ಆನ್‌ಲೈನ್ ತರಗತಿಗಳು
| ನೇರ ತರಗತಿಗಳು | ಟೆಸ್ಟ್ ಸರಣಿ | ಅಂಚೆ ಪ್ಯಾಕೇಜ್ | 📞 9141066148
ಕರ್ನಾಟಕ ಭೂಗೋಳ - ಸಂಪೂರ್ಣ ಮಾಹಿತಿ | KPSC Mitra GK

ಕರ್ನಾಟಕ ಭೂಗೋಳ: ಸಮಗ್ರ ಮಾಹಿತಿ

ನಮ್ಮ ರಾಜ್ಯ - ಕರ್ನಾಟಕ

ಕರ್ನಾಟಕ ಎಂಬ ಹೆಸರು ಪ್ರಾಚೀನ ಕಾಲದಿಂದಲೂ ಬಳಕೆಯಲ್ಲಿದೆ. ಇದನ್ನು 'ಕರುನಾಡು' ಎಂದು ಕರೆಯುತ್ತಿದ್ದರು.

ರಾಜ್ಯದ ಉದಯ ಮತ್ತು ಮರುನಾಮಕರಣ:
• ಸ್ವಾತಂತ್ರ್ಯದ ನಂತರ ದಕ್ಷಿಣದ 9 ಜಿಲ್ಲೆಗಳನ್ನೊಳಗೊಂಡು ಮೈಸೂರು ರಾಜ್ಯ ಉದಯವಾಯಿತು.
1956 ನವೆಂಬರ್ 1: ಬಾಂಬೆ, ಹೈದ್ರಾಬಾದ್, ಮದ್ರಾಸ್ ಮತ್ತು ಕೊಡಗು ಪ್ರಾಂತ್ಯಗಳ ಕನ್ನಡ ಭಾಷಿಗರನ್ನು ಒಟ್ಟುಗೂಡಿಸಿ 'ವಿಶಾಲ ಮೈಸೂರು ರಾಜ್ಯ' ಅಸ್ತಿತ್ವಕ್ಕೆ ಬಂದಿತು. (CM: ಎಸ್.ನಿಜಲಿಂಗಪ್ಪ).
1973 ನವೆಂಬರ್ 1: ವಿಶಾಲ ಮೈಸೂರು ರಾಜ್ಯಕ್ಕೆ 'ಕರ್ನಾಟಕ' ಎಂದು ಮರುನಾಮಕರಣ ಮಾಡಲಾಯಿತು. (CM: ಡಿ. ದೇವರಾಜ ಅರಸು).

ಭೌಗೋಳಿಕ ಸ್ಥಾನ ಮತ್ತು ಮೇರೆಗಳು

ಭಾರತದ ದಕ್ಷಿಣದಲ್ಲಿದ್ದು, ಪರ್ಯಾಯ ದ್ವೀಪದ ಪಶ್ಚಿಮದ ಮಧ್ಯಭಾಗದಲ್ಲಿ ಕರ್ನಾಟಕವು ನೆಲೆಸಿದೆ. ಸಮುದ್ರ ಮಟ್ಟದಿಂದ ಸರಾಸರಿ 450 - 900 ಮೀ. ಎತ್ತರದಲ್ಲಿದ್ದು, ಕೆಲವು ಭಾಗಗಳಲ್ಲಿ 1800 ಮೀ ವರೆಗೂ ಎತ್ತರವಿದೆ.

ಉತ್ತರದ ತುದಿ: ಔರಾದ್ (ಬೀದರ್)
ದಕ್ಷಿಣದ ತುದಿ: ಗುಂಡ್ಲುಪೇಟೆ (ಚಾಮರಾಜನಗರ)
ಪಶ್ಚಿಮದ ತುದಿ: ಕಾರವಾರ (ಉತ್ತರ ಕನ್ನಡ)
ಪೂರ್ವದ ತುದಿ: ಮುಳಬಾಗಿಲು (ಕೋಲಾರ)

ಪ್ರಮುಖ ನಗರಗಳ ಅಕ್ಷಾಂಶ ಮತ್ತು ರೇಖಾಂಶಗಳು

ನಗರ ಸ್ಥಾನ (ಅಕ್ಷಾಂಶ - ರೇಖಾಂಶ)
ಬೆಂಗಳೂರು13° ಉ.ಅ - 77° 35' ಪೂ.ರೇ
ಮೈಸೂರು12° 18' ಉ.ಅ - 76° 38' ಪೂ.ರೇ
ಮಂಗಳೂರು12° 51' ಉ.ಅ - 74° 50' ಪೂ.ರೇ
ಬೆಳಗಾವಿ15° 52' ಉ.ಅ - 74° 30' ಪೂ.ರೇ
ಕಲಬುರಗಿ17° ಉ.ಅ - 77° ಪೂ.ರೇ
ಬೀದರ್17° 54' ಉ.ಅ - 77° 35' ಪೂ.ರೇ

ಗಡಿ ರೇಖೆಗಳು ಮತ್ತು ವಿಸ್ತೀರ್ಣ

ಪಶ್ಚಿಮಕ್ಕೆಅರಬ್ಬಿ ಸಮುದ್ರವಾಯುವ್ಯಕ್ಕೆಗೋವಾ
ಉತ್ತರಕ್ಕೆಮಹಾರಾಷ್ಟ್ರಪೂರ್ವಕ್ಕೆತೆಲಂಗಾಣ ಮತ್ತು ಆಂಧ್ರ ಪ್ರದೇಶ
ದಕ್ಷಿಣ/ಆಗ್ನೇಯತಮಿಳುನಾಡು & ಕೇರಳವಿಸ್ತೀರ್ಣ1,91,791 ಚ.ಕಿ.ಮೀ.
ಆಡಳಿತಾತ್ಮಕ ಮಾಹಿತಿ:
ರಾಜಧಾನಿ: ಬೆಂಗಳೂರು (ವಿಸ್ತೀರ್ಣದಲ್ಲಿ ಅತಿ ಚಿಕ್ಕ ಜಿಲ್ಲೆ).
ದೊಡ್ಡ ಜಿಲ್ಲೆ: ಬೆಳಗಾವಿ (ವಿಸ್ತೀರ್ಣದಲ್ಲಿ).
ವಿಭಾಗಗಳು: ಬೆಂಗಳೂರು, ಮೈಸೂರು, ಬೆಳಗಾವಿ, ಕಲಬುರಗಿ.
ವಿಶೇಷ ಸ್ಥಾನಮಾನ: ಜನವರಿ 17, 2014 ರಿಂದ ಹೈದ್ರಾಬಾದ್ ಕರ್ನಾಟಕ (ಕಲ್ಯಾಣ ಕರ್ನಾಟಕ) ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಜಾರಿಗೆ ಬಂದಿದೆ. (ಜಿಲ್ಲೆಗಳು: ಬೀದರ್, ಕಲಬುರಗಿ, ಯಾದಗಿರಿ, ಕೊಪ್ಪಳ, ರಾಯಚೂರು, ಬಳ್ಳಾರಿ).

ಕರ್ನಾಟಕದ ಪ್ರಾಕೃತಿಕ ವಿಭಾಗಗಳು

ಭೂ ಸ್ವರೂಪದ ಆಧಾರದ ಮೇಲೆ ಕರ್ನಾಟಕವನ್ನು ಮೂರು ಪ್ರಮುಖ ಪ್ರಾಕೃತಿಕ ವಿಭಾಗಗಳಾಗಿ ವಿಂಗಡಿಸಲಾಗಿದೆ:

1. ಕರಾವಳಿ ಮೈದಾನ (The Coastal Plain)

ಅರಬ್ಬಿ ಸಮುದ್ರ ಮತ್ತು ಮಲೆನಾಡುಗಳ ಮಧ್ಯೆ ವಿಸ್ತರಿಸಿರುವ ಈ ಭಾಗವನ್ನು 'ಕೆನರಾ/ಕರ್ನಾಟಕ ಕರಾವಳಿ' ಎನ್ನುವರು.

2. ಮಲೆನಾಡು ಪ್ರದೇಶ (The Malnad Region)

ಪಶ್ಚಿಮ ಘಟ್ಟಗಳನ್ನೇ ಮಲೆನಾಡು ಅಥವಾ 'ಸಹ್ಯಾದ್ರಿ ಬೆಟ್ಟಗಳು' ಎನ್ನುವರು. ಇದು ಜೈವಿಕ ವೈವಿಧ್ಯತಾವಲಯವಾಗಿದೆ.

ಪ್ರಮುಖ ಘಾಟಿಗಳುಸಂಪರ್ಕಿಸುವ ಸ್ಥಳಗಳು
ಚಾರ್ಮಡಿ ಘಾಟಿಮಂಗಳೂರು - ಚಿಕ್ಕಮಗಳೂರು
ಶಿರಾಡಿ ಘಾಟಿಸಕಲೇಶಪುರ - ಮಂಗಳೂರು
ಆಗುಂಬೆ ಘಾಟ್ಶಿವಮೊಗ್ಗ - ಉಡುಪಿ (ದಕ್ಷಿಣ ಭಾರತದ ಚಿರಾಪುಂಜಿ)
ಹುಲಿಕಲ್ ಘಾಟ್ಶಿವಮೊಗ್ಗ - ಕುಂದಾಪುರ

3. ಮೈದಾನ ಪ್ರದೇಶ (The Maidan Region)

ಇದು ಸಮುದ್ರ ಮಟ್ಟದಿಂದ 450-760 ಮೀ. ಎತ್ತರದಲ್ಲಿದ್ದು, ಪಶ್ಚಿಮದಿಂದ ಪೂರ್ವಕ್ಕೆ ಇಳಿಜಾರಾಗಿದೆ. ಇದರಲ್ಲಿ ಎರಡು ವಿಧ:

A) ಉತ್ತರ ಮೈದಾನ (Northern Maidan)

B) ದಕ್ಷಿಣ ಮೈದಾನ (Southern Maidan)

ವಾಯುಗುಣ ಮತ್ತು ಮಣ್ಣು

ಕರ್ನಾಟಕವು ಉಷ್ಣವಲಯದ ಮಾನ್ಸೂನ್ ವಾಯುಗುಣವನ್ನು ಹೊಂದಿದೆ.

ಕರ್ನಾಟಕದ ವಾಯುಗುಣದ ಹಂತಗಳು

1. ಬೇಸಿಗೆ ಕಾಲ (ಮಾರ್ಚ್ ನಿಂದ ಮೇ):
• ಅತಿ ಶಾಖ ಮತ್ತು ಶುಷ್ಕತೆಯಿಂದ ಕೂಡಿರುತ್ತದೆ.
ರಾಯಚೂರು: ರಾಜ್ಯದಲ್ಲಿಯೇ ಅತಿ ಹೆಚ್ಚು ಉಷ್ಣಾಂಶ (45.6° C) ದಾಖಲಾದ ಸ್ಥಳ.
ಕಾಫಿ ಹೂ ಮಳೆ / ಮಾವಿನ ಹೊಯ್ಯು: ಬೇಸಿಗೆಯಲ್ಲಿ ಬೀಳುವ ಈ ಮಳೆಯು ಕಾಫಿ ಮತ್ತು ಮಾವಿನ ಫಸಲಿಗೆ ನೆರವಾಗುತ್ತದೆ.
2. ಮಳೆಗಾಲ (ನೈಋತ್ಯ ಮಾನ್ಸೂನ್ - ಜೂನ್ ನಿಂದ ಸೆಪ್ಟೆಂಬರ್):
• ಕರ್ನಾಟಕವು ವಾರ್ಷಿಕ ಮಳೆಯ ಶೇ. 80 ರಷ್ಟು ಮಳೆಯನ್ನು ಈ ಕಾಲದಲ್ಲೇ ಪಡೆಯುತ್ತದೆ.
ಆಗುಂಬೆ: ಅತಿ ಹೆಚ್ಚು ಮಳೆ ಬೀಳುವ ಸ್ಥಳ - "ಕರ್ನಾಟಕದ ಚಿರಾಪುಂಜಿ".
ನಾಯಕನ ಹಟ್ಟಿ (ಚಳ್ಳಕೆರೆ): ರಾಜ್ಯದಲ್ಲಿ ಅತಿ ಕಡಿಮೆ ಮಳೆ ಪಡೆಯುವ ಸ್ಥಳ.
3. ಈಶಾನ್ಯ ಮಾನ್ಸೂನ್ / ನಿರ್ಗಮನ ಕಾಲ (ಅಕ್ಟೋಬರ್ ನಿಂದ ನವೆಂಬರ್):
• ಮಾರುತಗಳು ರಾಜ್ಯದಿಂದ ನಿರ್ಗಮಿಸುವ ಕಾಲ. ಶೇ. 12 ರಷ್ಟು ಮಳೆಯಾಗುತ್ತದೆ.
4. ಚಳಿಗಾಲ (ಡಿಸೆಂಬರ್ ನಿಂದ ಫೆಬ್ರವರಿ):
• ತಿಳಿಯಾದ ಆಕಾಶ ಮತ್ತು ಕಡಿಮೆ ಆದ್ರ್ರತೆ ಇರುತ್ತದೆ. ಜನವರಿಯನ್ನು 'ಪ್ರವಾಸ ಮಾಸ' ಎನ್ನಲಾಗುವುದು.
ಬೆಳಗಾವಿ: ಅತಿ ಕಡಿಮೆ ಉಷ್ಣಾಂಶ (6.70° C) ದಾಖಲಾಗುವ ಜಿಲ್ಲೆ.

ಕರ್ನಾಟಕದ ಮಣ್ಣುಗಳು

ಭೂಮಿಯ ಮೇಲಿನ ತೆಳುವಾದ ಪದರವನ್ನು ಮಣ್ಣು ಎನ್ನುವರು. ರಾಜ್ಯದಲ್ಲಿ ಪ್ರಮುಖವಾಗಿ 4 ವಿಧದ ಮಣ್ಣುಗಳಿವೆ:

ಮಣ್ಣಿನ ವಿಧ ಲಕ್ಷಣಗಳು ಮತ್ತು ಜಿಲ್ಲೆಗಳು ಪ್ರಮುಖ ಬೆಳೆಗಳು
ಕೆಂಪು ಮಣ್ಣು ಗ್ರಾನೈಟ್ ಶಿಲೆಗಳಿಂದ ರೂಪಿತ. ಕಬ್ಬಿಣದ ಆಕ್ಸೈಡ್ ಇರುವುದರಿಂದ ಕೆಂಪು ಬಣ್ಣ.
ಜಿಲ್ಲೆ: ತುಮಕೂರು, ಬೆಂಗಳೂರು, ಕೋಲಾರ, ಮೈಸೂರು.
ರಾಗಿ, ಜೋಳ, ದ್ವಿದಳ ಧಾನ್ಯ.
ಕಪ್ಪು ಮಣ್ಣು (ಎರೆಮಣ್ಣು) ಬಸಾಲ್ಟ್ ಶಿಲೆಯಿಂದ ಉಂಟಾಗಿದೆ. ತೇವಾಂಶ ಹಿಡಿದಿಡುವ ಗುಣ ಹೊಂದಿದೆ.
ಜಿಲ್ಲೆ: ಧಾರವಾಡ, ಗದಗ, ಬಳ್ಳಾರಿ, ಕಲಬುರಗಿ, ಬೆಳಗಾವಿ.
ಹತ್ತಿ, ಜೋಳ, ಸೂರ್ಯಕಾಂತಿ, ಮೆಣಸಿನಕಾಯಿ, ಕಬ್ಬು.
ಜಂಬಿಟ್ಟಿಗೆ (ಲ್ಯಾಟರೈಟ್) ಅಧಿಕ ಮಳೆ ಬೀಳುವಲ್ಲಿ ಕಂಡುಬರುತ್ತದೆ. ಬೇಸಿಗೆಯಲ್ಲಿ ಗಟ್ಟಿಯಾಗಿ ಶಿಲೆಯಾಗುತ್ತದೆ.
ಜಿಲ್ಲೆ: ಉತ್ತರ ಕನ್ನಡ, ಉಡುಪಿ, ಕೊಡಗು, ಶಿವಮೊಗ್ಗ.
ಗೋಡಂಬಿ, ಚಹ, ಕಾಫಿ, ಏಲಕ್ಕಿ, ರಬ್ಬರ್.
ಕರಾವಳಿ ಮೆಕ್ಕಲು ಮಣ್ಣು ನದಿ ಮತ್ತು ಸಮುದ್ರದ ಅಲೆಗಳಿಂದ ನಿರ್ಮಾಣ. ಜೈವಿಕಾಂಶ ಸಮೃದ್ಧವಾಗಿದೆ.
ಜಿಲ್ಲೆ: ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ.
ಭತ್ತ, ತೆಂಗು, ಅಡಿಕೆ, ಬಾಳೆ.

ಸ್ವಾಭಾವಿಕ ಸಸ್ಯವರ್ಗ ಮತ್ತು ಅರಣ್ಯಗಳು

ಕರ್ನಾಟಕದ ಕಾಡುಗಳಲ್ಲಿ ಶ್ರೀಗಂಧದ ಮರಗಳು ಹೇರಳವಾಗಿರುವುದರಿಂದ ಕರ್ನಾಟಕವನ್ನು "ಶ್ರೀಗಂಧದ ನಾಡು" ಎಂದು ಕರೆಯಲಾಗುತ್ತದೆ.

ಸಸ್ಯವರ್ಗದ ವಿಧಗಳು

ಸಸ್ಯವರ್ಗದ ವಿಧ ಮಳೆ ಮತ್ತು ಲಕ್ಷಣಗಳು ಪ್ರಮುಖ ಮರಗಳು ಮತ್ತು ಜಿಲ್ಲೆಗಳು
1. ನಿತ್ಯ ಹರಿದ್ವರ್ಣ ಕಾಡುಗಳು 250 ಸಂ.ಮೀ ಗಿಂತ ಅಧಿಕ ಮಳೆ. ಅಧಿಕ ಉಷ್ಣಾಂಶವಿರುವಲ್ಲಿ ಬೆಳೆಯುತ್ತವೆ. ಬೀಟೆ, ತೇಗ, ಧೂಪ, ಹೊನ್ನೆ, ಹೆಬ್ಬಲಸು.
ಜಿಲ್ಲೆ: ಉ.ಕನ್ನಡ, ಉಡುಪಿ, ದ.ಕನ್ನಡ, ಶಿವಮೊಗ್ಗ, ಕೊಡಗು.
2. ಎಲೆ ಉದುರಿಸುವ ಕಾಡುಗಳು 60 ರಿಂದ 120 ಸಂ.ಮೀ ಮಳೆ. ತೇವಾಂಶದ ಕೊರತೆಯಿಂದ ಬೇಸಿಗೆಯಲ್ಲಿ ಎಲೆ ಉದುರಿಸುತ್ತವೆ. ಶ್ರೀಗಂಧ (ವಾಣಿಜ್ಯ ಮರ), ತೇಗ, ಬೇವು, ಮಾವು, ಬಿದಿರು.
ಜಿಲ್ಲೆ: ಮೈಸೂರು, ಚಾಮರಾಜನಗರ, ತುಮಕೂರು, ಮಂಡ್ಯ.
3. ಮಿಶ್ರ ಬಗೆಯ ಕಾಡುಗಳು 120 ರಿಂದ 150 ಸಂ.ಮೀ ಮಳೆ. ನಿತ್ಯ ಹರಿದ್ವರ್ಣ ಮತ್ತು ಅಗಲ ಎಲೆಗಳ ಕಾಡುಗಳ ಮಿಶ್ರಣ. ತೇಗ, ಹೊನ್ನೆ, ನಂದಿ, ದಿಂದಗ, ಹಲಸು.
ಜಿಲ್ಲೆ: ದಕ್ಷಿಣ ಕನ್ನಡ, ಉಡುಪಿ, ಹಾಸನ, ಕೊಡಗಿನ ಪೂರ್ವ ಭಾಗ.
4. ಕುರುಚಲು ಮತ್ತು ಹುಲ್ಲುಗಾವಲು 60 ಸಂ.ಮೀ ಗಿಂತ ಕಡಿಮೆ ಮಳೆ. ಒಣಹವೆ ಇರುವ ಪ್ರದೇಶಗಳಲ್ಲಿ ಕಂಡುಬರುತ್ತವೆ. ಕಳ್ಳಿ, ಕತ್ತಾಳೆ, ಕರಿಜಾಲಿ, ಈಚಲು.
ಜಿಲ್ಲೆ: ಬಳ್ಳಾರಿ, ರಾಯಚೂರು, ಕೊಪ್ಪಳ, ವಿಜಯಪುರ, ಚಿತ್ರದುರ್ಗ.
ಅರಣ್ಯಗಳ ಹಂಚಿಕೆ (ವಶೇಷ ಮಾಹಿತಿ):
• ಕರ್ನಾಟಕದ ಒಟ್ಟು ಭೌಗೋಳಿಕ ವಿಸ್ತೀರ್ಣದಲ್ಲಿ ಶೇ. 22.6 ರಷ್ಟು ಅರಣ್ಯವಿದೆ.
• ಅರಣ್ಯ ವಿಸ್ತೀರ್ಣದಲ್ಲಿ ಕರ್ನಾಟಕವು ಭಾರತದಲ್ಲಿ 7ನೇ ಸ್ಥಾನದಲ್ಲಿದೆ.
ಅತಿ ಹೆಚ್ಚು ಅರಣ್ಯವಿರುವ ಜಿಲ್ಲೆ: ಉತ್ತರ ಕನ್ನಡ.
ಅತಿ ಕಡಿಮೆ ಅರಣ್ಯವಿರುವ ಜಿಲ್ಲೆ: ವಿಜಯಪುರ.

ಪ್ರಮುಖ ಮರಗಳು ಮತ್ತು ಅವುಗಳ ಉಪಯೋಗ

ವಿಸ್ಮಯ ಮರಗಳು:
ದೊಡ್ಡ ಆಲದ ಮರ: ರಾಮೋಹಳ್ಳಿ (ಬೆಂಗಳೂರು ಸಮೀಪ).
ದೊಡ್ಡ ಬೇವಿನ ಮರ: ಸಿದ್ದಘಟ್ಟದ ಟಿ. ವೆಂಕಟಾಪುರ.
ದೊಡ್ಡ ಹುಣಿಸೆ ಮರ: ಸವಣೂರು.

ಜಲಸಂಪನ್ಮೂಲ ಮತ್ತು ನದಿಗಳು

ಭಾರತದ ಒಟ್ಟು ಮೇಲ್ಮೈ ಜಲಸಂಪನ್ಮೂಲದಲ್ಲಿ ಕರ್ನಾಟಕದ ಪಾಲು ಶೇ. 6 ರಷ್ಟಿದೆ.

A) ಪೂರ್ವಾಭಿಮುಖವಾಗಿ ಹರಿಯುವ ನದಿಗಳು (ಬಂಗಾಳ ಕೊಲ್ಲಿಗೆ ಸೇರುವವು)

1. ಕೃಷ್ಣಾ ನದಿ: ದಕ್ಷಿಣ ಭಾರತದ 2ನೇ ಮುಖ್ಯನದಿ. ಕರ್ನಾಟಕದಲ್ಲಿ ಹರಿಯುವ ಅತ್ಯಂತ ಉದ್ದವಾದ ನದಿ (483 ಕಿ.ಮೀ).
ಉಗಮ: ಮಹಾಬಲೇಶ್ವರ (ಮಹಾರಾಷ್ಟ್ರ).
ಉಪನದಿಗಳು: ಭೀಮ, ತುಂಗಭದ್ರ, ಘಟಪ್ರಭ, ಮಲಪ್ರಭ.
ಸಂಗಮ: ಕೂಡಲಸಂಗಮದಲ್ಲಿ ಮಲಪ್ರಭ ನದಿಯು ಕೃಷ್ಣೆಯನ್ನು ಸೇರುತ್ತದೆ. ರಾಯಚೂರು ಬಳಿ ಭೀಮಾ ನದಿ ಸೇರುತ್ತದೆ.
2. ಕಾವೇರಿ ನದಿ: ಇದನ್ನು "ದಕ್ಷಿಣದ ಗಂಗೆ" ಎನ್ನುವರು.
ಉಗಮ: ತಲಕಾವೇರಿ (ಬ್ರಹ್ಮಗಿರಿ ಬೆಟ್ಟ, ಕೊಡಗು). ಕರ್ನಾಟಕದಲ್ಲಿ 380 ಕಿ.ಮೀ ಹರಿಯುತ್ತದೆ.
ಉಪನದಿಗಳು: ಹೇಮಾವತಿ, ಹಾರಂಗಿ, ಅರ್ಕಾವತಿ, ಶಿಂಷಾ, ಲಕ್ಷ್ಮಣತೀರ್ಥ, ಕಪಿಲೆ, ಸುವರ್ಣವತಿ.
ಅಂತರ್ನದಿ ದ್ವೀಪಗಳು: ಶ್ರೀರಂಗಪಟ್ಟಣ, ಶಿವನಸಮುದ್ರ ಮತ್ತು ಶ್ರೀರಂಗಂ (ತಮಿಳುನಾಡು).
ಜಲಪಾತಗಳು: ಚುಂಚನಕಟ್ಟೆ, ಶಿವನಸಮುದ್ರ (ಗಗನಚುಕ್ಕಿ ಮತ್ತು ಭರಚುಕ್ಕಿ), ಹೊಗೇನಕಲ್.
3. ಪೆನ್ನಾರ್ ಮತ್ತು ಪಾಲಾರ್:
• ಪೆನ್ನಾರ್ ನದಿಗೆ ಮತ್ತೊಂದು ಹೆಸರು "ಪಿನಾಕಿನಿ". ತಮಿಳುನಾಡಿನಲ್ಲಿ ಇದನ್ನು 'ಪೊನ್ನೈಯಾರ್' ಎನ್ನುವರು.

B) ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳು (ಅರಬ್ಬಿ ಸಮುದ್ರ ಸೇರುವವು)

ಇವು ಪಶ್ಚಿಮ ಘಟ್ಟಗಳಲ್ಲಿ ಹುಟ್ಟಿ ವೇಗವಾಗಿ ಹರಿಯುತ್ತವೆ ಮತ್ತು ಸುಂದರ ಜಲಪಾತಗಳನ್ನು ಸೃಷ್ಟಿಸುತ್ತವೆ.

C) ಪ್ರಮುಖ ಕೆರೆಗಳು ಮತ್ತು ಜಲಾಶಯಗಳು

D) ನೀರಾವರಿ ಮತ್ತು ಜಲವಿದ್ಯುತ್

ವಿಷಯವಿವರ
ನೀರಾವರಿ ಸ್ಥಾನಭಾರತದಲ್ಲಿ ಕರ್ನಾಟಕಕ್ಕೆ 9ನೇ ಸ್ಥಾನ.
ಅತಿ ಹೆಚ್ಚು ನೀರಾವರಿ ಜಿಲ್ಲೆಬೆಳಗಾವಿ (ಕಾಲುವೆ ನೀರಾವರಿಯಲ್ಲಿ ರಾಯಚೂರು ಮೊದಲು).
ಜಲವಿದ್ಯುತ್ ಶಕ್ತಿಭಾರತದಲ್ಲೇ ಕರ್ನಾಟಕ ಮೊದಲ ಸ್ಥಾನದಲ್ಲಿದೆ.
ಶಿವನಸಮುದ್ರ (1902)ಏಷ್ಯಾ ಖಂಡದ ಮೊದಲ ಜಲವಿದ್ಯುತ್ ಯೋಜನೆ.
ಮಹಾತ್ಮ ಗಾಂಧಿ ಯೋಜನೆ1947 ರಲ್ಲಿ ಜೋಗ ಜಲಪಾತದ ಬಳಿ ಸ್ಥಾಪನೆ.
ನದಿ ಜಲ ವಿವಾದಗಳು:
ಕಾವೇರಿ ವಿವಾದ: ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿ ನಡುವೆ ಇದೆ.
ಕೃಷ್ಣಾ ವಿವಾದ: ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ತೆಲಂಗಾಣ ನಡುವೆ ಇದೆ.

ಕರ್ನಾಟಕ ಭೂ ಸಂಪತ್ತು ಮತ್ತು ಕೃಷಿ

ಭೂಮಿಯನ್ನು ವಿವಿಧ ಉದ್ದೇಶಗಳಿಗೆ ಬಳಸುವುದನ್ನು 'ಭೂ ಬಳಕೆ' ಎನ್ನುವರು. ಕರ್ನಾಟಕವು ಒಟ್ಟು 19.05 ಲಕ್ಷ ಹೆಕ್ಟೇರ್ ಭೌಗೋಳಿಕ ಪ್ರದೇಶವನ್ನು ಹೊಂದಿದೆ.

ಕರ್ನಾಟಕ ಭೂಬಳಕೆಯ ಮಾದರಿಗಳು

ವರ್ಗೀಕರಣ ಶೇಕಡಾವಾರು (%) ಪ್ರಮುಖ ಜಿಲ್ಲೆಗಳು (ಹೆಚ್ಚು / ಕಡಿಮೆ)
ನಿವ್ವಳ ಸಾಗುವಳಿ ಭೂಮಿ 58.1% ಹೆಚ್ಚು: ಕಲಬುರಗಿ | ಕಡಿಮೆ: ಬೆಂಗಳೂರು ನಗರ
ಅರಣ್ಯ ಪ್ರದೇಶ 14.5% ಹೆಚ್ಚು: ಉತ್ತರ ಕನ್ನಡ | ಕಡಿಮೆ: ವಿಜಯಪುರ
ಸಾಗುವಳಿಗೆ ಲಭ್ಯವಿಲ್ಲದ ಭೂಮಿ 10.2% ಹೆಚ್ಚು: ಬೆಂಗಳೂರು ನಗರ | ಕಡಿಮೆ: ಬೀದರ್
ಬೀಳು ಭೂಮಿ 9.5% ಹೆಚ್ಚು: ಕಲಬುರಗಿ | ಕಡಿಮೆ: ದಕ್ಷಿಣ ಕನ್ನಡ

ವ್ಯವಸಾಯದ ವಿಧಗಳು

ರಾಜ್ಯದ ಶೇ. 61.4 ರಷ್ಟು ಜನರು ಗ್ರಾಮೀಣ ಪ್ರದೇಶದಲ್ಲಿದ್ದು ಕೃಷಿಯನ್ನೇ ಅವಲಂಬಿಸಿದ್ದಾರೆ.

ಪ್ರಮುಖ ಆಹಾರ ಬೆಳೆಗಳು

1. ಭತ್ತ (Paddy): ಕರ್ನಾಟಕದ ಪ್ರಮುಖ ಆಹಾರ ಬೆಳೆ.
• ವೈಜ್ಞಾನಿಕ ಹೆಸರು: Oryza sativa.
• ಅತಿ ಹೆಚ್ಚು ಬೆಳೆಯುವ ಜಿಲ್ಲೆ: ರಾಯಚೂರು (ಕರ್ನಾಟಕದ ಭತ್ತದ ಕಣಜ).
• ಮಣ್ಣು: ಮೆಕ್ಕಲು ಮತ್ತು ಕೆಂಪು ಮಣ್ಣು.
2. ಜೋಳ (Jowar): 2ನೇ ಪ್ರಮುಖ ಆಹಾರ ಬೆಳೆ.
• ವೈಜ್ಞಾನಿಕ ಹೆಸರು: Sorghum vulgare.
• ಅತಿ ಹೆಚ್ಚು ಬೆಳೆಯುವ ಜಿಲ್ಲೆ: ಕಲಬುರಗಿ. (ಉತ್ತರ ಕರ್ನಾಟಕದ ಪ್ರಧಾನ ಆಹಾರ).
3. ರಾಗಿ (Ragi): ದಕ್ಷಿಣ ಕರ್ನಾಟಕದ ಸಾಂಪ್ರದಾಯಿಕ ಆಹಾರ.
• ಅತಿ ಹೆಚ್ಚು ಬೆಳೆಯುವ ಜಿಲ್ಲೆ: ತುಮಕೂರು.

ಪ್ರಮುಖ ವಾಣಿಜ್ಯ ಮತ್ತು ನಡುತೋಟ ಬೆಳೆಗಳು

ಬೆಳೆವಿಶೇಷ ಮಾಹಿತಿಪ್ರಥಮ ಜಿಲ್ಲೆ
ಕಬ್ಬು ಭಾರತದಲ್ಲಿ ಕರ್ನಾಟಕಕ್ಕೆ 4ನೇ ಸ್ಥಾನ. Saccharum officinarum. ಬೆಳಗಾವಿ
ತಂಬಾಕು 17ನೇ ಶತಮಾನದಲ್ಲಿ ಪೋರ್ಚುಗೀಸರು ಭಾರತಕ್ಕೆ ಪರಿಚಯಿಸಿದರು. ಮೈಸೂರು
ಕಾಫಿ 1670ರಲ್ಲಿ ಬಾಬಾ ಬುಡನ್ ಚಿಕ್ಕಮಗಳೂರಿನಲ್ಲಿ ಸಸಿ ನೆಟ್ಟನು. ಕೊಡಗು
ಹತ್ತಿ ನಾರಿನ ಬೆಳೆ. ಕಪ್ಪು ಮಣ್ಣು ಇದಕ್ಕೆ ಅತ್ಯಂತ ಸೂಕ್ತ. ಧಾರವಾಡ್/ಹಾವೇರಿ

ಖನಿಜ ಸಂಪನ್ಮೂಲಗಳು

ಕರ್ನಾಟಕವು ವಿವಿಧ ಬೆಲೆಬಾಳುವ ಖನಿಜಗಳ ಕಣಜವಾಗಿದೆ. 2012-13ರ ಸಾಲಿನಲ್ಲಿ ರಾಜ್ಯವು ಒಟ್ಟು 6458 ಕೋಟಿ ರೂ. ಮೌಲ್ಯದ ಖನಿಜಗಳನ್ನು ಉತ್ಪಾದಿಸಿದೆ.

1. ಕಬ್ಬಿಣದ ಅದಿರು: ರಾಜ್ಯದಲ್ಲಿ ಮ್ಯಾಗ್ನಟೈಟ್ (63%) ಮತ್ತು ಹೆಮಟೈಟ್ (37%) ನಿಕ್ಷೇಪಗಳಿವೆ. ಒಟ್ಟು 75 ಗಣಿಗಳಿವೆ.
• 1ನೇ ಸ್ಥಾನ: ಬಳ್ಳಾರಿ (ದೋಣಿಮಲೈ, ವಿಭೂತಿ ಗುಡ್ಡ, ಬಳ್ಳಾರಿ, ಕುಮಾರಸ್ವಾಮಿ ಬೆಟ್ಟ).
• 2ನೇ ಸ್ಥಾನ: ಚಿಕ್ಕಮಗಳೂರು (ಬಾಬಾ ಬುಡನ್ ಗಿರಿ, ಕೆಮ್ಮಣ್ಣುಗುಂಡಿ, ಕುದುರೆಮುಖ).
2. ಚಿನ್ನ (Gold): ಭಾರತದ ಚಿನ್ನದ ಉತ್ಪಾದನೆಯಲ್ಲಿ ಕರ್ನಾಟಕಕ್ಕೆ ಪ್ರಥಮ ಸ್ಥಾನ.
ಹಟ್ಟಿ (ರಾಯಚೂರು): ಭಾರತದ ಅತಿ ದೊಡ್ಡ ಚಿನ್ನದ ಅದಿರು ಉತ್ಪಾದನಾ ಕೇಂದ್ರ.
KGF (ಕೋಲಾರ): ಚಾಂಪಿಯನ್‌ರೀಫ್ ಗಣಿಯು ಅತ್ಯಂತ ಆಳವಾಗಿದೆ ($3217$ ಮೀ).
3. ಮ್ಯಾಂಗನೀಸ್: ಇದನ್ನು 'ಬಹು ಉಪಯೋಗಿ ಖನಿಜ' ಎನ್ನುವರು. ಬಳ್ಳಾರಿ ಜಿಲ್ಲೆಯ ಸಂಡೂರು ಅತಿ ಹೆಚ್ಚು ಉತ್ಪಾದಿಸುತ್ತದೆ.

ಕರ್ನಾಟಕದಲ್ಲಿ ಖನಿಜ ಉತ್ಪಾದನೆ (2012-13)

ಖನಿಜಉತ್ಪಾದನೆಖನಿಜಉತ್ಪಾದನೆ
ಸುಣ್ಣದ ಕಲ್ಲು13.6 ದಶಲಕ್ಷ ಟನ್ಕಬ್ಬಿಣದ ಅದಿರು11.2 ದಶಲಕ್ಷ ಟನ್
ಡೋಲೋಮೈಟ್6.25 ಲಕ್ಷ ಟನ್ಮ್ಯಾಂಗನೀಸ್31.5 ಸಾವಿರ ಟನ್
ಬಾಕ್ಸೈಟ್81.2 ಸಾವಿರ ಟನ್ಬಂಗಾರ1583 ಕಿ.ಗ್ರಾಂ
ಕ್ರೋಮೈಟ್6.8 ಸಾವಿರ ಟನ್ಬೆಳ್ಳಿ145 ಕೆ.ಜಿ.
ಮ್ಯಾಗ್ನಸೈಟ್11949 ಟನ್ಕಿಯೋಲಿನ್2836 ಟನ್

ವಿವಿಧ ಜಿಲ್ಲೆಯಲ್ಲಿ ದೊರೆಯುವ ಖನಿಜ ಸಂಪನ್ಮೂಲಗಳು

ಅ.ಸಂ. ಜಿಲ್ಲೆ ದೊರೆಯುವ ಖನಿಜಗಳು
1ಬೆಂಗಳೂರು ನಗರಫೆಲ್ಸ್‌ಪಾರ್, ಬೆಣಚು ಶಿಲೆ, ಶೃಂಗಾರ ಶಿಲೆ
2ಬೆಂಗಳೂರು ಗ್ರಾಮಾಂತರಫೆಲ್ಸ್‌ಪಾರ್, ಬೆಣಚು ಶಿಲೆ, ಶೃಂಗಾರ ಶಿಲೆ
3ಬೆಳಗಾಂವಿಕಬ್ಬಿಣದ ಅದಿರು, ಮ್ಯಾಂಗನೀಸ್, ಸುಣ್ಣದ ಕಲ್ಲು, ಬಾಕ್ಸೈಟ್ ಅದಿರು
4ಬಳ್ಳಾರಿಕಬ್ಬಿಣದ ಅದಿರು, ಮ್ಯಾಂಗನೀಸ್, ಸುಣ್ಣದ ಕಲ್ಲು
5ಬೀದರ್ಬಿಳಿ ಜೇಡಿ ಮಣ್ಣು
6ವಿಜಯಪುರಸುಣ್ಣದ ಕಲ್ಲು, ಶೃಂಗಾರ ಶಿಲೆ, ಡೋಲೋಮೈಟ್
7ಚಿಕ್ಕಮಗಳೂರುಕಬ್ಬಿಣದ ಅದಿರು, ಬಾಕ್ಸೈಟ್, ಚೀನಾ ಕ್ಲೇ, ಕ್ರೋಮೈಟ್, ತಾಮ್ರ
8ಚಿತ್ರದುರ್ಗತಾಮ್ರ, ಬೆಳ್ಳಿ, ಕಬ್ಬಿಣದ ಅದಿರು, ಮ್ಯಾಂಗನೀಸ್, ಸುಣ್ಣದ ಕಲ್ಲು
9ದಕ್ಷಿಣ ಕನ್ನಡಕಬ್ಬಿಣದ ಅದಿರು, ಬೆಣಚು ಕಲ್ಲು, ಬಾಕ್ಸೈಟ್
10ಧಾರವಾಡಕಬಿಣದ ಅದಿರು
11ಕಲಬುರಗಿಸುಣ್ಣದ ಕಲ್ಲು, ಜಿಯೋ ಲೈಟ್
12ಯಾದಗಿರಿಸುಣ್ಣದ ಕಲ್ಲು, ತಾಮ್ರ
13ಹಾಸನಕ್ರೋಮೈಟ್, ಕಾರ್ಬೋರೆಂಡಮ್, ಕೈಸೈಟ್, ಗ್ರಾನೈಟ್, ಅಸ್‌ಬೆಸ್ಟಾಸ್
14ಕೊಡಗುಮ್ಯಾಂಗನೀಸ್, ಕೈನೈಟ್, ಕಾರ್ಬೋರೆಂಡಮ್
15ಕೋಲಾರಚಿನ್ನ, ಬೆಳ್ಳಿ, ಜೇಡಿಮಣ್ಣು, ಟಂಗ್‌ಸ್ಟನ್
16ಮಂಡ್ಯರೂಬಿ, ಕಾರ್ಬೋರೆಂಡಮ್, ಮ್ಯಾಗ್ನಸೈಟ್, ಅಸ್‌ಬೆಸ್ಟಾಸ್
17ಮೈಸೂರುಮ್ಯಾಗ್ನಟೈಟ್, ಬಿಳಿ ಜೇಡಿ ಮಣ್ಣು, ಶೃಂಗಾರ ಶಿಲೆ, ಕ್ರೋಮಿಯಂ
18ರಾಯಚೂರುಶೃಂಗಾರ ಶಿಲೆ, ಚಿನ್ನ, ಬೆಳ್ಳಿ, ತಾಮ್ರ
19ಶಿವಮೊಗ್ಗಕಬ್ಬಿಣದ ಅದಿರು, ಮ್ಯಾಂಗನೀಸ್ ಅದಿರು, ಸುಣ್ಣದ ಕಲ್ಲು, ಓಕರ್
20ತುಮಕೂರುಮ್ಯಾಂಗನೀಸ್, ಕಬ್ಬಿಣದ ಅದಿರು, ಸುಣ್ಣದ ಕಲ್ಲು, ರೂಬಿ
21ಉತ್ತರ ಕನ್ನಡಮ್ಯಾಂಗನೀಸ್, ಕಬ್ಬಿಣದ ಅದಿರು, ಯುರೇನಿಯಂ, ಟೈಟಾನಿಯಂ
22ಬಾಗಲಕೋಟೆಗ್ರಾನೈಟ್, ಸುಣ್ಣದ ಕಲ್ಲು
23ಉಡುಪಿಬಾಕ್ಸೈಟ್, ಲೈಮ್‌ಸ್ಟೋನ್, ಸಿಲಿಕಾ, ಮರಳು
24ಕೊಪ್ಪಳಗ್ರಾನೈಟ್, ಕಬ್ಬಿಣದ ಅದಿರು
25ರಾಮನಗರಗ್ರಾನೈಟ್
26ಚಿಕ್ಕಬಳ್ಳಾಪುರಬಾಕ್ಸೈಟ್
27ಗದಗಚೀನಾ ಕ್ಲೇ, ಕಬ್ಬಿಣದ ಅದಿರು, ಸುಣ್ಣದ ಕಲ್ಲು, ಮ್ಯಾಂಗನೀಸ್
28ಹಾವೇರಿಚೀನಾ ಕ್ಲೇ, ಕಬ್ಬಿಣದ ಅದಿರು, ಸಿಲಿಕಾ, ಮರಳು
29ದಾವಣಗೆರೆಕಬಿಣದ ಅದಿರು, ಸುಣ್ಣದ ಕಲ್ಲು, ಮ್ಯಾಂಗನೀಸ್
30ಕೊನೆಯ ಜಿಲ್ಲೆಗಳುವಿವಿಧ ಶೃಂಗಾರ ಶಿಲೆಗಳು ಮತ್ತು ಕಟ್ಟಡ ಕಲ್ಲುಗಳು

ಕರ್ನಾಟಕದ ಕೈಗಾರಿಕೆಗಳು

ಕರ್ನಾಟಕದ ಕೈಗಾರಿಕಾ ಬೆಳವಣಿಗೆಗೆ ಸರ್ ಎಂ. ವಿಶ್ವೇಶ್ವರಯ್ಯನವರ ಕೊಡುಗೆ ಅಪಾರ. ಅವರು "ಕೈಗಾರಿಕೀಕರಣ ಇಲ್ಲವೇ ವಿನಾಶ" (Industrialize or Perish) ಎಂಬ ತತ್ವವನ್ನು ಹೊಂದಿದ್ದರು.

ಐತಿಹಾಸಿಕ ಮೈಲಿಗಲ್ಲು: 1902 ರಲ್ಲಿ ಶಿವನಸಮುದ್ರದಲ್ಲಿ ಸ್ಥಾಪನೆಯಾದ ಜಲವಿದ್ಯುತ್ ಕೇಂದ್ರವು ಏಷ್ಯಾ ಖಂಡದ ಮೊದಲ ಜಲವಿದ್ಯುತ್ ಯೋಜನೆಯಾಗಿದೆ.

ಕೈಗಾರಿಕಾ ಸ್ಥಾಪನೆಗೆ ಅಗತ್ಯವಿರುವ ಅಂಶಗಳು:

1. ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ

ದಕ್ಷಿಣ ಭಾರತದಲ್ಲೇ ಮೊಟ್ಟ ಮೊದಲ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ ಕರ್ನಾಟಕದಲ್ಲಿ ಸ್ಥಾಪನೆಯಾಯಿತು.

2. ಹತ್ತಿ ಮತ್ತು ರೇಷ್ಮೆ ಬಟ್ಟೆ ಕೈಗಾರಿಕೆ

ಕೈಗಾರಿಕೆ ವಿವರಣೆ
ಹತ್ತಿ ಬಟ್ಟೆ ಮೊದಲ ಗಿರಣಿ: MSK ಗಿರಣಿ (1884, ಗುಲಬರ್ಗಾ). 1900ರಲ್ಲಿ ಹುಬ್ಬಳ್ಳಿಯಲ್ಲಿ ಸ್ಥಾಪನೆ. ದಾವಣಗೆರೆಯನ್ನು "ಕರ್ನಾಟಕದ ಮ್ಯಾಂಚೆಸ್ಟರ್" ಎನ್ನಲಾಗುತ್ತದೆ.
ರೇಷ್ಮೆ ಬಟ್ಟೆ ಅತ್ಯಂತ ಹಳೆಯ ಕೈಗಾರಿಕೆ. 1884ರಲ್ಲಿ ಬೆಂಗಳೂರಿನಲ್ಲಿ ಮೊದಲ ಕಾರ್ಖಾನೆ. ನೂಲು ಬಿಚ್ಚುವ ಕೇಂದ್ರಗಳು: ಕೊಳ್ಳೇಗಾಲ, ಟಿ.ನರಸೀಪುರ, ಚಾಮರಾಜನಗರ.

3. ಸಕ್ಕರೆ ಮತ್ತು ಕಾಗದ ಕೈಗಾರಿಕೆ

4. ಸಿಮೆಂಟ್ ಮತ್ತು ಅಲ್ಯೂಮಿನಿಯಂ ಕೈಗಾರಿಕೆ

5. ಸಾಫ್ಟ್‌ವೇರ್ (ಮಾಹಿತಿ ತಂತ್ರಜ್ಞಾನ) ಕೈಗಾರಿಕೆ

ಕರ್ನಾಟಕವು ಸಾಫ್ಟ್‌ವೇರ್ ರಫ್ತಿನಲ್ಲಿ ಭಾರತದಲ್ಲೇ ಪ್ರಥಮ ಸ್ಥಾನದಲ್ಲಿದೆ.

ಸಿಲಿಕಾನ್ ವ್ಯಾಲಿ: ಬೆಂಗಳೂರನ್ನು "ಭಾರತದ ಸಿಲಿಕಾನ್ ಕಣಿವೆ" ಎಂದು ಕರೆಯಲಾಗುತ್ತದೆ. ಪ್ರಮುಖ ಸಂಸ್ಥೆಗಳು: ಇನ್ಫೋಸಿಸ್, ವಿಪ್ರೋ, ಟಿಸಿಎಸ್.

ಸಾರಿಗೆ ಮತ್ತು ಸಂಪರ್ಕ ವ್ಯವಸ್ಥೆ

ಸಾರಿಗೆಯು ಕೃಷಿ, ಕೈಗಾರಿಕೆ ಮತ್ತು ವ್ಯಾಪಾರದ ಪ್ರಗತಿಯ ಜೀವನಾಡಿಯಾಗಿದೆ. ಕರ್ನಾಟಕದಲ್ಲಿ ರಸ್ತೆ, ರೈಲು, ವಾಯು ಮತ್ತು ಜಲಸಾರಿಗೆ ಎಂಬ ನಾಲ್ಕು ವಿಧದ ಸಾರಿಗೆ ವ್ಯವಸ್ಥೆಗಳಿವೆ.

1. ರಸ್ತೆ ಸಾರಿಗೆ

ರಾಜ್ಯದ ಮೂಲೆ ಮೂಲೆಗೂ ಸಂಪರ್ಕ ಕಲ್ಪಿಸುವ ಪ್ರಮುಖ ಮಾಧ್ಯಮ. 2012-13ರ ಅಂಕಿ-ಅಂಶಗಳ ಪ್ರಕಾರ ರಾಜ್ಯದಲ್ಲಿ ಒಟ್ಟು 2,28,810 ಕಿ.ಮೀ. ಉದ್ದದ ರಸ್ತೆಗಳಿವೆ.

ಗಮನಿಸಿ: ರಾಯಚೂರು, ಕೊಡಗು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗುವುದಿಲ್ಲ (2012-13ರ ವರದಿ ಪ್ರಕಾರ). ಬೆಳಗಾವಿ ಜಿಲ್ಲೆಯು ಒಟ್ಟು ರಸ್ತೆಗಳಲ್ಲಿ ಪ್ರಥಮ ಸ್ಥಾನದಲ್ಲಿದೆ.

2. ರೈಲು ಸಾರಿಗೆ

ನೆನಪಿಡಿ: ಕೊಡಗು ಜಿಲ್ಲೆಯಲ್ಲಿ ಯಾವುದೇ ರೈಲು ಮಾರ್ಗವಿಲ್ಲ. ಅತಿ ಹೆಚ್ಚು ರೈಲು ಮಾರ್ಗವಿರುವ ಜಿಲ್ಲೆ ದಕ್ಷಿಣ ಕನ್ನಡ.

3. ವಾಯು ಸಾರಿಗೆ

ಕರ್ನಾಟಕದಲ್ಲಿ ಮೊದಲ ವಿಮಾನಯಾನ 1946ರಲ್ಲಿ ಬೆಂಗಳೂರು ಮತ್ತು ಹೈದ್ರಾಬಾದ್ ನಡುವೆ ಆರಂಭವಾಯಿತು.

4. ಜಲಸಾರಿಗೆ ಮತ್ತು ಬಂದರುಗಳು

ಕರ್ನಾಟಕದಲ್ಲಿ ಒಟ್ಟು 25 ಬಂದರುಗಳಿವೆ. ಇವುಗಳಲ್ಲಿ ನವ ಮಂಗಳೂರು ಬಂದರು ಅತಿ ದೊಡ್ಡದು.

5. ಸಂಪರ್ಕ ಮಾಧ್ಯಮಗಳು

ಮಾಧ್ಯಮವಿಶೇಷ ಮಾಹಿತಿ
ಅಂಚೆ ಸೇವೆ1860 ರಲ್ಲಿ ಜಾರಿಗೆ ಬಂತು.
ದೂರವಾಣಿ1881-82 ರಲ್ಲಿ ಪರಿಚಯವಾಯಿತು.
ಆಕಾಶವಾಣಿ1935 ರಲ್ಲಿ ಎಂ.ವಿ. ಗೋಪಾಲಸ್ವಾಮಿಯವರಿಂದ ಮೈಸೂರಿನಲ್ಲಿ ಮೊದಲ ಖಾಸಗಿ ಕೇಂದ್ರವಾಗಿ ಆರಂಭವಾಯಿತು.
ದೂರದರ್ಶನ1977 ರಲ್ಲಿ ಗುಲ್ಬರ್ಗದಲ್ಲಿ ಮೊದಲ ಕೇಂದ್ರ ಆರಂಭವಾಯಿತು.
KPSC Footer