ಆನ್‌ಲೈನ್ ತರಗತಿಗಳು
| ನೇರ ತರಗತಿಗಳು | ಟೆಸ್ಟ್ ಸರಣಿ | ಅಂಚೆ ಪ್ಯಾಕೇಜ್ | 📞 9141066148
GK Notes

ಕರ್ನಾಟಕ ಆರ್ಥಿಕ ಸಮೀಕ್ಷೆ

7.8%
4ನೇ ಸ್ಥಾನ
6ನೇ ಸ್ಥಾನ
₹8,31,328 Cr

📊 1. ಜಿಲ್ಲಾವಾರು ತಲಾ ಆದಾಯ (Per Capita Income)

🎯 ಪರೀಕ್ಷಾ ಟಿಪ್:

• ಅತೀ ಹೆಚ್ಚು ತಲಾ ಆದಾಯ ಹೊಂದಿರುವ ಜಿಲ್ಲೆ: ಬೆಂಗಳೂರು ನಗರ (₹2,71,387)
• ಅತೀ ಕಡಿಮೆ ತಲಾ ಆದಾಯ ಹೊಂದಿರುವ ಜಿಲ್ಲೆ: ಯಾದಗಿರಿ (₹59,014)

ಕ್ರ.ಸಂ ಜಿಲ್ಲೆಗಳು ತಲಾ ಆದಾಯ (₹) ಕ್ರ.ಸಂ ಜಿಲ್ಲೆಗಳು ತಲಾ ಆದಾಯ (₹)
01 ಬೆಂಗಳೂರು ನಗರ 2,71,387 16 ಚಿಕ್ಕಬಳ್ಳಾಪುರ 90,634
02 ದಕ್ಷಿಣಕನ್ನಡ 2,18,580 17 ಚಾಮರಾಜನಗರ 83,059
03 ಉಡುಪಿ 1,76,479 18 ಉತ್ತರಕನ್ನಡ 96,066
04 ಚಿಕ್ಕಮಗಳೂರು 1,68,412 19 ಹಾಸನ 1,05,361
05 ಶಿವಮೊಗ್ಗ 1,27,655 20 ಬೆಳಗಾವಿ 72,428
06 ಬೆಂಗಳೂರು ಗ್ರಾಮಾಂತರ 1,27,264 21 ಧಾರವಾಡ 1,05,677
07 ಕೊಡಗು 1,16,533 22 ಬಾಗಲಕೋಟೆ 1,07,127
08 ರಾಮನಗರ 1,15,436 23 ಬೀದರ 70,543
09 ಮಂಡ್ಯ 1,14,270 24 ಯಾದಗಿರಿ 59,014
10 ಬಳ್ಳಾರಿ 1,08,454 25 ಕಲಬುರ್ಗಿ 67,886
11 ಕೋಲಾರ 94,021 26 ವಿಜಯಪುರ 71,482
12 ಮೈಸೂರು 90,626 27 ರಾಯಚೂರು 73,851
13 ಗದಗ 83,800 28 ಕೊಪ್ಪಳ 73,916
14 ದಾವಣಗೆರೆ 82,479 29 ಚಿತ್ರದುರ್ಗ 77,759
15 ಹಾವೇರಿ 80,369 - - -

📈 2. ಆರ್ಥಿಕ ವಲಯಗಳ ಕೊಡುಗೆ (%)

ಆರ್ಥಿಕ ವಲಯಗಳು 2014-15 (%) 2015-16 (%) ಬೆಳವಣಿಗೆಯ ಸ್ಥಿತಿ
ಪ್ರಾಥಮಿಕ ವಲಯ (Primary / ಕೃಷಿ) 1.6 -4.7 ▼ ಇಳಿಕೆ
ದ್ವಿತೀಯ ವಲಯ (Secondary / ಕೈಗಾರಿಕೆ) 4.7 4.5 ■ ಸ್ಥಿರ
ಸೇವಾ ವಲಯ (Service / ತೃತೀಯ) 10.3 9.1 ▲ ಗರಿಷ್ಠ ಕೊಡುಗೆ

📊 3. ಸಾಮಾಜಿಕ ಮತ್ತು ಆರ್ಥಿಕ ಸೂಚ್ಯಂಕಗಳು

ಸಾಮಾಜಿಕ

ಸಾಮಾಜಿಕ ಸೂಚ್ಯಂಕಗಳು

• ಜನನ ಪ್ರಮಾಣ: 18.8 (1000ಕ್ಕೆ)
• ಮರಣ ಪ್ರಮಾಣ: 7.1 (1000ಕ್ಕೆ)
• ತಾಯಿಯ ಮರಣ ಪ್ರಮಾಣ: 178 (1 ಲಕ್ಷ ಜೀವಿತ ಜನನಕ್ಕೆ)
ಜೀವಿತ ಅವಧಿ

ಜೀವಿತ ಅವಧಿ (Life Expectancy)

• ಪುರುಷರು:

63.6 ವರ್ಷಗಳು

• ಮಹಿಳೆಯರು:

67.1 ವರ್ಷಗಳು

ಆರ್ಥಿಕ ಮುಖ್ಯಾಂಶಗಳು (Economic Highlights)
2014-15 ಕರ್ನಾಟಕದ GDP ಬೆಳವಣಿಗೆ 7.8%
ಕರ್ನಾಟಕದ ಒಟ್ಟು ಆಂತರಿಕ ಉತ್ಪನ್ನ (GSDP) ₹ 7,34,988 ಕೋಟಿ

🏆 4. ನಿರ್ಮಲ ಗ್ರಾಮ ಪ್ರಶಸ್ತಿಗಳು ಮತ್ತು ಅಭಿವೃದ್ಧಿ ಸಂಸ್ಥೆಗಳು

ಪ್ರಶಸ್ತಿಗಳು

ನಿರ್ಮಲ ಗ್ರಾಮ ಬಹುಮಾನ ಮೊತ್ತ

• ತಾಲೂಕು ಮಟ್ಟ (GP): ₹ 1,00,000
• ಜಿಲ್ಲಾ ಪಂಚಾಯತಿ ಮಟ್ಟ:

೧ನೇ: 3 ಲಕ್ಷ | ೨ನೇ: 2 ಲಕ್ಷ | ೩ನೇ: 1 ಲಕ್ಷ

• ವಿಭಾಗೀಯ ಮಟ್ಟ (ZP):

೧ನೇ: 5 ಲಕ್ಷ | ೨ನೇ: 4 ಲಕ್ಷ | ೩ನೇ: 3 ಲಕ್ಷ

• ರಾಜ್ಯ ಮಟ್ಟ (ZP):

೧ನೇ: 10 ಲಕ್ಷ | ೨ನೇ: 7 ಲಕ್ಷ | ೩ನೇ: 3 ಲಕ್ಷ

ಅಂಕಿ-ಅಂಶ

ಭೂ ಬಳಕೆ ಮತ್ತು ಸಂಸ್ಥೆಗಳು

• ಭೌಗೋಳಿಕ ವಿಸ್ತೀರ್ಣ:

191.50 ಲಕ್ಷ ಹೆಕ್ಟರ್ (ನಿವ್ವಳ ಬಿತ್ತನೆ: 99.23 ಲಕ್ಷ)

• ಅರಣ್ಯ ಪ್ರದೇಶ:

30.73 ಲಕ್ಷ ಹೆಕ್ಟರ್ (ಶೇ. 16)

ಕಾಡುಕಟ್ಟಿ: 15.48 | ಸಂರಕ್ಷಿತ: 1.5

ಕೃಷಿಯೇತರ ಭೂಮಿ: 14.44 ಲಕ್ಷ ಹೆಕ್ಟರ್

ಬಂಜರು ಭೂಮಿ: 7.87 ಲಕ್ಷ ಹೆಕ್ಟರ್

ಪ್ರಮುಖ ಯೋಜನೆಗಳು ಮತ್ತು ಸ್ಥಾಪನೆಯ ವರ್ಷಗಳು
ರಾಷ್ಟ್ರೀಯ ಜೈವಿಕ ಅನಿಲ ಯೋಜನೆ 1982-83
ಬೆಂಗಳೂರು ಮಹಾನಗರ ಪಾಲಿಕೆ (BBMP) 1949
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) 1974
ಮಹಾತ್ಮಾ ಗಾಂಧಿ ಪ್ರಾದೇಶಿಕ ಗ್ರಾಮೀಣ ಇಂಧನ ಸಂಸ್ಥೆ 2000
ಕರ್ನಾಟಕ ಗ್ರಾಮೀಣ ಅಭಿವೃದ್ಧಿ ಸಂಸ್ಥೆ 2005
JNNURM ಅಭಿಯಾನ 2005
ಜೈವಿಕ ಇಂಧನ ನೀತಿ / ಸೌರ ಬೆಳಕು ಯೋಜನೆ 2009 / 2009-10
ಸಮಗ್ರ ವಸತಿ ಮತ್ತು ಕೊಳಚೆ ಪ್ರದೇಶ ಅಭಿವೃದ್ಧಿ 2015

🎓 5. ಕೃಷಿ, ಆರೋಗ್ಯ ಮತ್ತು ಶಿಕ್ಷಣ: ಪರೀಕ್ಷಾ ವಿಶೇಷಾಂಶಗಳು

📊 ಭೂ ಹಿಡುವಳಿ ಪ್ರಮಾಣ (Land Holdings)

  • ಅತೀ ಸಣ್ಣ (< 1 ಹೆ): 18.81 ಸಾವಿರ ಹೆ
  • ಸಣ್ಣ (1 - 2 ಹೆ): 30.70 ಸಾವಿರ ಹೆ
  • ಅರೆ ಮಧ್ಯಮ (2 - 4 ಹೆ): 33.93 ಸಾವಿರ ಹೆ
  • ಮಧ್ಯಮ (4 - 10 ಹೆ): 29.04 ಸಾವಿರ ಹೆ
  • ಬೃಹತ್ (> 10 ಹೆ): 9.94 ಸಾವಿರ ಹೆ

🏗️ ಟೆಕ್ನಾಲಜಿ ಪಾರ್ಕ್‌ಗಳು (Tech Parks)

🌾 ರೈಸ್ ಪಾರ್ಕ್: ಕಾರಟಗಿ (ಗಂಗಾವತಿ)

🥥 ತೆಂಗು ಸಂಸ್ಕರಣೆ: ಕೊನೆಹಳ್ಳಿ (ತಿಪಟೂರು)

🫘 ತೊಗರಿ ಪಾರ್ಕ್: ಕಲಬುರಗಿ

🌽 ಮೆಕ್ಕೆಜೋಳ ಪಾರ್ಕ್: ರಾಣೆಬೆನ್ನೂರು

🐄 ಜಾನುವಾರು ಕೇಂದ್ರ: ಕುಣಿಕೇನಹಳ್ಳಿ, ಅಜ್ಜಂಪುರ, ಬಂಕಾಪುರ

ಪ್ರಮುಖ ಯೋಜನೆ / ಸಂಸ್ಥೆ (Schemes & Institutes) ವರ್ಷ (Year)
ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮ1955
ರಾಷ್ಟ್ರೀಯ ಅಂಧತ್ವ ನಿಯಂತ್ರಣ ಕಾರ್ಯಕ್ರಮ1976
ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮ1998
ಪಶು ಆರೋಗ್ಯ ಮತ್ತು ಉಣ್ಣೆ ಅಭಿವೃದ್ಧಿ ಸಂಸ್ಥೆ (ಬೆಂಗಳೂರು)2000
ರಾಷ್ಟ್ರೀಯ ಆರೋಗ್ಯ ಅಭಿಯಾನ (NHM) / ಉದ್ಯೋಗಿನಿ2005
ಮಡಿಲು ಯೋಜನೆ (19 ಸಾಮಗ್ರಿಗಳ ವಿತರಣೆ)2007
ಆರೋಗ್ಯ ಕವಚ (108) / ರಾಷ್ಟ್ರೀಯ ಬಾಲ ಸ್ವಾಸ್ಥ್ಯ2008-09
ರಾಜ್ಯ ಉನ್ನತ ಶಿಕ್ಷಣ ಪರಿಷತ್ ಸ್ಥಾಪನೆ2010
ನಗು-ಮಗು ಕಾರ್ಯಕ್ರಮ (ಬಾಣಂತಿ & ಮಗುವಿನ ವಾಹನ)2015

🎓 ವಿಶ್ವವಿದ್ಯಾಲಯಗಳು ಮತ್ತು ಸಂಶೋಧನಾ ಕೇಂದ್ರಗಳು

• ಕೃಷಿ ವಿವಿಗಳು: ಬೆಂಗಳೂರು, ಧಾರವಾಡ, ರಾಯಚೂರು.
• ತೋಟಗಾರಿಕೆ ವಿವಿಗಳು: ಬಾಗಲಕೋಟೆ, ಶಿವಮೊಗ್ಗ.
• ಸಂಶೋಧನಾ ಕೇಂದ್ರ: ಮಡಿಕೇರಿ (ಹೂವು/ತರಕಾರಿ), ಪಿರಿಯಾಪಟ್ಟಣ (ಜೈವಿಕ ಇಂಧನ).
💡 EXAM ALERT:

ಆರೋಗ್ಯವಾಣಿ 104: ದೂರವಾಣಿ ಮುಖಾಂತರ ತಜ್ಞ ವೈದ್ಯರ ಸಲಹೆ ಪಡೆಯುವ ಯೋಜನೆ.
ಅಮೃತ ಯೋಜನೆ (2007-08): ಮಹಿಳೆಯರಿಗೆ ಹೈನುಗಾರಿಕೆ ಕಾರ್ಯಕ್ರಮ.

🏠 6. ಸರ್ಕಾರದ ಪ್ರಮುಖ ವಸತಿ ಯೋಜನೆಗಳು

1991-92

ಬಸವ ವಸತಿ ಯೋಜನೆ

ಹಿಂದಿನ 'ಆಶ್ರಯ ಯೋಜನೆ'. ವಾರ್ಷಿಕ ₹32,000 ಕ್ಕಿಂತ ಕಡಿಮೆ ಆದಾಯವಿರುವವರಿಗೆ. ಮೀಸಲಾತಿ: SC-30%, ST-10%, ಅಲ್ಪಸಂಖ್ಯಾತರು-10%. 2010-11ರಲ್ಲಿ ಮರುನಾಮಕರಣ.

1989-90

ಇಂದಿರಾ ಆವಾಸ್ ಯೋಜನೆ

ಬಡವರಿಗೆ ವಸತಿ. ಮೀಸಲಾತಿ: SC-60%, ST-15%, ಅಲ್ಪಸಂಖ್ಯಾತರು-25%. ಘಟಕ ವೆಚ್ಚ (2015-16): ₹1,20,000 (ಕೇಂದ್ರ: 35k, ರಾಜ್ಯ: 85k). SC/ST: ₹1,50,000.

2010-11

ವಾಜಪೇಯಿ ನಗರ ವಸತಿ

₹32k ಗಿಂತ ಕಡಿಮೆ ಆದಾಯ ಹೊಂದಿದ ನಗರವಾಸಿಗಳಿಗೆ. ಘಟಕ ವೆಚ್ಚ: ₹2,00,000 (ಇದರಲ್ಲಿ ₹1,20,000 ಧನ ಸಹಾಯ, ಉಳಿದದ್ದು ಫಲಾನುಭವಿ ವಂತಿಗೆ).

2014-15

ವಿಶೇಷ ವಸತಿ ಯೋಜನೆ

ಹೆಚ್‌ಐವಿ ಪೀಡಿತರು, ದೇವದಾಸಿಯರು, ಲೈಂಗಿಕ ಕಾರ್ಯಕರ್ತರು, ಸಿಪಾಯಿ ಕರ್ಮಚಾರಿಗಳು ಮತ್ತು ಕುಷ್ಠರೋಗಿಗಳಿಗೆ ವಿಶೇಷವಾಗಿ ಮೀಸಲಾದ ಯೋಜನೆ.

2010-11

ನನ್ನ ಮನೆ ನನ್ನ ಯೋಜನೆ

ವಾರ್ಷಿಕ ₹1 ಲಕ್ಷಕ್ಕಿಂತ ಕಡಿಮೆ ಆದಾಯವಿರುವ ಎಲ್ಲಾ ವರ್ಗದ ಜನರಿಗೆ ವಸತಿ ಒದಗಿಸುವುದು.

2015-16

ಡಾ. ಬಿ.ಆರ್.ಅಂಬೇಡ್ಕರ್ ವಸತಿ

ಗ್ರಾಮೀಣ ಮತ್ತು ನಗರ ಪ್ರದೇಶಗಳ ನಿವಾಸಿಗಳಿಗೆ. ಗ್ರಾಮೀಣ ಪ್ರದೇಶಕ್ಕೆ ₹1,50,000 ಹಾಗೂ ನಗರ ಪ್ರದೇಶಕ್ಕೆ ₹1,80,000 ಧನಸಹಾಯ.

2010-11

ಬಸವ ಇಂದಿರಾ ಗ್ರಾಮೀಣ ವಸತಿ

ಕರ್ನಾಟಕವನ್ನು 'ಗುಡಿಸಲು ಮುಕ್ತ ರಾಜ್ಯ'ವನ್ನಾಗಿ ಮಾಡಲು ಆದ್ಯತೆಯ ಆಧಾರದ ಮೇಲೆ ವಸತಿ ಸೌಕರ್ಯ ಕಲ್ಪಿಸುವ ಯೋಜನೆ.

🌱 7. ಕೃಷಿ, ಗ್ರಾಮೀಣಾಭಿವೃದ್ಧಿ ಮತ್ತು ಕಲ್ಯಾಣ ಕಾರ್ಯಕ್ರಮಗಳು

2009-10

ಭೂ ಚೇತನ ಯೋಜನೆ

ಕೃಷಿ ಇಳುವರಿಯನ್ನು ಹೆಚ್ಚಿಸಲು ರಾಜ್ಯ ಸರ್ಕಾರ ಜಾರಿಗೆ ತಂದ ತಾಂತ್ರಿಕ ಕಾರ್ಯಕ್ರಮ.

2013-14

ಭೂ ಸಮೃದ್ಧಿ ಕಾರ್ಯಕ್ರಮ

ಕೃಷಿ ಕ್ಷೇತ್ರದಲ್ಲಿ ನವೀನ ಮತ್ತು ಸುಧಾರಿತ ತಂತ್ರಜ್ಞಾನಗಳನ್ನು ಪರಿಚಯಿಸುವುದು.

2014

ಕೃಷಿ ಬೆಲೆ ಆಯೋಗ

ವೈಜ್ಞಾನಿಕ ಮತ್ತು ಕೃಷಿ ಉತ್ಪನ್ನಗಳಿಗೆ ಲಾಭದಾಯಕ ಬೆಲೆಯನ್ನು ನಿಗದಿಪಡಿಸುವ ಸಂಸ್ಥೆ.

2006-07

ಗ್ರಾಮೀಣ ಭಂಡಾರ ಯೋಜನೆ

ರೈತರ ಕೃಷಿ ಉತ್ಪನ್ನಗಳನ್ನು ಸಂಸ್ಕರಿಸುವುದಕ್ಕಾಗಿ ಮತ್ತು ಶೇಖರಣೆಗಾಗಿ ಜಾರಿಗೆ ತರಲಾಗಿದೆ.

2015

ಪಶುಭಾಗ್ಯ ಯೋಜನೆ

ಸಣ್ಣ ರೈತರಿಗೆ ಹಸು, ಕುರಿ, ಕೋಳಿ, ಹಂದಿ ಘಟಕ ಸ್ಥಾಪಿಸಲು ವಾಣಿಜ್ಯ ಬ್ಯಾಂಕ್‌ಗಳಿಂದ ₹1.2 ಲಕ್ಷ ಸಾಲ. SC/ST ಯವರಿಗೆ 33% ಸಹಾಯಧನ.

-

ಸ್ವಾವಲಂಬನೆ ಕಾರ್ಯಕ್ರಮ

ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆ ಪ್ರೋತ್ಸಾಹಿಸಲು 10 ಲಕ್ಷದವರೆಗೆ ಬ್ಯಾಂಕ್ ಸಾಲ. 3 ವರ್ಷದ ಬಡ್ಡಿಯನ್ನು ಸರ್ಕಾರವೇ ಭರಿಸುತ್ತದೆ.

-

ಸ್ವಚ್ಛತಾ ಮಿಷನ್

ರಾಜ್ಯದ 219 ನಗರ ಮತ್ತು ಪಟ್ಟಣಗಳಲ್ಲಿ ಸ್ವಚ್ಛತಾ ಕಾರ್ಯಕ್ರಮಕ್ಕಾಗಿ ₹80 ಕೋಟಿ ಮೀಸಲಿಡಲಾಗಿದೆ.

ಫೆಬ್ರವರಿ 25, 2007

ಸುವರ್ಣ ಗ್ರಾಮೋದಯ

ಗ್ರಾಮೀಣ ಅಭಿವೃದ್ಧಿಯಲ್ಲಿ ಆಳವಾದ ಮತ್ತು ಸಮಗ್ರ ಸಮುದಾಯಗಳನ್ನು ಅಭಿವೃದ್ಧಿಪಡಿಸುವ ಉದ್ದೇಶ.

2000-01

ಸಾಂತ್ವನ ಯೋಜನೆ

ಕೌಟುಂಬಿಕ ಹಿಂಸೆ, ವರದಕ್ಷಿಣೆ, ಲೈಂಗಿಕ ಕಿರುಕುಳ ಮುಂತಾದ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಮನಃವಸತಿ ಒದಗಿಸುವುದು (2013-14ರಲ್ಲಿ 205.61 ಕೋಟಿ ವೆಚ್ಚ).

2005

ಗ್ರಾಮ್-ಸುವರ್ಣ ಗ್ರಾಮೋದಯ

ತಾಲೂಕಿನ ಹಿಂದುಳಿದ ಗ್ರಾಮಗಳಲ್ಲಿ ಆರೋಗ್ಯ, ಶಿಕ್ಷಣ, ಮೂಲಸೌಕರ್ಯ (ನೀರು, ರಸ್ತೆ, ಶೌಚಾಲಯ) ಅಭಿವೃದ್ಧಿ.

2005-06

ನಮ್ಮ ಭೂಮಿ-ನಮ್ಮ ತೋಟ

ಭೂ ರಹಿತ ಕಾರ್ಮಿಕರಿಗಾಗಿ ಕೈತೋಟ ಬೆಳೆಸಲು ಭೂಮಿ ನೀಡಿ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿ ಸುಧಾರಿಸುವುದು.

📜 8. ಇತರ ಪ್ರಮುಖ ಯೋಜನೆಗಳು (Quick Recall)

ಯೋಜನೆ ವರ್ಷ ಯೋಜನೆ ವರ್ಷ
ನಗರ ಆಶ್ರಯ ಯೋಜನೆ1991-92ಉದ್ಯೋಗಿನಿ ಯೋಜನೆ1997-98
ಭೂಮಿ ಯೋಜನೆ2000ಆಶಾ-ಉಷಾ ಕಾರ್ಯಕ್ರಮ2005
ಸಂಧ್ಯಾ ಸುರಕ್ಷ ಯೋಜನೆ2007ಸೌರ ಬೆಳಕು ಯೋಜನೆ2009-10
ವಾಜಪೇಯಿ ಆರೋಗ್ಯಶ್ರೀ ಯೋಜನೆ2010ಸುವರ್ಣ ಭೂಮಿ ಯೋಜನೆ2011-12
ಸಕಾಲ ಯೋಜನೆ2012ಅಟಲಜಿ ಜನಸ್ನೇಹಿ ಕೇಂದ್ರ2012
ಅನ್ನಭಾಗ್ಯ ಯೋಜನೆ2013ಕ್ಷೀರಭಾಗ್ಯ ಯೋಜನೆ2013
ಮೈತ್ರಿ & ಮನಸ್ವಿನಿ ಯೋಜನೆ2013ವಿದ್ಯಶ್ರೀ ಯೋಜನೆ2013
ಬಿದಾಯಿ ಯೋಜನೆ2013ಜಲಸಿರಿ ಯೋಜನೆ2013-14
ಕೃಷಿ ಭಾಗ್ಯ ಯೋಜನೆ2014-15ಪ್ರಿಯದರ್ಶಿನಿ ಯೋಜನೆ2014-15
ಅಂಬೇಡ್ಕರ್ ನಿವಾಸ ಯೋಜನೆ2015ವಾತ್ಸಲ್ಯವಾಣಿ - 1042015
ಮುಖ್ಯಮಂತ್ರಿ ಸಾಂತ್ವನ ಹರೀಶ ಯೋಜನೆ2015--

💰 9. ರಾಜ್ಯ ಸರ್ಕಾರದ ಆದಾಯದ ಮೂಲಗಳು

ಎ) ಕಂದಾಯ ಆದಾಯಗಳು

  • • ಸ್ವಂತ ತೆರಿಗೆಗಳು: ಅಬಕಾರಿ, ವಾಹನ, ಮಾರಾಟ ಮತ್ತು ಆಸ್ತಿ ತೆರಿಗೆ.
  • • ಕೇಂದ್ರದ ಪಾಲು: ಕೇಂದ್ರ ತೆರಿಗೆಗಳಲ್ಲಿ ರಾಜ್ಯದ ಪಾಲಿನ ಆದಾಯ.
  • • ತೆರಿಗೆಯೇತರ ಆದಾಯ: ಶುಲ್ಕಗಳು ಮತ್ತು ಇತರ ಮೂಲಗಳು.
  • • ಕೇಂದ್ರ ಅನುದಾನ: ಕೇಂದ್ರ ಸರ್ಕಾರ ನೀಡುವ ಆರ್ಥಿಕ ಸಹಾಯ.
  • ಸ್ವಂತ ತೆರಿಗೆ ಆದಾಯ ₹ 1,01,235 ಕೋಟಿ

ಬಿ) ಬಂಡವಾಳದ ಆದಾಯಗಳು

  • • ಭಾರತ ಸರ್ಕಾರದ ಸಾಲ: ಕೇಂದ್ರದಿಂದ ಪಡೆದ ಸಾಲ.
  • • ಆಂತರಿಕ ಸಾಲ: ರಾಜ್ಯದ ಒಳಗಿನ ಹಣಕಾಸು ಸಂಸ್ಥೆಗಳ ಸಾಲ.
  • • ಮಾರುಕಟ್ಟೆ ಸಾಲ: ಬಾಂಡ್‌ಗಳ ಮೂಲಕ ಸಂಗ್ರಹಿಸಿದ ಹಣ.
  • • ಮುಂಗಡ ಸಾಲ: ಮರುಪಾವತಿಯಾದ ಮುಂಗಡಗಳು.
  • 2015-16 ಸಂಗ್ರಹ ₹ 22,509 ಕೋಟಿ

🎯 ಪರೀಕ್ಷಾ ವಿಶೇಷಾಂಶಗಳು (Exam Highlights)

ರಾಜ್ಯ ಸಂಚಿತ ನಿಧಿಯ ಒಟ್ಟು ಮೊತ್ತ ₹ 1,39,476 ಕೋಟಿ
ಸಂಚಿತ ನಿಧಿಯಲ್ಲಿ ತೆರಿಗೆ ಪಾಲು 72.90%

📉 10. ರಾಜ್ಯ ಸರ್ಕಾರದ ಖರ್ಚು - ವೆಚ್ಚಗಳು

ವಿಭಾಗ - ಎ

ಅಭಿವೃದ್ಧಿ ವೆಚ್ಚಗಳು

• ಆರ್ಥಿಕ ಸೇವೆಗಳು:

ಕೃಷಿ, ಕೈಗಾರಿಕೆ, ಸಾರಿಗೆ ಮತ್ತು ಸಂಪರ್ಕ.

₹ 44,588 ಕೋಟಿ (2014-15)
• ಸಾಮಾಜಿಕ ಸೇವೆಗಳು:

ಶಿಕ್ಷಣ, ಕ್ರೀಡೆ, ಆರೋಗ್ಯ, ವಸತಿ, ಮತ್ತು SC/ST ಕಲ್ಯಾಣ.

₹ 48,173 ಕೋಟಿ (2014-15)
ವಿಭಾಗ - ಬಿ

ಅಭಿವೃದ್ಧಿಯೇತರ ವೆಚ್ಚಗಳು

• ಆಡಳಿತ ಮತ್ತು ಸಿಬ್ಬಂದಿ ವೆಚ್ಚ:

ಬಡ್ಡಿ ಪಾವತಿ, ನಿವೃತ್ತಿ ವೇತನ (Pension) ಮತ್ತು ಹಣಕಾಸಿನ ಸೇವೆಗಳು.

₹ 1,37,665 ಕೋಟಿ (2014-15)
ಇದರಲ್ಲಿ ಬಡ್ಡಿ ಪಾವತಿಯ ಪಾಲು: ₹ 90,563 ಕೋಟಿ
ಆಯವ್ಯಯದ ಮುಖ್ಯಾಂಶಗಳು (Budget Highlights)
2015-16 ಒಟ್ಟು ವೆಚ್ಚ ₹ 1,42,534 ಕೋಟಿ
2015-16 ಯೋಜನಾ ವೆಚ್ಚ (Plan Outlay) ₹ 65,903 ಕೋಟಿ
12ನೇ ಪಂಚವಾರ್ಷಿಕ ಯೋಜನೆ (ಅಂದಾಜು ವೆಚ್ಚ) ₹ 2,55,250 ಕೋಟಿ

🌍 11. ಮಾನವ ಅಭಿವೃದ್ಧಿ ಸೂಚ್ಯಂಕ (HDI)

📌 ಪ್ರಮುಖ ಮಾಹಿತಿಗಳು:

ಕರ್ನಾಟಕದ ಸ್ಥಾನ: ಭಾರತದಲ್ಲಿ 10ನೇ ಸ್ಥಾನ (2011ರ ವರದಿ ಅನ್ವಯ).
ಪ್ರಮುಖ ಮಾನದಂಡಗಳು: ಜೀವನ ಮಟ್ಟ (Standard of living), ಆರೋಗ್ಯ (Health) ಮತ್ತು ಶಿಕ್ಷಣ (Education).

🏆 ಪ್ರಥಮ 4 ಜಿಲ್ಲೆಗಳು

  1. ಬೆಂಗಳೂರು ನಗರ
  2. ದಕ್ಷಿಣ ಕನ್ನಡ
  3. ಉಡುಪಿ
  4. ಕೊಡಗು

⚠️ ಕೊನೆಯ 4 ಜಿಲ್ಲೆಗಳು

  1. ರಾಯಚೂರು
  2. ಯಾದಗಿರಿ
  3. ಕೊಪ್ಪಳ
  4. ವಿಜಯಪುರ

📅 12. ಪ್ರಮುಖ ಯೋಜನೆಗಳು - ಜಾರಿಯಾದ ವರ್ಷ (Recap)

ಯೋಜನೆ ಹೆಸರು ಜಾರಿಯಾದ ವರ್ಷ ಯೋಜನೆ ಹೆಸರು ಜಾರಿಯಾದ ವರ್ಷ
ಉದ್ಯೋಗಿನಿ 1997-98 ಸ್ತ್ರೀ ಶಕ್ತಿ 2000-01
ಭೂಮಿ ಯೋಜನೆ 2000 ಭಾಗ್ಯಲಕ್ಷ್ಮಿ 2005-06
ಸಕಾಲ ಯೋಜನೆ 2012 ಅನ್ನಭಾಗ್ಯ 2013
ಕ್ಷೀರಭಾಗ್ಯ 2013 ಕೃಷಿ ಭಾಗ್ಯ 2014-15

⚖️ 13. ಪ್ರಮುಖ ಆಯೋಗಗಳು ಮತ್ತು ಜಲವಿದ್ಯುತ್ ಕೇಂದ್ರಗಳು

ಆಯೋಗ

ಪ್ರಾದೇಶಿಕ ಅಸಮತೋಲನ ಅಧ್ಯಯನ ಆಯೋಗ

👨‍💼 ಅಧ್ಯಕ್ಷರು: ಡಾ. ಡಿ.ಎಂ.ನಂಜುಂಡಪ್ಪ

📅 ರಚನೆ: 2000 | ವರದಿ ಸಲ್ಲಿಕೆ: 2002

ತಾಲೂಕುಗಳ ವರ್ಗೀಕರಣ:
  • ಅತ್ಯಂತ ಹಿಂದುಳಿದ: 39
  • ಅತೀ ಹಿಂದುಳಿದ: 40
  • ಹಿಂದುಳಿದ: 35
  • ಅಭಿವೃದ್ಧಿ ಹೊಂದಿದ: 61
ಪ್ರಾಧಿಕಾರ

ಅಭಿವೃದ್ಧಿ ಮಂಡಳಿಗಳು

🏔️ ಮಲೆನಾಡು ಅಭಿವೃದ್ಧಿ ಮಂಡಳಿ: 1993

🏜️ ಬಯಲುಸೀಮೆ ಅಭಿವೃದ್ಧಿ ಮಂಡಳಿ: 1995

🌊 ಕರಾವಳಿ ಅಭಿವೃದ್ಧಿ ಪ್ರಾಧಿಕಾರ: 2008

ಜಲವಿದ್ಯುತ್ ಕೇಂದ್ರ (Power Station) ಸಾಮರ್ಥ್ಯ (Capacity)
ಶರಾವತಿ ವಿದ್ಯುತ್ ಕೇಂದ್ರ (ಅತಿ ದೊಡ್ಡದು)1035 ಮೆ. ವ್ಯಾಟ್
ಕಾಳಿ ನದಿ ಜಲವಿದ್ಯುತ್ ಕೇಂದ್ರ955 ಮೆ. ವ್ಯಾಟ್
ಆಲಮಟ್ಟಿ ಡ್ಯಾಂ ಕೇಂದ್ರ290 ಮೆ. ವ್ಯಾಟ್
ಗೇರುಸೊಪ್ಪ ಜಲ ವಿದ್ಯುತ್ ಕೇಂದ್ರ240 ಮೆ. ವ್ಯಾಟ್
ಕದ್ರಾ ಡ್ಯಾಂ ಕೇಂದ್ರ150 ಮೆ. ವ್ಯಾಟ್
ಮಹಾತ್ಮಾ ಗಾಂಧಿ ಜಲ ವಿದ್ಯುತ್ ಕೇಂದ್ರ140 ಮೆ. ವ್ಯಾಟ್
ಕೊಡಸಲ್ಲಿ ಡ್ಯಾಂ ಕೇಂದ್ರ112 ಮೆ. ವ್ಯಾಟ್
ಲಿಂಗನಮಕ್ಕಿ ಜಲ ವಿದ್ಯುತ್ ಕೇಂದ್ರ55 ಮೆ. ವ್ಯಾಟ್
ಶಿವನಸಮುದ್ರ (ಏಷ್ಯಾದ ಮೊದಲ ಯೋಜನೆ)42 ಮೆ. ವ್ಯಾಟ್
ಭದ್ರಾ ಜಲ ವಿದ್ಯುತ್39.20 ಮೆ. ವ್ಯಾಟ್
ಘಟಪ್ರಭ / ಮುನಿರಾಬಾದ್ / ಶಿಂಷಾ32 / 28 / 17.2 ಮೆ. ವ್ಯಾಟ್

🌿 14. ನೀರಾವರಿ ಮೂಲಗಳು ಮತ್ತು ಅರಣ್ಯ ಸಂಪತ್ತು

🌊 ಕಾಲುವೆ ನೀರಾವರಿ (Canal)

  • 📍 ರಾಯಚೂರು: 1,86,560 ಹೆ
  • 📍 ವಿಜಯಪುರ: 1,13,206 ಹೆ
  • 📍 ಯಾದಗಿರಿ: 1,04,307 ಹೆ
  • 📍 ಮಂಡ್ಯ: 95,731 ಹೆ

🏞️ ಕೆರೆ ನೀರಾವರಿ (Tank)

  • 📍 ಶಿವಮೊಗ್ಗ: 44,809 ಹೆ
  • 📍 ಮಂಡ್ಯ: 15,914 ಹೆ
  • 📍 ತುಮಕೂರು: 10,535 ಹೆ
  • 📍 ಮೈಸೂರು: 8,821 ಹೆ

🕳️ ತೆರೆದ ಬಾವಿ (Open Well)

  • 📍 ಬೆಳಗಾವಿ: 1,44,430 ಹೆ
  • 📍 ವಿಜಯಪುರ: 77,499 ಹೆ
  • 📍 ದಕ್ಷಿಣ ಕನ್ನಡ: 40,587 ಹೆ
  • 📍 ಉಡುಪಿ: 23,347 ಹೆ

🚜 ಕೊಳವೆ ಬಾವಿ (Borewell)

  • 📍 ಬೆಳಗಾವಿ: 1,99,314 ಹೆ
  • 📍 ತುಮಕೂರು: 1,60,576 ಹೆ
  • 📍 ಬಾಗಲಕೋಟೆ: 1,09,731 ಹೆ
  • 📍 ದಾವಣಗೆರೆ: 1,09,052 ಹೆ

🌲 ಅರಣ್ಯ ಪ್ರದೇಶದ ವಿವರಗಳು (Forest Details)

ಹೆಚ್ಚು ಅರಣ್ಯ (Highest)

ಉತ್ತರಕನ್ನಡ: 79.40%

ಚಾಮರಾಜನಗರ: 48.36%

ಕೊಡಗು: 32.76%

ಕಡಿಮೆ ಅರಣ್ಯ (Lowest)

ವಿಜಯಪುರ: 0.19%

ರಾಯಚೂರು: 2.17%

ಬೆಂಗಳೂರು ನಗರ: 2.32%

ಅರಣ್ಯದ ವಿಧ (Forest Type) ಪ್ರಮಾಣ (%)
ನಿತ್ಯಹರಿದ್ವರ್ಣ (Evergreen)16.70
ಅರೆನಿತ್ಯಹರಿದ್ವರ್ಣ (Semi-Evergreen)13.56
ತೇವಾಂಶವುಳ್ಳ ಎಲೆ ಉದುರಿಸುವ (Moist Deciduous)24.20
ಒಣ ಎಲೆ ಉದುರಿಸುವ (ಅತಿ ಹೆಚ್ಚು)24.34
ಮುಳ್ಳು ಅರಣ್ಯ (Thorn)11.93

🐾 15. ಜಾನುವಾರು ಅಭಿವೃದ್ಧಿ ಮತ್ತು ಮತ್ಸ್ಯ ಧಾಮಗಳು

🐄 ಜಾನುವಾರು ಮತ್ತು ಕುಕ್ಕುಟ ಸಂವರ್ಧನೆ

📍 ಹೆಸರಘಟ್ಟ (ಬೆಂಗಳೂರು): ರಾಜ್ಯ/ಕೇಂದ್ರೀಯ ವೀರ್ಯ ಸಂಕಲನ ಕೇಂದ್ರ, ಹಂದಿ ಅಭಿವೃದ್ಧಿ, ಮತ್ತು ಕುಕ್ಕುಟ ಸಂವರ್ಧನೆ.

📍 ಧಾರವಾಡ & ಮುನಿರಾಬಾದ್: ರಾಜ್ಯ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರಗಳು.

ಕುಕ್ಕುಟ ತರಬೇತಿ ಕೇಂದ್ರಗಳು:

ಮಳವಳ್ಳಿ, ಗಂಗಾವತಿ ಮತ್ತು ಹಾವೇರಿ.

💡 ಪರೀಕ್ಷಾ ದೃಷ್ಟಿಯಿಂದ...

ಜಾನುವಾರು ಮತ್ತು ಕುಕ್ಕುಟ ಅಭಿವೃದ್ಧಿಗೆ ಸಂಬಂಧಿಸಿದ ಬಹುತೇಕ ರಾಜ್ಯ ಮತ್ತು ಕೇಂದ್ರೀಯ ಮಟ್ಟದ ಮುಖ್ಯ ಕಛೇರಿಗಳು ಬೆಂಗಳೂರಿನ ಹೆಸರಘಟ್ಟದಲ್ಲಿ ಇವೆ ಎಂಬುದು ನೆನಪಿರಲಿ.

ಮತ್ಸ್ಯಧಾಮ (Fish Sanctuary) ಸ್ಥಳ (Location) ನದಿ (River)
ರಾಮನಾಥಪುರಅಂಕಲಗೂಡು (ಹಾಸನ)ಕಾವೇರಿ
ರಂಗನತಿಟ್ಟುಶ್ರೀರಂಗಪಟ್ಟಣ (ಮಂಡ್ಯ)ಕಾವೇರಿ
ಮುತ್ತತ್ತಿಮಳವಳ್ಳಿ (ಮಂಡ್ಯ)ಕಾವೇರಿ
ಶಿಶುಲಬೆಳ್ತಂಗಡಿ (ದಕ್ಷಿಣ ಕನ್ನಡ)ಕುಮದಧಾರಾ
ಅಭಿರಾಮ ಮೀನುಕೊಪ್ಪ (ಚಿಕ್ಕಮಗಳೂರು)ತುಂಗಾ
ಧರ್ಮಸ್ಥಳಬೆಳ್ತಂಗಡಿ (ದಕ್ಷಿಣ ಕನ್ನಡ)ನೇತ್ರಾವತಿ
ಕೊಕ್ಕೂರುಬೆಳ್ತಂಗಡಿ (ದಕ್ಷಿಣ ಕನ್ನಡ)ಫಾಲ್ಗುಣಿ

🏢 16. ಪ್ರಮುಖ ಯೋಜನೆಗಳು, ಸಂಸ್ಥೆಗಳು ಮತ್ತು ನೀತಿಗಳು

📈 ಉದ್ಯೋಗ ಮತ್ತು ವ್ಯಾಪಾರ ಉತ್ತೇಜನ

🤝 ಕರ್ನಾಟಕ ಉದ್ಯೋಗ ಮಿತ್ರ: ಹೂಡಿಕೆ ಪ್ರೋತ್ಸಾಹಿಸುವ ಸಂಸ್ಥೆ.

🌍 ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ: ರಫ್ತು ಅಭಿವೃದ್ಧಿ ಮತ್ತು ಉತ್ತೇಜನ (ಬೆಂಗಳೂರು).

📍 ರಫ್ತು ಮಂಡಳಿ ಕೇಂದ್ರಗಳು: ಧಾರವಾಡ ಮತ್ತು ಮೈಸೂರು.

📡 ರಾಜ್ಯ ದೂರಸಂವೇದಿ ಕೇಂದ್ರ: ಬೆಂಗಳೂರು.

🏗️ ಮೂಲಸೌಕರ್ಯ ಮತ್ತು ವಸತಿ

🧱 ಕರ್ನಾಟಕ ಭೂಸೇನಾ ನಿಗಮ (1974): ಮೂಲ ಸೌಕರ್ಯ ಅಭಿವೃದ್ಧಿ.

🏠 ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ (2000): ಗ್ರಾಮೀಣ ವಸತಿ ಸೌಲಭ್ಯ.

🏘️ ಸುವರ್ಣ ಗ್ರಾಮೋದಯ ಯೋಜನೆ (2007): ಗ್ರಾಮಗಳ ಸಮಗ್ರ ಅಭಿವೃದ್ಧಿ.

⚖️ ಗ್ರಾಮ ಸ್ವರಾಜ್ಯ (2007): ಪಂಚಾಯತ್ ಸಬಲೀಕರಣ ಯೋಜನೆ.

📅 ಪ್ರಮುಖ ನೀತಿಗಳು ಮತ್ತು ಜಾರಿಯಾದ ವರ್ಷಗಳು

ರಾಜ್ಯ ಸರ್ಕಾರದ ನೀತಿ (Policy Name) ವರ್ಷ (Year)
ನಿರ್ಮಲ ಗ್ರಾಮ ಯೋಜನೆ (ಗ್ರಾಮೀಣ ಸ್ವಚ್ಛತೆ)1995
ನಿರ್ಮಲ ಗ್ರಾಮ ಪುರಸ್ಕಾರ ಯೋಜನೆ2007-08
ಕರ್ನಾಟಕ ಪ್ರವಾಸೋದ್ಯಮ ನೀತಿ (Tourism Policy)2009
ಕರ್ನಾಟಕ ಸೌರನೀತಿ (Solar Policy)2011
ಕರ್ನಾಟಕ ಸಮಗ್ರ ಕೃಷಿ ಅಭಿವೃದ್ಧಿ ನೀತಿ2011
ಎಲೆಕ್ಟ್ರಾನಿಕ್ಸ್ ಸಿಸ್ಟಮ್ ವಿನ್ಯಾಸ ಮತ್ತು ತಯಾರಿಕಾ ನೀತಿ2013
ಕರ್ನಾಟಕ ಹೊಸ ಮೂಲ ಸೌಕರ್ಯ ನೀತಿ2013
ಕರ್ನಾಟಕ ಜವಳಿ ನೀತಿ (Textile Policy)2013
💡 ಪರೀಕ್ಷಾ ಟಿಪ್ಸ್:

೨೦೧೩ನೇ ವರ್ಷದಲ್ಲಿ ಎಲೆಕ್ಟ್ರಾನಿಕ್ಸ್, ಮೂಲಸೌಕರ್ಯ ಮತ್ತು ಜವಳಿ ನೀತಿಗಳು ಒಟ್ಟಾಗಿ ಜಾರಿಗೆ ಬಂದಿವೆ ಎಂಬುದನ್ನು ನೆನಪಿಟ್ಟುಕೊಳ್ಳುವುದು ಸುಲಭ. ಹಾಗೆಯೇ, ೨೦೦೭ರಲ್ಲಿ ಸುವರ್ಣ ಗ್ರಾಮೋದಯ ಮತ್ತು ಗ್ರಾಮ ಸ್ವರಾಜ್ಯ ಯೋಜನೆಗಳು ಆರಂಭವಾಗಿವೆ.

KPSC Footer