗಲವಾಗಿದ್ದು ಮಹಾನದಿ, ಗೋದಾವರಿ, ಕೃಷ್ಣಾ, ಕಾವೇರಿ ನದಿಗಳ ಮುಖಜ ಭೂಮಿ ಹೊಂದಿದೆ. ಇಲ್ಲಿ ಚಿಲ್ಕಾ (ಒಡಿಸ್ಸಾ) ಉಪ್ಪು ನೀರಿನ ಸರೋವರವಿದೆ.

ಕರಾವಳಿಪ್ರಮುಖ ಬಂದರುಗಳು
ಪಶ್ಚಿಮ ಬಂದರುಗಳುಕಾಂಡ್ಲಾ, ಮುಂಬೈ, ಮರ್ಮಗೋವಾ, ನವಮಂಗಳೂರು, ಕೊಚ್ಚಿನ್.
ಪೂರ್ವ ಬಂದರುಗಳುಕೋಲ್ಕತ್ತಾ, ಪಾರಾದೀಪ, ವಿಶಾಖಪಟ್ಟಣಂ, ಚೆನ್ನೈ, ಪೋರ್ಟ್ ಬ್ಲೇರ್.
ದ್ವೀಪಗಳು (Total 247):
ಬಂಗಾಳ ಕೊಲ್ಲಿ: 204 ದ್ವೀಪಗಳು (ಅಂಡಮಾನ್ ನಿಕೋಬಾರ್ - ಜ್ವಾಲಾಮುಖಿ ನಿರ್ಮಿತ).
ಅರಬ್ಬಿ ಸಮುದ್ರ: 43 ದ್ವೀಪಗಳು (ಲಕ್ಷ ದ್ವೀಪಗಳು - ಹವಳದ ದ್ವೀಪಗಳು).
ಇಂದಿರಾ ಪಾಯಿಂಟ್: ಭಾರತದ ದಕ್ಷಿಣದ ತುದಿ (ನಿಕೋಬಾರ್ ದ್ವೀಪದಲ್ಲಿದೆ).

3. ಭಾರತದ ವಾಯುಗುಣ (Climate of India)

ಭಾರತವು ಉಷ್ಣವಲಯದ ಮಾನ್ಸೂನ್ ಮಾದರಿಯ ವಾಯುಗುಣವನ್ನು ಹೊಂದಿದೆ. 'ಮಾನ್ಸೂನ್' ಎಂಬ ಪದವು ಅರೇಬಿಕ್ ಭಾಷೆಯ 'ಮೌಸಮ್' (ಋತುಮಾನ) ಎಂಬ ಪದದಿಂದ ಬಂದಿದೆ.

ಭಾರತದ ನಾಲ್ಕು ಋತುಮಾನಗಳು

1. ಬೇಸಿಗೆ ಕಾಲ (ಮಾರ್ಚ್ - ಮೇ)

  • ಅತಿ ಹೆಚ್ಚು ಉಷ್ಣಾಂಶ: ಗಂಗಾನಗರ (52°C).
  • ಸ್ಥಳೀಯ ಮಳೆ: ಕರ್ನಾಟಕದಲ್ಲಿ 'ಕಾಫಿ ಹೂಮಳೆ', ಕೇರಳದಲ್ಲಿ 'ಮಾವಿನ ಕೊಯ್ದು'.
  • ಮಾರುತಗಳು: ಪ.ಬಂಗಾಳದಲ್ಲಿ 'ಕಾಲಬೈಸಾಕಿ', ರಾಜಸ್ಥಾನದಲ್ಲಿ 'ಲೂ'.

2. ಮುಂಗಾರು ಮಳೆಗಾಲ (ಜೂನ್ - ಸೆಪ್ಟೆಂಬರ್)

  • ನೈಋತ್ಯ ಮಾನ್ಸೂನ್ ಮಾರುತಗಳಿಂದ ಶೇ. 75ರಷ್ಟು ಮಳೆ.
  • ಎರಡು ಶಾಖೆಗಳು: ಅರಬ್ಬಿ ಸಮುದ್ರ ಶಾಖೆ ಮತ್ತು ಬಂಗಾಳ ಕೊಲ್ಲಿ ಶಾಖೆ.
  • ಪಶ್ಚಿಮ ಘಟ್ಟಗಳ ಪೂರ್ವ ಭಾಗವು 'ಮಳೆ ನೆರಳಿನ ಪ್ರದೇಶ'ವಾಗಿದೆ.

3. ಹಿಂಗಾರು ಮಳೆಗಾಲ (ಅಕ್ಟೋಬರ್ - ನವೆಂಬರ್)

  • ಈಶಾನ್ಯ ಮಾನ್ಸೂನ್ ಮಾರುತಗಳ ಕಾಲ.
  • ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತಗಳು ಸಂಭವಿಸಿ ತಮಿಳುನಾಡು, ಆಂಧ್ರ ಕರಾವಳಿಗೆ ಮಳೆ ತರುತ್ತವೆ.

4. ಚಳಿಗಾಲ (ಡಿಸೆಂಬರ್ - ಫೆಬ್ರವರಿ)

  • ಉತ್ತರ ಭಾರತದಲ್ಲಿ ಅತಿ ಕಡಿಮೆ ಉಷ್ಣಾಂಶ.
  • ದೇಶದ ವಾರ್ಷಿಕ ಮಳೆಯ ಕೇವಲ ಶೇ. 2ರಷ್ಟು ಮಾತ್ರ ಈ ಅವಧಿಯಲ್ಲಿ ಬೀಳುತ್ತದೆ.

ಮಳೆಯ ಹಂಚಿಕೆ (ಸರಾಸರಿ 118 ಸೆಂ.ಮೀ)

ಪ್ರದೇಶ ವಿವರಣೆ
ಅಧಿಕ ಮಳೆ (>250cm) ಪಶ್ಚಿಮ ಘಟ್ಟಗಳು, ಈಶಾನ್ಯ ರಾಜ್ಯಗಳು. ವಿಶ್ವದಲ್ಲೇ ಅತಿ ಹೆಚ್ಚು ಮಳೆ ಪಡೆಯುವ ಸ್ಥಳ: ಮೌಸಿನ್ ರಾಮ್ (ಮೇಘಾಲಯ).
ಕಡಿಮೆ ಮಳೆ (<50cm) ಥಾರ್ ಮರುಭೂಮಿ, ಕಛ್ ಪ್ರದೇಶ. ಭಾರತದಲ್ಲಿ ಅತಿ ಕಡಿಮೆ ಮಳೆ ಪಡೆಯುವ ಸ್ಥಳ: ರೊಯ್ಲಿ (ಜೈಸಲ್ಮೇರ್).
ನೆನಪಿರಲಿ:
ಭಾರತದಲ್ಲಿ ಮಳೆಯು ಅನಿಶ್ಚಿತ ಮತ್ತು ಅಕಾಲಿಕವಾಗಿರುವುದರಿಂದ, ಭಾರತದ ಕೃಷಿಯನ್ನು "ಮಾನ್ಸೂನ್ ಜೊತೆಗಿನ ಜೂಜಾಟ" ಎಂದು ಕರೆಯಲಾಗುತ್ತದೆ.

4 ಮಣ್ಣಿನ ವಿಧಗಳು

ಮಣ್ಣಿನ ವಿಧ ಲಕ್ಷಣಗಳು ಮತ್ತು ವ್ಯಾಪ್ತಿ ಪ್ರಮುಖ ಬೆಳೆಗಳು
1. ಮೆಕ್ಕಲು ಮಣ್ಣು ನದಿಗಳು ಪರ್ವತಗಳಿಂದ ಹೊತ್ತು ತಂದು ಸಂಚಯಿಸಿದ ಮಣ್ಣು. ಯು.ಪಿ, ಬಿಹಾರ, ಪಂಜಾಬ್ ಪ್ರದೇಶಗಳಲ್ಲಿ ಕಂಡುಬರುತ್ತದೆ. ಗೋಧಿ, ಭತ್ತ, ಕಬ್ಬು, ಹತ್ತಿ, ಸೆಣಬು.
2. ಕಪ್ಪು ಮಣ್ಣು (ರೆಗರ್) ಅಗ್ನಿಶಿಲೆಗಳ ಶಿಥಿಲೀಕರಣದಿಂದ ಉಂಟಾದ 'ಡೆಕ್ಕನ್ ಟ್ರ್ಯಾಪ್'. ಮಹಾರಾಷ್ಟ್ರ, ಗುಜರಾತ್, ಉ.ಕರ್ನಾಟಕದಲ್ಲಿ ಹರಡಿದೆ. ಹತ್ತಿ (ಕಪ್ಪು ಹತ್ತಿ ಮಣ್ಣು), ಜೋಳ, ಈರುಳ್ಳಿ, ಮೆಣಸಿನಕಾಯಿ.
3. ಕೆಂಪು ಮಣ್ಣು ಸ್ಪಟಿಕ ಶಿಲೆಗಳ ಶಿಥಿಲೀಕರಣದಿಂದ ಉಂಟಾಗಿದ್ದು, ಕಬ್ಬಿಣದ ಆಕ್ಸೈಡ್ ಇರುವುದರಿಂದ ಕೆಂಪು ಬಣ್ಣ ಹೊಂದಿದೆ. ರಾಗಿ, ಹೊಗೆಸೊಪ್ಪು, ಎಣ್ಣೆಕಾಳು, ಕಬ್ಬು, ಭತ್ತ.
4. ಜಂಬಿಟ್ಟಿಗೆ (ಲ್ಯಾಟರೈಟ್) 200 ಸಂ.ಮೀ ಗಿಂತ ಅಧಿಕ ಮಳೆ ಮತ್ತು ಹೆಚ್ಚು ಉಷ್ಣಾಂಶವಿರುವ ಪಶ್ಚಿಮ ಘಟ್ಟಗಳು ಹಾಗೂ ವಿಂಧ್ಯ ಪರ್ವತಗಳಲ್ಲಿ ಕಂಡುಬರುತ್ತದೆ. ಕಾಫಿ, ಚಹಾ, ತೋಟಗಾರಿಕೆ ಬೆಳೆಗಳು.
5. ಮರುಭೂಮಿ ಮಣ್ಣು ಅಧಿಕ ಉಷ್ಣಾಂಶ, ಕಡಿಮೆ ಮಳೆಯಿಂದ ಮರಳು ಮಣ್ಣು ನಿರ್ಮಾಣವಾಗುತ್ತದೆ. ರಾಜಸ್ಥಾನದ ಥಾರ್ ಮರುಭೂಮಿ ಭಾಗದಲ್ಲಿದೆ. ಸಜ್ಜೆ, ವಿಜೂರ್ (ಬಿಜೋರ).
6. ಪರ್ವತ ಮಣ್ಣು ಕೊಳೆತ ಜೈವಿಕಾಂಶಗಳು ಅಧಿಕವಾಗಿದ್ದು, ಹಿಮಾಲಯದ ಪಾದ ಬೆಟ್ಟಗಳು ಮತ್ತು ಪಶ್ಚಿಮ ಘಟ್ಟಗಳಲ್ಲಿ ಕಂಡುಬರುತ್ತದೆ. ಕಾಫಿ, ಚಹಾ, ಸಾಂಬಾರ ಪದಾರ್ಥಗಳು, ಹಣ್ಣು.
ಮಣ್ಣಿನ ಸವೆತ ಮತ್ತು ಪರಿಣಾಮಗಳು:
ಕಾರಣಗಳು: ಅರಣ್ಯ ನಾಶ, ಅತಿಯಾದ ಮೇಯಿಸುವಿಕೆ, ಅವೈಜ್ಞಾನಿಕ ಬೇಸಾಯ, ಅಧಿಕ ನೀರಾವರಿ ಬಳಕೆ.
ಪರಿಣಾಮಗಳು: ನದಿಗಳಲ್ಲಿ ಹೂಳು ತುಂಬಿ ಪ್ರವಾಹ ಉಂಟಾಗುವುದು, ಅಂತರ್ಜಲ ಕುಸಿತ, ಕೃಷಿ ಭೂಮಿ ಫಲವತ್ತತೆ ಕಳೆದುಕೊಳ್ಳುವುದು.
ಮಣ್ಣಿನ ಸಂರಕ್ಷಣೆ (Conservation):
• ಇಳಿಜಾರಿಗೆ ಅಡ್ಡಲಾಗಿ ಉಳುಮೆ ಮಾಡುವುದು (Contour Ploughing).
• ಅಡ್ಡ ಬದುಗಳ ನಿರ್ಮಾಣ ಮತ್ತು ಚೆಕ್ ಡ್ಯಾಮ್‌ಗಳ ನಿರ್ಮಾಣ.
• ಅರಣ್ಯ ನಾಶ ತಡೆಗಟ್ಟುವುದು ಮತ್ತು ಅರಣ್ಯೀಕರಣ ಮಾಡುವುದು.

ಸಂಕ್ಷಿಪ್ತ ಮಾಹಿತಿ

5 ಭಾರತದ ಅರಣ್ಯಗಳು

ಒಂದು ಪ್ರದೇಶದಲ್ಲಿ ಪ್ರಕೃತಿದತ್ತವಾಗಿ ಬೆಳೆದಿರುವ ಎಲ್ಲಾ ಸಸ್ಯ ಸಮೂಹವನ್ನು ಅರಣ್ಯಗಳು / ಸ್ವಾಭಾವಿಕ ಸಸ್ಯ ವರ್ಗ ಎಂದು ಕರೆಯುತ್ತಾರೆ.

ಭಾರತದಲ್ಲಿ (2015 ಅಂದಾಜು) 7.016 ಲಕ್ಷ ಚ.ಕಿ.ಮೀ ಅರಣ್ಯವಿದ್ದು, ಇದು ದೇಶದ ಭೌಗೋಳಿಕ ಕ್ಷೇತ್ರದ ಶೇ. 21.34 ಆಗಿದೆ.

A) ಅರಣ್ಯಗಳ ಪ್ರಮುಖ ವಿಧಗಳು

1. ನಿತ್ಯ ಹರಿದ್ವರ್ಣ ಅರಣ್ಯಗಳು:
ಮಳೆ: 250 ಸೆಂ.ಮೀ. ಗಿಂತ ಹೆಚ್ಚು.
• ವರ್ಷಪೂರ್ತಿ ಹಸಿರಾಗಿರುವ ಅರಣ್ಯಗಳು.
ಪ್ರದೇಶಗಳು: ಪಶ್ಚಿಮ ಘಟ್ಟಗಳು, ಈಶಾನ್ಯ ಭಾರತ, ಅಂಡಮಾನ್-ನಿಕೋಬಾರ್.
ಮರಗಳು: ಮಹಾಗನಿ, ಎಬೋನಿ, ಕರಿಮರ, ಬಿದಿರು.
2. ಎಲೆ ಉದುರಿಸುವ ಮಾನ್ಸೂನ್ ಅರಣ್ಯಗಳು:
• ಭಾರತದಲ್ಲಿ ಅತಿ ಹೆಚ್ಚು ವಿಸ್ತಾರ ಹೊಂದಿದೆ (65.5%).
ಮಳೆ: 75–250 ಸೆಂ.ಮೀ.
• ಬೇಸಿಗೆಯಲ್ಲಿ ಎಲೆ ಉದುರುತ್ತವೆ.
ಮರಗಳು: ತೇಗ, ಸಾಲ, ಬೀಟೆ, ತಾರೆ, ಬಿದಿರು.
• ಕರ್ನಾಟಕದಲ್ಲಿ ಪ್ರಮುಖ ಮರ: ಶ್ರೀಗಂಧ.
3. ಉಷ್ಣವಲಯದ ಹುಲ್ಲುಗಾವಲು ಅರಣ್ಯ:
ಮಳೆ: 60–75 ಸೆಂ.ಮೀ.
• ಎತ್ತರವಾದ ಹುಲ್ಲು ಮತ್ತು ಕುರುಚಲು ಸಸ್ಯಗಳು ಕಂಡುಬರುತ್ತವೆ.
ಪ್ರದೇಶ: ದಖನ್ ಪ್ರಸ್ಥಭೂಮಿ, ಅರಾವಳಿ ಪಶ್ಚಿಮ ಭಾಗ.
ಮರಗಳು: ಬಬೂಲ್, ಶಿಷಮ್, ಸಭಾಯ್ ಹುಲ್ಲು.
4. ಮ್ಯಾಂಗ್ರೂವ್ ಅರಣ್ಯಗಳು:
• ಉಬ್ಬರವಿಳಿತ ಕಾಡುಗಳು.
ಪ್ರದೇಶಗಳು: ಗಂಗಾ, ಮಹಾನದಿ, ಗೋದಾವರಿ, ಕೃಷ್ಣಾ ನದಿ ಮುಖಜ ಪ್ರದೇಶಗಳು.
• ಗಂಗಾ ಪ್ರದೇಶದಲ್ಲಿ ಸುಂದರಬನ್ಸ್ ಪ್ರಸಿದ್ಧ.
• ಒಟ್ಟು ಪ್ರದೇಶ: 4.4 ಸಾವಿರ ಚ.ಕಿ.ಮೀ.
5. ಮರುಭೂಮಿ ಅರಣ್ಯಗಳು:
ಮಳೆ: 50 ಸೆಂ.ಮೀ. ಗಿಂತ ಕಡಿಮೆ.
• ಆಳವಾದ ಬೇರುಗಳು ಮತ್ತು ಮುಳ್ಳು ಸಸ್ಯಗಳು.
• ಕುಬ್ಜ ಮತ್ತು ಕಂಟಕ ಸಸ್ಯವರ್ಗ.
6. ಹಿಮಾಲಯದ ಆಲ್ಪೈನ್ ಅರಣ್ಯಗಳು:
• ಎತ್ತರ ಹೆಚ್ಚಿದಂತೆ ವಾತಾವರಣ ಬದಲಾವಣೆ.
• ಸೂಚೀಪರ್ಣ ಕಾಡುಗಳು ಕಂಡುಬರುತ್ತವೆ.
ಮರಗಳು: ಸಾಲ್, ಓಕ್, ಸ್ಪ್ರೂಸ್, ಸಿಲ್ವರ್, ಲಾರೆಲ್.

B) ಅರಣ್ಯಗಳ ಹಂಚಿಕೆ

C) ಅರಣ್ಯ ಸಂರಕ್ಷಣೆ

ಪರೀಕ್ಷಾ ಮುಖ್ಯಾಂಶ:
• ಭಾರತದ ಅರಣ್ಯ ವ್ಯಾಪ್ತಿ – 21.34%
• ಅತಿ ಹೆಚ್ಚು ಅರಣ್ಯ – ಮಧ್ಯ ಪ್ರದೇಶ
• ಅತಿ ಕಡಿಮೆ – ಹರಿಯಾಣ
• ಅರಣ್ಯ ಗುರಿ – 33%

6 ಭಾರತದ ನೀರಾವರಿ

ನೀರು ಒಂದು ಪ್ರಮುಖ ನೈಸರ್ಗಿಕ ಸಂಪನ್ಮೂಲವಾಗಿದೆ. ಕೃಷಿ ಭೂಮಿಗೆ ಕೃತಕವಾಗಿ ನೀರು ಒದಗಿಸುವುದನ್ನು ನೀರಾವರಿ ಎಂದು ಕರೆಯುತ್ತಾರೆ.

ನೀರಿನ ಮೂಲಗಳು

ಮುಖ್ಯ ಅಂಶಗಳು:
• ಒಟ್ಟು ಜಲಸಂಪತ್ತು: 1122 ಬಿಲಿಯನ್ ಘನ ಕಿ.ಮೀ.
• ಬಳಸಬಹುದಾದ ನೀರು: 690 ಬಿಲಿಯನ್ ಘನ ಕಿ.ಮೀ.
• ನೀರಾವರಿ ಸಾಮರ್ಥ್ಯ: 140 ದಶಲಕ್ಷ ಹೆಕ್ಟೇರ್
• ಅಭಿವೃದ್ಧಿ ಪಡಿಸಿದ ನೀರಾವರಿ: 62.1 ದಶಲಕ್ಷ ಹೆಕ್ಟೇರ್
• ವಿಶ್ವದಲ್ಲಿ ಭಾರತಕ್ಕೆ 2ನೇ ಸ್ಥಾನ (ಚೀನಾ ನಂತರ)

ನೀರಾವರಿಯ ವಿಧಗಳು

1. ಬಾವಿ ನೀರಾವರಿ:
• ಭಾರತದ ಪ್ರಮುಖ ನೀರಾವರಿ ವಿಧಾನ.
• ಭೂ ಅಂತರ್ಜಲವನ್ನು ಬಳಸುವುದು.
• ವಿಧಗಳು: ತೆರೆದ ಬಾವಿ, ಕೊಳವೆ ಬಾವಿ.
ಕೊಳವೆ ಬಾವಿ: ಒಟ್ಟು ನೀರಾವರಿಯ 45.83%.
2. ಕಾಲುವೆ ನೀರಾವರಿ:
• 2ನೇ ಪ್ರಮುಖ ವಿಧಾನ.
17085000 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ.
• ವಿಧಗಳು:
  • ಪ್ರವಾಹ ಕಾಲುವೆ
  • ಸಾರ್ವಕಾಲಿಕ ಕಾಲುವೆ
3. ಕೆರೆ ನೀರಾವರಿ:
• ಪುರಾತನ ವಿಧಾನ.
• ನೀರನ್ನು ಸಂಗ್ರಹಿಸಿ ಕೃಷಿಗೆ ಬಳಸುವುದು.
• ಪ್ರಮುಖ ರಾಜ್ಯಗಳು: ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕ, ಒರಿಸ್ಸಾ.

ವಿವಿಧೋದ್ದೇಶ ನದಿ ಕಣಿವೆ ಯೋಜನೆಗಳು

ಈ ಯೋಜನೆಗಳು ನೀರಾವರಿ, ಜಲವಿದ್ಯುತ್, ಪ್ರವಾಹ ನಿಯಂತ್ರಣ ಮತ್ತು ಇತರೆ ಅಭಿವೃದ್ಧಿಗೆ ಸಹಾಯ ಮಾಡುತ್ತವೆ.

ಯೋಜನೆವಿಶೇಷ ಮಾಹಿತಿ
ದಾಮೋದರ ಯೋಜನೆ ಸ್ವತಂತ್ರ ಭಾರತದ ಮೊದಲ ಯೋಜನೆ, ಪ್ರವಾಹ ನಿಯಂತ್ರಣ, 4.5 ಲಕ್ಷ ಹೆಕ್ಟೇರ್ ನೀರಾವರಿ
ಭಾಕ್ರಾ ನಂಗಲ್ ಭಾರತದ ಎತ್ತರವಾದ ಅಣೆಕಟ್ಟುಗಳಲ್ಲಿ ಒಂದು, 14.6 ಲಕ್ಷ ಹೆಕ್ಟೇರ್ ನೀರಾವರಿ
ಕೋಸಿ ಯೋಜನೆ ಭಾರತ-ನೇಪಾಳ ಸಂಯುಕ್ತ ಯೋಜನೆ, ಪ್ರವಾಹ ನಿಯಂತ್ರಣ
ಹಿರಾಕುಡ್ ಭಾರತದ ಉದ್ದವಾದ ಅಣೆಕಟ್ಟು (4801 ಮೀ), ಮಹಾನದಿ ಮೇಲೆ
ತುಂಗಭದ್ರಾ ಕರ್ನಾಟಕ-ಆಂಧ್ರ ಸಂಯುಕ್ತ ಯೋಜನೆ, ಪಂಪಾಸಾಗರ ಜಲಾಶಯ
ನಾಗಾರ್ಜುನ ಸಾಗರ ಭಾರತದ ದೊಡ್ಡ ಬಹುಉದ್ದೇಶ ಯೋಜನೆ
ಕೃಷ್ಣಾ ಮೇಲ್ದಂಡೆ ಕರ್ನಾಟಕದ ದೊಡ್ಡ ನೀರಾವರಿ ಯೋಜನೆ
ನರ್ಮದಾ ಯೋಜನೆ ಮಧ್ಯ ಪ್ರದೇಶ-ಗುಜರಾತ್, ಸರ್ದಾರ್ ಸರೋವರ ಪ್ರಮುಖ
ಉದ್ದೇಶಗಳು:
• ನೀರಾವರಿ ಸೌಲಭ್ಯ
• ಜಲವಿದ್ಯುತ್ ಉತ್ಪಾದನೆ
• ಪ್ರವಾಹ ನಿಯಂತ್ರಣ
• ನೌಕಾಯಾನ
• ಕೈಗಾರಿಕೆ ಮತ್ತು ಗೃಹ ಬಳಕೆ
• ಮಣ್ಣಿನ ಸಂರಕ್ಷಣೆ
• ಮೀನುಗಾರಿಕೆ ಅಭಿವೃದ್ಧಿ

7 ಭಾರತದ ಪ್ರಮುಖ ಜಲವಿದ್ಯುತ್ ಯೋಜನೆಗಳು

ಭಾರತದಲ್ಲಿ ವಿದ್ಯುತ್ ಉತ್ಪಾದನೆಯಲ್ಲಿ ಜಲವಿದ್ಯುತ್ 2ನೇ ಸ್ಥಾನ ಹೊಂದಿದ್ದು, 1ನೇ ಸ್ಥಾನದಲ್ಲಿ ಶಾಖೋತ್ಪನ್ನ ವಿದ್ಯುತ್ (ಕಲ್ಲಿದ್ದಲು) ಇದೆ.

ಮುಖ್ಯ ಅಂಶಗಳು:
• ಒಟ್ಟು ವಿದ್ಯುತ್‌ನಲ್ಲಿ ಜಲವಿದ್ಯುತ್ ಪಾಲು: 13.9% (2011)
• ಒಟ್ಟು ಸಾಮರ್ಥ್ಯ: 410 ಬಿಲಿಯನ್ ಕಿಲೋ ವ್ಯಾಟ್ಸ್
• ಪ್ರಸ್ತುತ ಉತ್ಪಾದನೆ: 106.68 ಬಿಲಿಯನ್ ಕಿಲೋ ವ್ಯಾಟ್ಸ್

ರಾಜ್ಯವಾರು ಪ್ರಮುಖ ಜಲವಿದ್ಯುತ್ ಕೇಂದ್ರಗಳು

ಕ್ರ.ಸಂ. ರಾಜ್ಯ ಪ್ರಮುಖ ಜಲವಿದ್ಯುತ್ ಯೋಜನೆಗಳು
1 ಕರ್ನಾಟಕ ಶಿವನಸಮುದ್ರ, ತುಂಗಭದ್ರ, ಜೋಗ, ಭದ್ರಾ, ಕಾಳಿ, ಕೃಷ್ಣಾ
2 ಆಂಧ್ರಪ್ರದೇಶ ನಾಗಾರ್ಜುನ ಸಾಗರ, ಶ್ರೀಶೈಲಂ, ರಾಮಪಾದ ಸಾಗರ, ಸೀಲೇರು
3 ತಮಿಳುನಾಡು ಮೆಟ್ಟೂರು, ಪೈಕಾರ್, ಪೆರಿಯಾರ್, ಕುಂದಾ ಯೋಜನೆಗಳು
4 ಕೇರಳ ಇಡುಕ್ಕಿ, ಶಬರಿಮಲೈ
5 ಮಧ್ಯ ಪ್ರದೇಶ ಬನಸಾಗರ, ಗಾಂಧಿ ಸಾಗರ
6 ಮಹಾರಾಷ್ಟ್ರ ಟಾಟಾ, ಬೀರಾ, ಕೋಯ್ನಾ, ವೈತರಣಾ ಯೋಜನೆಗಳು
7 ಒರಿಸ್ಸಾ ಹಿರಾಕುಡ್, ಕೋಲಾಬಾ, ರಂಗಾಲಿ, ಸಾರಾಪಾ
8 ಬಿಹಾರ ಕೋಸಿ, ಸುವರ್ಣರೇಖಾ, ಹಂಡಾ
9 ಗುಜರಾತ್ ಕಕ್ರಪಾರ, ಕಾಡನಾ ಯೋಜನೆ
10 ಹಿಮಾಚಲ ಪ್ರದೇಶ ಮಂಡಿ ಪವರ್ ಹೌಸ್ ಯೋಜನೆ

ರಾಷ್ಟ್ರೀಯ ವಿದ್ಯುತ್ ಜಾಲ (National Power Grid)

ಮಳೆ ಕೊಯ್ದು (Rainwater Harvesting)

ವಿವರಣೆ:
• ಮಳೆ ನೀರನ್ನು ಸಂಗ್ರಹಿಸಿ ಬಳಕೆ ಮಾಡುವ ವಿಧಾನ.
• ವಿಧಗಳು:
  • ಮಳೆ ಬಿದ್ದ ಸ್ಥಳದಲ್ಲಿಯೇ ಸಂಗ್ರಹಣೆ
  • ಹರಿಯುವ ನೀರನ್ನು ಸಂಗ್ರಹಣೆ
• ಅಂತರ್ಜಲ ಮರುಪೂರಣಕ್ಕೆ ಸಹಾಯಕ.
• ಕರ್ನಾಟಕದಲ್ಲಿ ಪುರಾತನ ಕಾಲದಿಂದಲೂ ರೂಢಿಯಲ್ಲಿದೆ.
ಪರೀಕ್ಷಾ ಮುಖ್ಯಾಂಶ:
• ಜಲವಿದ್ಯುತ್ – ಭಾರತದಲ್ಲಿ 2ನೇ ಸ್ಥಾನ
• ಒಟ್ಟು ಪಾಲು – 13.9%
• ಸಾಮರ್ಥ್ಯ – 410 ಬಿಲಿಯನ್ ಕಿಲೋ ವ್ಯಾಟ್ಸ್

8 ಭಾರತದ ವ್ಯವಸಾಯ

ಭೂಮಿ ಪ್ರಾಕೃತಿಕ ಸಂಪನ್ಮೂಲಗಳಲ್ಲಿ ಅತಿ ಮುಖ್ಯವಾದುದು. ಭೂಮಿಯನ್ನು ವಿವಿಧ ಉದ್ದೇಶಗಳಿಗೆ ಬಳಸುವುದನ್ನು 'ಭೂಬಳಕೆ' ಎಂದು ಕರೆಯುತ್ತಾರೆ.

ಮುಖ್ಯ ಮಾಹಿತಿ: ಭಾರತವು ಭೂಬಳಕೆಯಲ್ಲಿ ಪ್ರಪಂಚದಲ್ಲಿ 2ನೇ ಸ್ಥಾನದಲ್ಲಿದೆ (1ನೇ ಸ್ಥಾನ – ಅಮೆರಿಕ).

ಭೂಬಳಕೆಯ ವಿಧಗಳು

ವ್ಯವಸಾಯದ ಅರ್ಥ

ಭೂಮಿಯನ್ನು ಉಳುಮೆ ಮಾಡಿ ಸಸ್ಯಗಳನ್ನು ಬೆಳೆಸಿ ಮಾನವ ಮತ್ತು ಪ್ರಾಣಿಗಳಿಗೆ ಉಪಯೋಗ ಪಡೆಯುವುದೇ ವ್ಯವಸಾಯ ಅಥವಾ ಕೃಷಿ.

ವ್ಯವಸಾಯದ ವಿಧಗಳು

1. ಸಾಂದ್ರ ಬೇಸಾಯ (Intensive):
• ಒಂದೇ ಭೂಮಿಯಲ್ಲಿ ವರ್ಷಕ್ಕೆ 2-3 ಬೆಳೆಗಳು.
• ಹೆಚ್ಚು ಜನಸಂಖ್ಯೆ ಮತ್ತು ಫಲವತ್ತ ಪ್ರದೇಶಗಳಲ್ಲಿ ಕಂಡುಬರುತ್ತದೆ.
2. ಜೀವನಾಧಾರ ಬೇಸಾಯ:
• ರೈತರು ತಮ್ಮ ಬಳಕೆಗೆ ಮಾತ್ರ ಬೆಳೆ ಬೆಳೆಯುತ್ತಾರೆ.
• ವಿಧಗಳು:
  • ಸ್ಥಿರ ಬೇಸಾಯ
  • ಸ್ಥಳಾಂತರ ಬೇಸಾಯ (ಇಂದು ನಿಷೇಧ)
3. ವಾಣಿಜ್ಯ ಬೇಸಾಯ:
• ಮಾರಾಟ ಮತ್ತು ಲಾಭಕ್ಕಾಗಿ ಬೆಳೆ ಬೆಳೆಯುವುದು.
• ಉದಾ: ಕಬ್ಬು, ಹತ್ತಿ, ಕಾಫಿ, ಚಹಾ, ರಬ್ಬರ್.
4. ಮಿಶ್ರ ಬೇಸಾಯ:
• ಬೆಳೆಗಳ ಜೊತೆಗೆ ಪಶುಪಾಲನೆ, ಜೇನು, ಕೋಳಿ ಸಾಕಣೆ.
5. ತೋಟಗಾರಿಕೆ ಬೇಸಾಯ:
• ದೊಡ್ಡ ತೋಟಗಳಲ್ಲಿ ಒಂದೇ ಬೆಳೆ ಬೆಳೆಯುವುದು.
• ಉದಾ: ಕಾಫಿ, ಚಹಾ, ಹೂವುಗಳು.

ಬೆಳೆಗಳ ಋತುಗಳು

ಋತು ವಿವರಣೆ ಬೆಳೆಗಳು
ಖಾರೀಫ್ ಜೂನ್-ಜುಲೈ ಬಿತ್ತನೆ, ಸೆಪ್ಟೆಂಬರ್-ಅಕ್ಟೋಬರ್ ಕೊಯ್ಲು ಭತ್ತ, ರಾಗಿ, ಜೋಳ, ಹತ್ತಿ
ರಬಿ ಅಕ್ಟೋಬರ್-ನವೆಂಬರ್ ಬಿತ್ತನೆ, ಫೆಬ್ರವರಿ-ಮಾರ್ಚ್ ಕೊಯ್ಲು ಗೋಧಿ
ಜೇಡ್ ರಬಿ-ಖಾರೀಫ್ ಮಧ್ಯದ ಅವಧಿ ಉದ್ದು, ಹೆಸರು, ತರಕಾರಿ

ಪ್ರಮುಖ ಬೆಳೆಗಳು

1. ಭತ್ತ (Rice):
• ಖಾರೀಫ್ ಬೆಳೆ, 25°C ಉಷ್ಣಾಂಶ, 100–200 ಸೆಂ.ಮೀ ಮಳೆ.
• ಹೆಚ್ಚು ಉತ್ಪಾದನೆ – ಪಶ್ಚಿಮ ಬಂಗಾಳ.
2. ಗೋಧಿ (Wheat):
• ರಬಿ ಬೆಳೆ, 10–15°C ಉಷ್ಣಾಂಶ.
• ಹೆಚ್ಚು ಉತ್ಪಾದನೆ – ಉತ್ತರ ಪ್ರದೇಶ.
3. ಕಬ್ಬು (Sugarcane):
• ಪ್ರಮುಖ ವಾಣಿಜ್ಯ ಬೆಳೆ.
• ಹೆಚ್ಚು ಉತ್ಪಾದನೆ – ಉತ್ತರ ಪ್ರದೇಶ.
• ಉತ್ಪನ್ನಗಳು – ಸಕ್ಕರೆ, ಬೆಲ್ಲ, ಮದ್ಯ.
4. ಹೊಗೆ ಸೊಪ್ಪು (Tobacco):
• ಭಾರತದಲ್ಲಿ 3ನೇ ಸ್ಥಾನ.
• ಪ್ರಮುಖ ರಾಜ್ಯಗಳು – ಆಂಧ್ರಪ್ರದೇಶ, ಗುಜರಾತ್, ಕರ್ನಾಟಕ.
5. ಹತ್ತಿ (Cotton):
• ನಾರಿನ ಬೆಳೆ, ಖಾರೀಫ್ ಬೆಳೆ.
• ಕಪ್ಪು ಮಣ್ಣು ಸೂಕ್ತ.

ಪಾನೀಯ ಮತ್ತು ತೋಟಗಾರಿಕೆ ಬೆಳೆಗಳು

ಸುವರ್ಣ ಕ್ರಾಂತಿ: ತೋಟಗಾರಿಕೆ ಅಭಿವೃದ್ಧಿಯನ್ನು "Golden Revolution" ಎಂದು ಕರೆಯುತ್ತಾರೆ.

9 ಖನಿಜ ಮತ್ತು ಶಕ್ತಿ ಸಂಪನ್ಮೂಲಗಳು

ಪ್ರಕೃತಿಯಲ್ಲಿ ಸ್ವಾಭಾವಿಕವಾಗಿ ದೊರೆಯುವ ನಿರ್ದಿಷ್ಟ ರಾಸಾಯನಿಕ ಸಂಯೋಜನೆಯುಳ್ಳ ಪದಾರ್ಥಗಳನ್ನು ಖನಿಜಗಳು ಎಂದು ಕರೆಯುತ್ತಾರೆ.

1. ಪ್ರಮುಖ ಖನಿಜ ಸಂಪನ್ಮೂಲಗಳು

ಕಬ್ಬಿಣದ ಅದಿರು:
• ಒಟ್ಟು ಖನಿಜ ಮೌಲ್ಯದ 20% ಭಾಗ ಹೊಂದಿದೆ.
• ವಿಧಗಳು: ಮ್ಯಾಗ್ನಟೈಟ್, ಹೆಮಟೈಟ್, ಲಿಮೋನೈಟ್, ಸಿಡರೈಟ್.
• ಪ್ರಮುಖ ಪ್ರದೇಶಗಳು: ಜಾರ್ಖಂಡ್, ಒಡಿಶಾ, ಕರ್ನಾಟಕ.
• ಕರ್ನಾಟಕದಲ್ಲಿ: ಕೆಮ್ಮಣ್ಣುಗುಂಡಿ, ಹೊಸಪೇಟೆ, ಸಂಡೂರು, ಕುದುರೆಮುಖ.
ಮ್ಯಾಂಗನೀಸ್:
• ಉಕ್ಕು ಉತ್ಪಾದನೆಯಲ್ಲಿ ಅತ್ಯಂತ ಮುಖ್ಯ.
• ವಿಧಗಳು: ಪೈರೋಲೂಸೈಟ್, ಸೈಲೋಮೆಲೀನ್.
• ಪ್ರಮುಖ ರಾಜ್ಯಗಳು: ಒಡಿಶಾ, ಕರ್ನಾಟಕ, ಮಹಾರಾಷ್ಟ್ರ.
ಬಾಕ್ಸೈಟ್:
• ಅಲ್ಯೂಮಿನಿಯಂ ಲೋಹದ ಮುಖ್ಯ ಅದಿರು.
• 60-70% ಅಲ್ಯೂಮಿನಿಯಂ ಆಕ್ಸೈಡ್ ಹೊಂದಿದೆ.
• ಪ್ರಮುಖ ರಾಜ್ಯಗಳು: ಒಡಿಶಾ, ಗುಜರಾತ್, ಮಹಾರಾಷ್ಟ್ರ, ಕರ್ನಾಟಕ.
ಅಭ್ರಕ (Mica):
• ಭಾರತ ಉತ್ಪಾದನೆಯಲ್ಲಿ ಪ್ರಪಂಚದಲ್ಲಿ 1ನೇ ಸ್ಥಾನ.
• ಉಪಯೋಗಗಳು: ವಿದ್ಯುತ್ ಸಾಧನಗಳು, ಗಾಜು, ಬಣ್ಣ, ರಬ್ಬರ್.
• ಪ್ರಮುಖ ಪ್ರದೇಶಗಳು: ಜಾರ್ಖಂಡ್, ಬಿಹಾರ, ರಾಜಸ್ಥಾನ.
ಚಿನ್ನ:
• ಅತ್ಯಮೂಲ್ಯ ಲೋಹ.
• ಕರ್ನಾಟಕದಲ್ಲಿ: ಕೋಲಾರ, ಹಟ್ಟಿ (ರಾಯಚೂರು).
• ಹಟ್ಟಿ ಗಣಿ – ದೇಶದ ಪ್ರಮುಖ ಉತ್ಪಾದನಾ ಕೇಂದ್ರ.

2. ಸಂಪ್ರದಾಯಿಕ ಶಕ್ತಿ ಸಂಪನ್ಮೂಲಗಳು

ಕಲ್ಲಿದ್ದಲು:
• ಭಾರತದಲ್ಲಿ ಉತ್ಪಾದನೆಯಲ್ಲಿ 3ನೇ ಸ್ಥಾನ.
• "ಕಪ್ಪು ಬಂಗಾರ" ಎಂದು ಕರೆಯುತ್ತಾರೆ.
• ಪ್ರಮುಖ ಪ್ರದೇಶಗಳು: ಜಾರ್ಖಂಡ್, ಛತ್ತೀಸ್‌ಗಡ.
• ಉಪಯೋಗ: ವಿದ್ಯುತ್, ರಾಸಾಯನಿಕ, ಪ್ಲಾಸ್ಟಿಕ್.
ಪೆಟ್ರೋಲಿಯಂ:
• "ದ್ರವರೂಪದ ಚಿನ್ನ" ಎಂದು ಕರೆಯುತ್ತಾರೆ.
• ಮೊದಲ ಪತ್ತೆ: ದಿಗ್ಬಾಯ್ (ಅಸ್ಸಾಂ).
• ಪ್ರಮುಖ ಕ್ಷೇತ್ರ: ಬಾಂಬೆ ಹೈ.
• ಉತ್ಪನ್ನಗಳು: ಪೆಟ್ರೋಲ್, ಡೀಸೆಲ್, ಗ್ಯಾಸೋಲಿನ್.
ಅಣು ಖನಿಜಗಳು:
• ಯುರೇನಿಯಂ, ಥೋರಿಯಂ ಪ್ರಮುಖ.
• ಉಪಯೋಗ: ಅಣುಶಕ್ತಿ ಮತ್ತು ರಕ್ಷಣಾ ಕ್ಷೇತ್ರ.
• ಪ್ರದೇಶಗಳು: ಜಾರ್ಖಂಡ್, ಕೇರಳ, ತಮಿಳುನಾಡು.

3. ಅಸಂಪ್ರದಾಯಿಕ ಶಕ್ತಿ ಸಂಪನ್ಮೂಲಗಳು

ಸೌರಶಕ್ತಿ:
• ಸೂರ್ಯನ ಕಿರಣಗಳಿಂದ ದೊರೆಯುವ ಶಕ್ತಿ.
• ಮುಗಿಯದ ಶಕ್ತಿ ಮೂಲ.
• ಉಪಯೋಗ: ಸೌರ ಕುಕ್ಕರ್, ಹೀಟರ್, ವಿದ್ಯುತ್ ಉತ್ಪಾದನೆ.
ಪವನ ಶಕ್ತಿ:
• ಗಾಳಿಯಿಂದ ವಿದ್ಯುತ್ ಉತ್ಪಾದನೆ.
• ಭಾರತದಲ್ಲಿ 5ನೇ ಸ್ಥಾನ.
• ಪ್ರಮುಖ ರಾಜ್ಯಗಳು: ತಮಿಳುನಾಡು, ಕರ್ನಾಟಕ, ಗುಜರಾತ್.
ಗಮನಿಸಿ:
• ಸಂಪ್ರದಾಯಿಕ ಶಕ್ತಿ ಮೂಲಗಳು ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತವೆ.
• ಇದರಿಂದ "ಜಾಗತಿಕ ತಾಪಮಾನ ಏರಿಕೆ" ಉಂಟಾಗುತ್ತದೆ.

10 ಭಾರತದ ಕೈಗಾರಿಕೆಗಳು

ಕೈಗಾರಿಕೆಗಳು ದೇಶದ ಆರ್ಥಿಕ ಅಭಿವೃದ್ಧಿಯ ಪ್ರಮುಖ ಆಧಾರವಾಗಿದ್ದು, ಕಚ್ಚಾ ವಸ್ತುಗಳನ್ನು ಸಿದ್ಧ ವಸ್ತುಗಳನ್ನಾಗಿ ಪರಿವರ್ತಿಸುವ ಪ್ರಕ್ರಿಯೆಯಾಗಿದೆ. ದೇಶದ ರಾಷ್ಟ್ರೀಯ ಆದಾಯದ ಸುಮಾರು 35% ಕೈಗಾರಿಕೆಗಳಿಂದ ಬರುತ್ತದೆ ಮತ್ತು 16% ಜನರಿಗೆ ಉದ್ಯೋಗ ಒದಗಿಸುತ್ತದೆ.

ಗಮನಿಸಿ: ಆದಾಯ ಮತ್ತು ಉದ್ಯೋಗದ ದೃಷ್ಟಿಯಿಂದ ಕೈಗಾರಿಕೆಗಳು ಭಾರತದಲ್ಲಿ 2ನೇ ಸ್ಥಾನದಲ್ಲಿವೆ.

ಭಾರತದ ಪ್ರಮುಖ ಕೈಗಾರಿಕಾ ವಲಯಗಳು

1. ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ

2. ಹತ್ತಿ ಬಟ್ಟೆ ಕೈಗಾರಿಕೆ

3. ಸಕ್ಕರೆ ಕೈಗಾರಿಕೆ

4. ಅಲ್ಯೂಮಿನಿಯಂ ಕೈಗಾರಿಕೆ

5. ಕಾಗದ ಕೈಗಾರಿಕೆ

6. ಸಿಮೆಂಟ್ ಕೈಗಾರಿಕೆ

7. ಸೆಣಬು ಕೈಗಾರಿಕೆ

8. ಜ್ಞಾನಾಧಾರಿತ ಕೈಗಾರಿಕೆಗಳು

ಮಾಹಿತಿ ತಂತ್ರಜ್ಞಾನ (IT): 1991ರಲ್ಲಿ ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ ಸ್ಥಾಪನೆ. ಬೆಂಗಳೂರು "ಸಿಲಿಕಾನ್ ಸಿಟಿ".
ಜೈವಿಕ ತಂತ್ರಜ್ಞಾನ (BT): 1980ರಿಂದ ಅಭಿವೃದ್ಧಿ. ಕೃಷಿಯಲ್ಲಿ ಹೊಸ ಬೀಜ, ರಸಗೊಬ್ಬರ, ಔಷಧ ಅಭಿವೃದ್ಧಿ.
ಉನ್ನತ ತಂತ್ರಜ್ಞಾನ (AT): 1990ರಿಂದ ಜಾರಿಗೆ. ಉಪಗ್ರಹ, ಇ-ಆಡಳಿತ, ರಕ್ಷಣಾ ತಂತ್ರಜ್ಞಾನಗಳಲ್ಲಿ ಬಳಕೆ.

11 ಭಾರತದ ಸಂಪರ್ಕ ವ್ಯವಸ್ಥೆ

ಸಂಪರ್ಕ ವ್ಯವಸ್ಥೆಗಳು ಸಮಾಜದ ಎಲ್ಲಾ ಜನರನ್ನು ತಲುಪುವ ಸಮೂಹ ಮಾಧ್ಯಮಗಳು ಆಗಿವೆ. ಅಂಚೆ, ವೃತ್ತಪತ್ರಿಕೆ, ರೇಡಿಯೋ, ದೂರದರ್ಶನ, ಉಪಗ್ರಹ, ಅಂತರ್ಜಾಲ, ಇ-ಮೇಲ್ ಮತ್ತು ಮೊಬೈಲ್ ದೂರವಾಣಿ ಮೊದಲಾದವುಗಳು ಪ್ರಮುಖ ಮಾಧ್ಯಮಗಳಾಗಿವೆ.

ಗಮನಿಸಿ: ಆಧುನಿಕ ಯುಗದಲ್ಲಿ ಸಂಪರ್ಕ ವ್ಯವಸ್ಥೆಗಳು ಮಾಹಿತಿ ವಿನಿಮಯದ ಮುಖ್ಯ ಆಧಾರವಾಗಿವೆ.

1. ಭೌಗೋಳಿಕ ಮಾಹಿತಿ ವ್ಯವಸ್ಥೆ (GIS)

ಉಪಯೋಗ: ನಕ್ಷೆ ರಚನೆ, ಭೂ ಉಪಯೋಗ ವಿಶ್ಲೇಷಣೆ, ನಗರ ಯೋಜನೆಗಳಲ್ಲಿ GIS ಬಳಸಲಾಗುತ್ತದೆ.

2. ಗ್ಲೋಬಲ್ ಪೊಸಿಶನಿಂಗ್ ಸಿಸ್ಟಂ (GPS)

ವಿಶೇಷತೆ: GPS ಅನ್ನು Path Finder ಎಂದೂ ಕರೆಯುತ್ತಾರೆ. ಭಾರತವು ತನ್ನದೇ GPS ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ.

3. ದೂರ ಸಂವೇದಿ ತಂತ್ರಜ್ಞಾನ (Remote Sensing)

ಪ್ರಮುಖ ಭಾರತೀಯ ಕಂಪನಿಗಳು ಮತ್ತು ಕೇಂದ್ರ ಕಚೇರಿಗಳು

ಅ.ಸಂ. ಕಂಪನಿ ಕೇಂದ್ರ ಕಚೇರಿ
1ಎಂ.ಎಂ.ಟಿ.ಸಿ. ಲಿ.ನ್ಯೂ ದೆಹಲಿ
2ಅದಾನಿ ಎಂಟರ್‌ಪ್ರೈಸಸ್ಅಹಮದಾಬಾದ್
3ಟಿ.ಸಿ.ಎಸ್.ಮುಂಬೈ
4ಇನ್ಫೋಸಿಸ್ಬೆಂಗಳೂರು
5ವಿಪ್ರೋಬೆಂಗಳೂರು
6ಟೆಕ್ ಮಹೇಂದ್ರಮುಂಬೈ
7ಎಚ್.ಸಿ.ಎಲ್.ನ್ಯೂ ದೆಹಲಿ
8ರಿಲಯನ್ಸ್ ಕ್ಯಾಪಿಟಲ್ನವ ಮುಂಬೈ
9ಬಜಾಜ್ ಫೈನಾನ್ಸ್ಪುಣೆ
10ಮುತ್ತೂಟ್ ಫೈನಾನ್ಸ್ಕೊಚ್ಚಿ

ತೈಲ ಶುದ್ಧೀಕರಣ ಘಟಕಗಳು (Refineries)

ಕಂಪನಿಸ್ಥಳರಾಜ್ಯ
ಭಾರತ ಪೆಟ್ರೋಲಿಯಂಮುಂಬೈಮಹಾರಾಷ್ಟ್ರ
ಇಂಡಿಯನ್ ಆಯಿಲ್ಗೋಹಾತಿಅಸ್ಸಾಂ
ಮಂಗಳೂರು ರಿಫೈನರಿಮಂಗಳೂರುಕರ್ನಾಟಕ
ರಿಲಯನ್ಸ್ ರಿಫೈನರಿಜಾಮನಗರಗುಜರಾತ್

ಜಲವಿದ್ಯುತ್ ಉತ್ಪಾದನೆ

ರಾಜ್ಯಉತ್ಪಾದನೆ (GWH)
ಹಿಮಾಚಲ ಪ್ರದೇಶ24060
ಜಮ್ಮು ಕಾಶ್ಮೀರ11944
ಉತ್ತರಾಖಂಡ10102
ಕರ್ನಾಟಕ5568
ಕೇರಳ4573

ಪೆಟ್ರೋಲಿಯಂ ಕೊಳವೆ ಮಾರ್ಗಗಳು

12 ಭಾರತದ ರಾಷ್ಟ್ರೀಯ ಹೆದ್ದಾರಿಗಳು (ಹೊಸ ಸಂಖ್ಯಾಕ್ರಮ)

ಭಾರತದ ರಾಷ್ಟ್ರೀಯ ಹೆದ್ದಾರಿಗಳು ದೇಶದ ಸಾರಿಗೆ ವ್ಯವಸ್ಥೆಯ ಬೆನ್ನೆಲುಬಾಗಿವೆ. ಇವು ರಾಜ್ಯಗಳನ್ನು ಸಂಪರ್ಕಿಸಿ ವ್ಯಾಪಾರ, ಸಂಚಾರ ಮತ್ತು ಆರ್ಥಿಕ ಬೆಳವಣಿಗೆಗೆ ನೆರವಾಗುತ್ತವೆ.

ಮುಖ್ಯ ರಾಷ್ಟ್ರೀಯ ಹೆದ್ದಾರಿಗಳು

NH ಸಂಖ್ಯೆ ಉದ್ದ (ಕಿ.ಮೀ) ಮುಖ್ಯ ಮಾರ್ಗ
NH-44 3745 ಶ್ರೀನಗರ – ದೆಹಲಿ – ನಾಗ್ಪುರ – ಹೈದರಾಬಾದ್ – ಬೆಂಗಳೂರು – ಕನ್ಯಾಕುಮಾರಿ
NH-27 3507 ಪೋರಬಂದರ್ – ಕೋಟಾ – ಲಖ್ನೋ – ಗುವಾಹಟಿ – ಸಿಲ್ಚಾರ್
NH-48 2807 ದೆಹಲಿ – ಜೈಪುರ – ಅಹಮದಾಬಾದ್ – ಮುಂಬೈ – ಬೆಂಗಳೂರು – ಚೆನ್ನೈ
NH-52 2317 ಪಂಜಾಬ್ – ರಾಜಸ್ಥಾನ – ಮಧ್ಯಪ್ರದೇಶ – ಮಹಾರಾಷ್ಟ್ರ – ಕರ್ನಾಟಕ
NH-30 2010 ಉತ್ತರಾಖಂಡ – ಲಖ್ನೋ – ಜಬಲಪುರ – ರಾಯಪುರ – ಆಂಧ್ರ ಪ್ರದೇಶ
NH-53 1781 ಗುಜರಾತ್ – ಮಹಾರಾಷ್ಟ್ರ – ಛತ್ತೀಸ್‌ಗಢ – ಒಡಿಶಾ
NH-16 1659 ಕೊಲ್ಕತ್ತಾ – ಭುವನೇಶ್ವರ – ವಿಶಾಖಪಟ್ಟಣಂ – ಚೆನ್ನೈ
NH-66 1593 ಮುಂಬೈ – ಗೋವಾ – ಮಂಗಳೂರು – ಕೊಚ್ಚಿ – ತಿರುವನಂತಪುರಂ

ಕರ್ನಾಟಕದ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳು

ಗಮನಿಸಿ: ಭಾರತದ ಅತಿ ಉದ್ದದ ರಾಷ್ಟ್ರೀಯ ಹೆದ್ದಾರಿ NH-44 ಆಗಿದೆ. ಇದು ದೇಶದ ಉತ್ತರ ತುದಿಯಿಂದ ದಕ್ಷಿಣ ತುದಿವರೆಗೆ ಸಂಪರ್ಕ ಕಲ್ಪಿಸುತ್ತದೆ.

ವಿಶೇಷ ಅಂಶಗಳು

KPSC Footer