ಆನ್‌ಲೈನ್ ತರಗತಿಗಳು
| ನೇರ ತರಗತಿಗಳು | ಟೆಸ್ಟ್ ಸರಣಿ | ಅಂಚೆ ಪ್ಯಾಕೇಜ್ | 📞 9141066148
ಕರ್ನಾಟಕ ಇತಿಹಾಸ - ಸಂಪೂರ್ಣ ಮಾಹಿತಿ | KPSC Mitra GK

ಕರ್ನಾಟಕ ಇತಿಹಾಸ: ಮಹಾ ಗೈಡ್

KPSC, KSP, PDO ಮತ್ತು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಅತ್ಯಗತ್ಯ ಮಾಹಿತಿ

ಕರ್ನಾಟಕ ಪದದ ಉಗಮ

ಮಹಾಭಾರತ ಕರ್ನಾಟಕ ಎಂಬ ಪದ ಮೊದಲ ಬಾರಿಗೆ ಸಭಾಪರ್ವ ಮತ್ತು ಭೀಷ್ಮ ಪರ್ವಗಳಲ್ಲಿ ಕಂಡುಬಂದಿದೆ.
ಶಿಲಪ್ಪದಿಗಾರಂ ತಮಿಳು ಕಾವ್ಯ (ಇಳಂಗೋವಡಿಗಳ). ಇದರಲ್ಲಿ ಕರುನಾಡರ್ ಪದದ ಉಲ್ಲೇಖವಿದೆ. ಇದರರ್ಥ: ಬೆಟ್ಟಗುಡ್ಡಗಳಿಂದ ಕೂಡಿದ ನಾಡು.

ಪ್ರಾಚೀನ ಮನೆತನಗಳು

ಮೌರ್ಯರು ಕ್ರಿ.ಪೂ. 323 - ಕ್ರಿ.ಪೂ. 187

ಕರ್ನಾಟಕದ ಭೂಪ್ರದೇಶವನ್ನಾಳಿದ ಮೊದಲ ಸಾಮ್ರಾಜ್ಯ.

ಪರೀಕ್ಷಾ ವಿಶೇಷ: ಮೌರ್ಯರ ದಕ್ಷಿಣದ ರಾಜಧಾನಿ ಸುವರ್ಣಗಿರಿ.

ಶಾತವಾಹನರು ಕ್ರಿ.ಪೂ. 230 - ಕ್ರಿ.ಶ. 220

ವಿಷಯವಿವರ
ಮೂಲ ಪುರುಷಸಿಮುಖ (ಬಳ್ಳಾರಿ ಪ್ರದೇಶದವನೆಂದು ಅಭಿಪ್ರಾಯ)
ರಾಜಧಾನಿಪ್ರತಿಷ್ಠಾನ (ಗೋದಾವರಿ ನದಿ ದಂಡೆ, ಮಹಾರಾಷ್ಟ್ರ)
ಪ್ರಸಿದ್ಧ ಅರಸಗೌತಮಿ ಪುತ್ರ ಶಾತಕರ್ಣಿ. ಬಿರುದು: ತ್ರೈಸಮುದ್ರ ತೋಯಪಿತವಾಹನ.
ಲಾಂಛನ / ದೇವರುವರುಣ / ಶಿವ ಮತ್ತು ವಿಷ್ಣು
ಕೃತಿಗಳುಹಾಲನ ಗಾಥಾ ಸಪ್ತಶತಿ, ಗುಣಾಢ್ಯನ ಬೃಹತ್ ಕಥಾ, ಸರ್ವವರ್ಮನ ಕಾತಂತ್ರ ವ್ಯಾಕರಣ.
ಚಿತ್ರಕಲೆಅಜಂತಾ, ನಾಸಿಕ್, ಕಾರ್ಲೆ, ಅಮರಾವತಿ.

ಕದಂಬರು ಕ್ರಿ.ಶ. 345 - 540

ಕನ್ನಡದ ಮೊದಲ ಮನೆತನ. ಸ್ಥಾಪಕ: ಮಯೂರವರ್ಮ.

ಗಂಗರು ಮತ್ತು ಬಾದಾಮಿ ಚಾಲುಕ್ಯರು

ಪಶ್ಚಿಮ ಗಂಗರು ಕ್ರಿ.ಶ 350 - 1004

ಸ್ಥಾಪಕರುದಡಿಗ ಮತ್ತು ಮಾಧವ
ರಾಜಧಾನಿಗಳುಕುವಲಾಳ, ತಲಕಾಡು, ಮಾಕುಂದ, ಮಣ್ಣೆ. ಲಾಂಛನ: ಮದಗಜ.
ಶ್ರವಣಬೆಳಗೊಳದೊಡ್ಡ ಏಕಶಿಲಾ ಮೂರ್ತಿ. ಕೆತ್ತಿದವನು: ಅರಿಷ್ಟನೇಮಿ. ಸಚಿವ: ಚಾವುಂಡರಾಯ.
ಗ್ರಂಥಗಳುನಾಗವರ್ಮನ ಛಂದೋಂಬುಧಿ, ಚಾವುಂಡರಾಯ ಪುರಾಣ.

ಬಾದಾಮಿ ಚಾಲುಕ್ಯರು ಕ್ರಿ.ಶ 540 - 753

ಸ್ಥಾಪಕ: ಜಯಸಿಂಹ | ರಾಜಧಾನಿ: ಬಾದಾಮಿ | ಲಾಂಛನ: ವರಾಹ.

ರಾಷ್ಟ್ರಕೂಟರು ಮತ್ತು ಕಲ್ಯಾಣ ಚಾಲುಕ್ಯರು

ರಾಷ್ಟ್ರಕೂಟರು ಕ್ರಿ.ಶ 753 - 973

ಸ್ಥಾಪಕ: ದಂತಿದುರ್ಗ | ರಾಜಧಾನಿ: ಮಾನ್ಯಖೇಟ.

ನೃಪತುಂಗ: ಈತನ ಮೂಲ ಹೆಸರು ಶರ್ವ. ಅರಬ್ ಯಾತ್ರಿಕ ಸುಲೇಮಾನ್ ಭೇಟಿ ನೀಡಿದ್ದನು.

ಕಲ್ಯಾಣ ಚಾಲುಕ್ಯರು ಕ್ರಿ.ಶ. 973 - 1189

ಹೊಯ್ಸಳರು ಕ್ರಿ.ಶ. 985 - 1346

ಸ್ಥಾಪಕ: ಸಳ | ರಾಜಧಾನಿ: ಸೊಸೆಯೂರು, ಬೇಲೂರು, ಹಳೇಬೀಡು.

ವಿಜಯನಗರ ಮತ್ತು ಬಹುಮನಿ ಸಾಮ್ರಾಜ್ಯಗಳು

ವಿಜಯನಗರ ಸಾಮ್ರಾಜ್ಯ 1336 - 1646

ಸ್ಥಾಪಕರು / ಗುರುಗಳುಹಕ್ಕ-ಬುಕ್ಕರು / ವಿದ್ಯಾರಣ್ಯರು
ರಾಜಧಾನಿ / ಲಾಂಛನಹಂಪಿ / ವರಾಹ
ಎರಡನೇ ದೇವರಾಯಬಿರುದು: ಗಜಬೆಂಟೆಕಾರ. ಸಂಗಮ ಮನೆತನದ ಶ್ರೇಷ್ಠ ದೊರೆ.
ಶ್ರೀಕೃಷ್ಣದೇವರಾಯತುಳುವ ಸಂತತಿ. ಆಸ್ಥಾನದಲ್ಲಿ ಅಷ್ಟದಿಗ್ಗಜರಿದ್ದರು.
ತಾಳಿಕೋಟಿ ಕದನ1565 ಜನವರಿ 23 (ರಕ್ಕಸ ತಂಗಡಿ ಯುದ್ಧ).

ಬಹಮನಿ ಮತ್ತು ಆದಿಲ್ ಶಾಹಿಗಳು

ಬಹಮನಿ: ಸ್ಥಾಪಕ ಅಲ್ಲಾವುದ್ದೀನ್ ಹಸನ್ ಗಂಗು. ಬೀದರ್‌ನಲ್ಲಿ ಮಹಮದ್ ಗವಾನನ ಮದರಸಾ ಪ್ರಸಿದ್ಧ.

ಆದಿಲ್ ಶಾಹಿ: ಸ್ಥಾಪಕ ಯೂಸುಫ್ ಆದಿಲ್ ಷಾ. ಎರಡನೇ ಇಬ್ರಾಹಿಂಗೆ ಜಗದ್ಗುರು ಬಾದ್‌ಷಹಾ ಎಂಬ ಬಿರುದಿತ್ತು. ಮುಲುಕ್ ಮೈದಾನ ತೋಪು ಎಂದರೆ 'ಯುದ್ಧ ಭೂಮಿಯ ಒಡೆಯ'.

ಮೈಸೂರು ಸಂಸ್ಥಾನದ ಇತಿಹಾಸ

ಸ್ಥಾಪಕರು: ಯದುರಾಯ ಮತ್ತು ಕೃಷ್ಣರಾಯ | ಲಾಂಛನ: ಗಂಡಭೇರುಂಡ.

ಅರಸರುಪ್ರಮುಖ ಸಾಧನೆಗಳು
ರಾಜ ಒಡೆಯರು (1578-1617) 1610ರಲ್ಲಿ ಮೈಸೂರು ದಸರಾ ಉತ್ಸವ ಆರಂಭಿಸಿದರು.
ರಣಧೀರ ಕಂಠೀರವ ನರಸರಾಜ ಕಂಠೀರವ ಪಣ ನಾಣ್ಯ ಚಲಾವಣೆ. ಬಂಗಾರದೊಡ್ಡಿ ಕಾಲುವೆ ನಿರ್ಮಾಣ.
ಚಿಕ್ಕ ದೇವರಾಜ ಒಡೆಯರು ಬೆಂಗಳೂರನ್ನು ಮೊಘಲರಿಂದ 3 ಲಕ್ಷಕ್ಕೆ ಖರೀದಿ. ಅಠಾರಹ ಕಚೇರಿ ಸ್ಥಾಪನೆ. ನವಕೋಟಿ ನಾರಾಯಣ ಬಿರುದು.
ನಾಲ್ವಡಿ ಕೃಷ್ಣರಾಜ ಒಡೆಯರ್ ಮೈಸೂರಿನ ಸುವರ್ಣ ಯುಗ. ರಾಜರ್ಷಿ ಬಿರುದು (ಗಾಂಧೀಜಿಯಿಂದ). ಮೈಸೂರು ವಿವಿ ಸ್ಥಾಪನೆ (1916).

ದಿವಾನರ ಆಡಳಿತ

ಕರ್ನಾಟಕದಲ್ಲಿ ಸ್ವಾತಂತ್ರ್ಯ ಚಳವಳಿ

ಪ್ರಥಮ ಹಂತ: ಶಸ್ತ್ರಸಹಿತ ಸಶಸ್ತ್ರ ಹೋರಾಟ (1800 - 1858)

ಇದು ವೈಯಕ್ತಿಕ ನಾಯಕತ್ವದ ಅಡಿಯಲ್ಲಿ ನಡೆದ ಶಸ್ತ್ರಸಹಿತ ಹೋರಾಟದ ಕಾಲವಾಗಿದೆ.

ವರ್ಷ ಹೋರಾಟ / ಬಂಡಾಯ ನಾಯಕರು ಮತ್ತು ಪ್ರಮುಖ ವಿವರಗಳು
1761-1799 ಮೈಸೂರು ಸುಲ್ತಾನರು ಬ್ರಿಟಿಷರ ವಿರುದ್ಧ ಮೊದಲ ಸಶಸ್ತ್ರ ಹೋರಾಟಗಾರರಾದ ಹೈದರಾಲಿ ಮತ್ತು ಟಿಪ್ಪು ಸುಲ್ತಾನ.
1800 ದೊಂಡಿಯಾ ವಾಘ್ ಟಿಪ್ಪುವಿನ ನಂತರ ಹೋರಾಟ ಆರಂಭ. ಆರ್ಥರ್ ವೆಲ್ಲೆಸ್ಲಿ ಇವನನ್ನು ಹತ್ಯೆ ಮಾಡಿದನು.
1819 ಕೊಪ್ಪಳ ದಂಗೆ ವೀರಪ್ಪ ನಾಯಕನ ನೇತೃತ್ವದಲ್ಲಿ (ಇಂಗ್ಲಿಷರ ಅಧಿಕಾರಿಯಾಗಿದ್ದನು).
1820 ಬೀದರ್ ದಂಗೆ ತೆರಿಗೆ ಹೆಚ್ಚಳದ ವಿರುದ್ಧ ಶಿವಲಿಂಗಯ್ಯ ದೇಶಮುಖರ ನೇತೃತ್ವದಲ್ಲಿ.
1824 ಸಿಂದಗಿ ಬಂಡಾಯ ಬ್ರಿಟಿಷರ ತೆರಿಗೆ ಹೆಚ್ಚಳದ ವಿರುದ್ಧ ದಿವಾಕರ ದೀಕ್ಷಿತ ಮತ್ತು ರಾವಜೀ ರಾಸ್ತೆ ನಾಯಕತ್ವ.
1824-1831 ಕಿತ್ತೂರು ಬಂಡಾಯ • ದತ್ತು ಪುತ್ರ ಶಿವಲಿಂಗ ಸರ್ಜನಿಗೆ ಹಕ್ಕು ನಿರಾಕರಣೆ.
ಅಮಾತೂರಿನ ಗುಂಡಿಗೆ ಥ್ಯಾಕರೆ ಬಲಿ.
• ರಾಣಿ ಚೆನ್ನಮ್ಮನನ್ನು ಬೈಲಹೊಂಗಲ ಜೈಲಿನಲ್ಲಿ ಬಂಧಿಸಲಾಯಿತು.
• 1829ರಲ್ಲಿ ಸಂಗೊಳ್ಳಿ ರಾಯಣ್ಣನ ಗೆರಿಲ್ಲಾ ಯುದ್ಧ ತಂತ್ರ.
• 1831: ರಾಯಣ್ಣನನ್ನು ನಂದಗಡದ ಹುಣಸೆ ಮರಕ್ಕೆ ನೇಣು ಹಾಕಲಾಯಿತು.
1830-31 ನಗರ ಬಂಡಾಯ (ಬಿದನೂರು) ಬೂದಿ ಬಸಪ್ಪನ ನೇತೃತ್ವದಲ್ಲಿ ಕಂದಾಯದ ವಿರುದ್ಧ ನಡೆದ ದಂಗೆ. ಮೈಸೂರನ್ನು ಬ್ರಿಟಿಷರ ಆಡಳಿತಕ್ಕೆ ಒಳಪಡಿಸಲು ಇದು ಕಾರಣವಾಯಿತು.
1834 ಕೊಡಗು ಬಂಡಾಯ ಚಿಕ್ಕವೀರ ರಾಜೇಂದ್ರನ ಉಚ್ಚಾಟನೆ ವಿರುದ್ಧ ಕಲ್ಯಾಣಸ್ವಾಮಿ, ಪುಟ್ಟಬಸಪ್ಪ ನಾಯಕತ್ವ.
1841 ಬಾದಾಮಿ ದಂಗೆ ನರಸಿಂಗರಾವ್ ದತ್ತಾತ್ರೇಯ ಪೇಡಕರ್ ಬ್ರಿಟಿಷರ ದುಷ್ಟ ಆಡಳಿತದ ವಿರುದ್ಧ ಹೋರಾಡಿದನು.
1857-58 ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಹಲಗಲಿ ಬೇಡರ ದಂಗೆ: ಶಸ್ತ್ರಾಸ್ತ್ರ ಕಾಯ್ದೆಯ ವಿರುದ್ಧ ಕರ್ನಾಟಕದ ಮೊದಲ ದಂಗೆ.
ಸುರಪುರ ದಂಗೆ: ವೆಂಕಟಪ್ಪ ನಾಯಕ (ನಾನಾ ಸಾಹೇಬನ ಸಂಪರ್ಕ ಹೊಂದಿದ್ದನು). ಇವನು ಆತ್ಮಹತ್ಯೆ ಮಾಡಿಕೊಂಡನೆಂದು ಹೇಳಲಾಗುತ್ತದೆ.
ನರಗುಂದ ಬಾಬಾಸಾಹೇಬ: ದತ್ತು ಮಕ್ಕಳಿಗೆ ಹಕ್ಕಿಲ್ಲವೆಂಬ ನೀತಿಯ ವಿರುದ್ಧ ಹೋರಾಟ. ಇವನನ್ನು ಗಲ್ಲಿಗೇರಿಸಲಾಯಿತು.

ದ್ವಿತೀಯ ಹಂತ: ಜನಜಾಗೃತಿ ಮತ್ತು ಸಂಘಟನೆ (1885-1920)

ಶಿಕ್ಷಣ ಮತ್ತು ಪತ್ರಿಕೆಗಳ ಪ್ರಭಾವದಿಂದಾಗಿ ಕರ್ನಾಟಕದಲ್ಲಿ ರಾಷ್ಟ್ರೀಯ ಮನೋಭಾವನೆ ಬೆಳೆಯಿತು.

ಪ್ರಮುಖ ಸಮ್ಮೇಳನಗಳು:
• 1885 ಮುಂಬೈ ಕಾಂಗ್ರೆಸ್ ಅಧಿವೇಶನದಲ್ಲಿ ಬಳ್ಳಾರಿಯ ವೆಂಕಟಚಲಂ ಭಾಗವಹಿಸಿದ್ದರು.
• 1903 ಧಾರವಾಡ ಸಮ್ಮೇಳನದಲ್ಲಿ ಬಾಲಗಂಗಾಧರ ತಿಲಕ ಮತ್ತು ಫಿರೋಜ್ ಷಾ ಮೆಹತಾ ಪಾಲ್ಗೊಂಡಿದ್ದರು.

ಜನಜಾಗೃತಿ ಮೂಡಿಸಿದ ಪ್ರಮುಖ ಪತ್ರಿಕೆಗಳು:

• 1916: ತಿಲಕರಿಂದ ಧಾರವಾಡದಲ್ಲಿ ಹೋಂ ರೂಲ್ ಚಳವಳಿ ಪ್ರಾರಂಭ.
• 1920: ನಾಗಪುರದಲ್ಲಿ ಕರ್ನಾಟಕ ಪ್ರಾಂತ ಕಾಂಗ್ರೆಸ್ ಸ್ಥಾಪನೆ. ಮೊದಲ ಅಧ್ಯಕ್ಷ: ಗಂಗಾಧರ ರಾವ್ ದೇಶಪಾಂಡೆ.

ತೃತೀಯ ಹಂತ: ಗಾಂಧಿಯನ್ ಯುಗ ಮತ್ತು ಅಸಹಕಾರ ಚಳವಳಿ (1920-1938)

ಈ ಹಂತದಲ್ಲಿ ಸತ್ಯಾಗ್ರಹ ಮತ್ತು ಅಹಿಂಸಾತ್ಮಕ ಹೋರಾಟಗಳು ಪ್ರಾಮುಖ್ಯತೆ ಪಡೆದವು.

ಗಾಂಧೀಜಿಯವರ ಕರ್ನಾಟಕ ಭೇಟಿ:
• ಬೆಳಗಾವಿ ಶೇಡಬಾಳ, ಹುದಲಿ ಮತ್ತು ಬೆಂಗಳೂರಿನ ಕೆಂಗೇರಿಗೆ ಭೇಟಿ.
• ನಂದಿ ಬೆಟ್ಟದಲ್ಲಿ ಗಾಂಧಿಯೊಂದಿಗೆ ಇದ್ದವರು: ನಿಟ್ಟೂರು ಶ್ರೀನಿವಾಸರಾವ್.
• ಹಾಸನ ಪ್ರವಾಸದಲ್ಲಿ ಗಾಂಧಿಯೊಂದಿಗೆ ಇದ್ದವರು: ಗೊರೂರು ರಾಮಸ್ವಾಮಿ ಅಯ್ಯಂಗಾರ್.

ಐತಿಹಾಸಿಕ ಘಟನೆಗಳು ಮತ್ತು INC ಪಾತ್ರ

1924 ಬೆಳಗಾವಿ ಅಧಿವೇಶನ • ಅಧ್ಯಕ್ಷತೆ ವಹಿಸಿದವರು: ಮಹಾತ್ಮ ಗಾಂಧಿ.
• ಸ್ವಾಗತ ಗೀತೆ ಹಾಡಿದವರು: ಗಂಗೂಬಾಯಿ ಹಾನಗಲ್.
1930 ಕಾನೂನು ಭಂಗ • ಉಪ್ಪಿನ ಸತ್ಯಾಗ್ರಹ: ಅಂಕೋಲಾದಲ್ಲಿ M.P. ನಾಡಕರ್ಣಿ ನೇತೃತ್ವದಲ್ಲಿ.
• ಅರಣ್ಯ ಸತ್ಯಾಗ್ರಹ: ಶಿರಸಿ ಮತ್ತು ಸಿದ್ದಾಪುರದಲ್ಲಿ N.B. ಕಬ್ಬೂರ ನೇತೃತ್ವದಲ್ಲಿ.
1938 ಶಿವಪುರ ಧ್ವಜ ಸತ್ಯಾಗ್ರಹ • ಅಧ್ಯಕ್ಷತೆ: ವೀ. ಸಿದ್ಧಲಿಂಗಯ್ಯ.
• ಆರಂಭಿಸಿದವರು: ಸುನಂದಮ್ಮ (ವಂದೇ ಮಾತರಂ ಗೀತೆ ಹಾಡುವುದರ ಮೂಲಕ).

ಕರ್ನಾಟಕದ ಜಲಿಯನ್ ವಾಲಾಬಾಗ್ ಮತ್ತು ಈಸೂರು ದುರಂತ

ವಿದುರಾಶ್ವತ್ಥ ದುರಂತ (ಏಪ್ರಿಲ್ 25, 1938)

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಉತ್ತರ ಪಿನಾಕಿನಿ ನದಿ ತೀರದಲ್ಲಿ 15,000 ಸತ್ಯಾಗ್ರಹಿಗಳ ಮೇಲೆ ಪೊಲೀಸರು ಗೋಲಿಬಾರ್ ನಡೆಸಿದರು. 32 ಜನರು ಸ್ಥಳದಲ್ಲೇ ಮರಣ ಹೊಂದಿದರು. ಇದನ್ನು ಕರ್ನಾಟಕದ ಜಲಿಯನ್ ವಾಲಾಬಾಗ್ ಎಂದು ಕರೆಯುತ್ತಾರೆ.

ಈಸೂರು ದುರಂತ (ಸೆಪ್ಟೆಂಬರ್ 29, 1942)

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಈಸೂರು ಗ್ರಾಮವು ಭಾರತ ಬಿಟ್ಟು ತೊಲಗಿ ಚಳವಳಿಯ ಸಂದರ್ಭದಲ್ಲಿ ದೇಶದಲ್ಲೇ ಸ್ವಾತಂತ್ರ್ಯ ಸಾರಿಕೊಂಡ ಪ್ರಥಮ ಗ್ರಾಮವಾಯಿತು. ಇದರಿಂದ 'ಮೈಸೂರು ಚಲೋ' ಚಳವಳಿ ಮತ್ತಷ್ಟು ವೇಗ ಪಡೆಯಿತು.

ಕರ್ನಾಟಕ ಏಕೀಕರಣ ಮತ್ತು ಪ್ರಮುಖ ಆಯೋಗಗಳು

ಏಕೀಕರಣಕ್ಕೂ ಮುಂಚೆ ಕರ್ನಾಟಕವು ವಿವಿಧ ಪ್ರತ್ಯೇಕ ಆಡಳಿತ ಪ್ರದೇಶಗಳಲ್ಲಿ ಹಂಚಿ ಹೋಗಿತ್ತು:

ಆಡಳಿತ ಪ್ರದೇಶಒಳಗೊಂಡಿದ್ದ ಜಿಲ್ಲೆಗಳು / ಪ್ರದೇಶ
ಮೈಸೂರು ಸಂಸ್ಥಾನಕೇವಲ 9 ಜಿಲ್ಲೆಗಳು ಮಾತ್ರ ಸೇರಿದ್ದವು.
ಮುಂಬೈ ಪ್ರಾಂತಉತ್ತರ ಕನ್ನಡ, ಧಾರವಾಡ, ವಿಜಯಪುರ, ಬೆಳಗಾವಿ.
ಹೈದರಾಬಾದ್ ಪ್ರಾಂತಬೀದರ್, ಕಲಬುರ್ಗಿ, ರಾಯಚೂರು.
ಮದ್ರಾಸ್ ಪ್ರಾಂತನೀಲಗಿರಿ, ದಕ್ಷಿಣ ಕನ್ನಡ, ಬಳ್ಳಾರಿ.
ಕೊಡಗು ಪ್ರಾಂತಬ್ರಿಟಿಷ್ ಚೀಫ್ ಕಮಿಷನರ್ ಅಡಿಯಲ್ಲಿತ್ತು.
ಇತರ ಪ್ರದೇಶಗಳುಕೊಲ್ಲಾಪುರ ಪ್ರಾಂತ (ರಾಯಬಾಗ್, ತೋರಣಗಲ್ಲ), ಮಿರಜ್ (ಲಕ್ಷ್ಮೇಶ್ವರ).
ನೆನಪಿಡಿ: ಕರ್ನಾಟಕ ಏಕೀಕರಣದ ಕಲ್ಪನೆ ನೀಡಿದವರು ಡೆಪ್ಯುಟಿ ಚೆನ್ನಬಸಪ್ಪ. ಏಕೀಕರಣದ ಶಿಲ್ಪಿ ಎಂದು ಆಲೂರು ವೆಂಕಟರಾಯರನ್ನು ಕರೆಯಲಾಗುತ್ತದೆ.

ಏಕೀಕರಣದಲ್ಲಿ ಸಂಘ ಸಂಸ್ಥೆಗಳ ಪಾತ್ರ

ಏಕೀಕರಣ ಸಮ್ಮೇಳನಗಳ ವಿವರ

ವರ್ಷಸ್ಥಳಅಧ್ಯಕ್ಷರು
1924ಬೆಳಗಾವಿಸಿದ್ದಪ್ಪ ಕಂಬಳಿ
1926ಬಳ್ಳಾರಿಚಿಕ್ಕೋಡಿ
1928ಧಾರವಾಡಪ.ಗು. ಹಳಕಟ್ಟಿ
1931ಹುಕ್ಕೇರಿಪಟ್ಟಾಭಿ ಸೀತಾರಾಮಯ್ಯ
1933ಧಾರವಾಡಬೆಳಗಾವಿ (ಪ್ರತಿನಿಧಿಗಳು)
1936ಬೆಳಗಾವಿರಾಮರಾವ್
1940ಸೊಲ್ಲಾಪೂರಡಾ. ನಾಗನಗೌಡ
1944ಧಾರವಾಡಹೆಗಡೆ
1946ಮುಂಬೈಬಿ. ಜಿ. ಕೇರ್
1947ಕಾಸರಗೋಡುಆರ್. ಆರ್. ದಿವಾಕರ

ಸಾಹಿತ್ಯ, ಗೀತೆಗಳು ಮತ್ತು ಪತ್ರಿಕೆಗಳ ಪಾತ್ರ

ಪ್ರಮುಖ ಕೃತಿಗಳು'ಕರ್ನಾಟಕ ಗತವೈಭವ' (ಆಲೂರು ವೆಂಕಟರಾಯರು), 'ಒಂದು ಮರೆತ ಸಾಮ್ರಾಜ್ಯ' (ರಾಬರ್ಟ್ ಸಿವೆಲ್), 'ಎಪಿಗ್ರಾಫಿಯ ಆಫ್ ಕರ್ನಾಟಿಕ' (ಬಿ.ಎಲ್. ರೈಸ್).
ಪ್ರಸಿದ್ಧ ಗೀತೆಗಳು'ತಾಯಿ ಬಾರೆ ಮೊಗವ ತೋರೆ' (ಗೋವಿಂದ ಪೈ), 'ಜೈ ಭಾರತ ಜನನೀಯ ತನುಜಾತೆ' (ಕುವೆಂಪು), 'ಏರಿಸಿ, ಹಾರಿಸಿ ಬಾವುಟ' (ಬಿ.ಎಂ.ಶ್ರೀ).
ಪತ್ರಿಕೆಗಳುವಾಗ್ಭೂಷಣ, ಜೈ ಕರ್ನಾಟಕ, ಕರ್ಮವೀರ, ಸತ್ಯಾಗ್ರಹಿ, ವೀರಕೇಸರಿ, ಕನ್ನಡನುಡಿ, ತಾಯಿನಾಡು, ಸಂಯುಕ್ತ ಕರ್ನಾಟಕ.

ಏಕೀಕರಣದ ಪ್ರಮುಖ ವ್ಯಕ್ತಿಗಳು

ಆಲೂರು ವೆಂಕಟರಾಯರು, ವಿ.ಪಿ. ಮಾಧವರಾವ್, ಕಡಪಾ ರಾಘವೇಂದ್ರ ರಾವ್, ಮಡವಿಡು ಕೃಷ್ಣರಾವ್, ಪಂಡಿತ ತಾರಾನಾಥರು, ಜಯದೇವಿತಾಯಿ ಲಿಗಾಡೆ, ಶಿವರಾಮ ಕಾರಂತ.

ಏಕೀಕರಣಕ್ಕಾಗಿ 15 ದಿನಗಳ ಕಾಲ ಆಮರಣ ಉಪವಾಸ ಕೈಗೊಂಡವರು: ಅಂದಾನಪ್ಪ ದೊಡ್ಡಮೇಟಿ.

ಪ್ರಮುಖ ಆಯೋಗಗಳು (1948 - 1956)

ರಾಜ್ಯದ ಪ್ರಮುಖ ರಾಜಕೀಯ ನಾಯಕರು

ಮೈಸೂರಿನ ಮೊದಲ ಮುಖ್ಯಮಂತ್ರಿಕೆ.ಸಿ. ರೆಡ್ಡಿ
ವಿಶಾಲ ಮೈಸೂರಿನ ಮೊದಲ ಮುಖ್ಯಮಂತ್ರಿಕೆಂಗಲ್ ಹನುಮಂತಯ್ಯ
ವಿಶಾಲ ಮೈಸೂರಿನ ಮೊದಲ ಚುನಾಯಿತ ಮುಖ್ಯಮಂತ್ರಿಎಸ್. ನಿಜಲಿಂಗಪ್ಪ
ಕರ್ನಾಟಕವೆಂದು ನಾಮಕರಣವಾದಾಗಿನ ಮುಖ್ಯಮಂತ್ರಿಡಿ. ದೇವರಾಜ ಅರಸು (1973)
KPSC Footer